ಬೆಂಗಳೂರಿನ ಪಬ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಲೈವ್
ಬೆಂಗಳೂರು, ಫೆ.14: ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಗಳನ್ನು ದೊಡ್ಡ ಪರದೆಯಲ್ಲಿ ನೋಡುತ್ತಾ ಬೀರು ಹೀರುವ ಮುಂಬೈನ ಗುಂಡುಪ್ರಿಯ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವುದು ಕಷ್ಟವಾಗಿದೆ. ಆದರೆ, ಪಬ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರಿನಲ್ಲಿ ವಿಶ್ವಕಪ್ ಕ್ರಿಕೆಟ್ ನ ನೇರ ಪ್ರಸಾರ ಮಾಡಲು ಪ್ರತಿಷ್ಠಿತ ಪಬ್, ರೆಸ್ಟೋರೆಂಟ್ ಗಳು ಸಿದ್ಧತೆ ನಡೆಸಿದೆ.
ಬೆಂಗಳೂರಿನ ಹಾರ್ಡ್ ರಾಕ್ ಕೆಫೆಯಲ್ಲಿ ಫೆ.19ರಿಂದ ದೊಡ್ಡ ಪರದೆಯಲ್ಲಿ ಕ್ರಿಕೆಟ್ ಲೈವ್ ನೋಡಿ ಆನಂದಿಸಬಹುದು. ರಿಯಾಯಿತಿ ದರದಲ್ಲಿ ಮದ್ಯ ಹೀರಬಹುದು. ನಿಮ್ಮ ನೆಚ್ಚಿನ ತಂಡದ ಗೆಲುವಿಗಾಗಿ ಚೀರಬಹುದು ಎಲ್ಲವೂ ಕ್ರಿಕೆಟ್ ನ ಹುಚ್ಚು ಅಭಿಮಾನಿಗಳಿಗೆ ಮಾತ್ರ!
ಬೌನ್ಸರ್, ಸಿಜಲಿಂಗ್ ಸಿಕ್ಸ್, ಥರ್ಡ್ ಅಂಪೈರ್, ಚಾಂಪಿಯನ್ ಅಥವಾ ಕಾಕ್ ಟೈಲ್ ಗಳಾದ ಸಿನ್ ಫುಲ್ ಡಕ್, ಸೆಕ್ಸ್ ಆನ್ ದ ಗ್ರೌಂಡ್, ನಾಕೌಟ್ ಹಾಗೂ ಮಾಸ್ಟರ್ ಬ್ಲಾಸ್ಟರ್ ವಿವಿಧ ಶ್ರೇಣಿಯ ಪೇಯಗಳು ಅಭಿಮಾನಿಗಳನ್ನು ಸಿದ್ಧವಾಗಿವೆ.
ವಿವಿಧ ಕೊಡುಗೆಗಳೊಂದಿಗೆ ಆನಂದಭರಿತರಾಗಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಬಹುದು. ತೆರಿಗೆ ಮೊತ್ತ ಸೇರಿ 999 ರು ನೀಡಿದರೆ ಹಾರ್ಡ್ ರಾಕ್ ಕೆಫೆ ನಿಮಗೆ ಬಾಗಿಲು ತೆಗೆದು ಸ್ವಾಗತಿಸುತ್ತದೆ.
ಸ್ನೇಹಿತರು ಹಾಗೂ ಕುಟುಂಬ ವರ್ಗದೊಡನೆ ಬಂದು ಮುಜುಗರವಿಲ್ಲದೆ, ನಮ್ಮ ಕೆಫೆಗೆ ಬಂದು ಕ್ರಿಕೆಟ್ ನೋಡಬಹುದು. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಬಹುದು ನೈಕಿ ಕ್ಯಾಪ್, ಟೀ ಶರ್ಟ್ ಸೇರಿದಂತೆ ಹಲವು ಬಹುಮಾನಗಳು ಕಾದಿವೆ. ಫೆ.19 ರಿಂದ ಏ.2 ರ ವರೆಗೂ ಹಾರ್ಡ್ ರಾಕ್ ಕೆಫೆಯಲ್ಲಿ ಕ್ರಿಕೆಟ್ ಬಿಟ್ಟರೆ ಬೇರೆ ಮಾತಿಲ್ಲ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080- 4124 2222 ಎಂದು ಜೆ ಎಸ್ ಎಂ ಕಾರ್ಪ್ ಪ್ರೈ. ಲಿನ ಉಪಾಧ್ಯಕ್ಷ ಅಮಿತ್ ಕೇಸ್ವಾನಿ ಹೇಳಿದ್ದಾರೆ.












Click it and Unblock the Notifications