ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಜಿಸ್ಯಾಟ್ 5ಪಿ ಉಪಗ್ರಹ ಉಡಾವಣೆ ವಿಫಲ

By Rajendra
|
Google Oneindia Kannada News

ISRO GSAT-5P launch fails
ಶ್ರೀಹರಿಕೋಟ, ಡಿ.25: ಶ್ರೀಹರಿಕೋಟಾ ರಾಕೆಟ್ ಉಡ್ಡಯನ ಕೇಂದ್ರದಿಂದಶನಿವಾರ (ಡಿ.25) ಸಂಜೆ ಉಡಾಯಿಸಿದ ಜಿಸ್ಯಾಟ್ 5ಪಿ ಉಪಗ್ರಹ ಕೆಲವೇ ಕ್ಷಣಗಳಲ್ಲಿ ವಿಫಲವಾಗಿದೆ. ಈ ಮೂಲಕ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ.

ಉಡಾವಣೆಯಾದ 20 ನಿಮಿಷಗಳಲ್ಲಿ ಭೂಸ್ಥಿರ ಕಕ್ಷೆಗೆ ಸೇರಬೇಕಾಗಿದ್ದ ಜಿಸ್ಯಾಟ್ 5ಪಿ ಉಪಗ್ರಹ ಹಾರಿದ 55 ಸೆಕೆಂಡುಗಳಲ್ಲಿ ಪತನವಾಯಿತು. ಈ ಮೂಲಕ ಇಸ್ರೋದ ರು.125 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನೆಡೆಯಾಗಿದೆ. ಜಿಎಸ್‌ಎಲ್‌ವಿ ಹೊತ್ತೊಯ್ದ ಉಪಗ್ರಹದ ತೂಕ 2,130 ಕೆಜಿಯಷ್ಟಿತ್ತು.

ಟೆಲಿಕಮ್ಯುನಿಕೇಷನ್ ಮತ್ತು ಹವಾಮಾನ ಇಲಾಖೆಗೆ ಜಿಸ್ಯಾಟ್ 5ಪಿ ಉಪಗ್ರಹದಿಂದ ಹೆಚ್ಚಿನ ಅನುಕೂಲವಾಗುತ್ತಿತ್ತು. ಜಿಎಸ್‌ಎಲ್‌ವಿ ರಾಕೆಟ್‌ನ ಎರಡನೇ ಹಂತದಲ್ಲಿ ಕಂಡುಬಂದ ತಾಂತ್ರಿಕ ದೋಷವೇ ವಿಫಲತೆಗೆ ಕಾರಣ ಎನ್ನಲಾಗಿದೆ. ಇಸ್ರೋದ ಪ್ರಯತ್ನ ಮತ್ತೊಮ್ಮೆ ವಿಫಲವಾಗಲು ಸೂಕ್ತ ಕಾರಣ ಏನು ಎಂಬುದು ಇನ್ನಷ್ಟೆ ಹೊರಬೀಳಬೇಕಾಗಿದೆ.

ಜಿಸ್ಯಾಟ್ 5ಪಿ ಉಪಗ್ರಹವು 13 ವರ್ಷಗಳ ಕಾಲ ಕಾರ್ಯ ನಿರ್ವಹಿಸುವಂತಿದ್ದು ಹಾಗೂ 36 ಟ್ರಾನ್ಸ್‌ಫಾಂಡರ್‌ಗಳನ್ನು ಒಳಗೊಂಡಿತ್ತು. ಶನಿವಾರ ಸಂಜೆ 4.04 ಗಂಟೆ ಉಡಾವಣೆಗೊಂಡ ರಾಕೆಟ್ 55 ಸೆಕೆಂಡುಗಳಲ್ಲಿ ಪತನಗೊಂಡಿದೆ. ಜಿಎಸ್‌ಎಲ್‌ವಿ ರಾಕೆಟ್ 51 ಅಡಿ ಎತ್ತರವಿದ್ದು 418 ಟನ್ ತೂಕವಿತ್ತು.

ಇದು ಇಸ್ರೋಗೆ ಆದ ಎರಡನೇ ಆಘಾತ. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಉಪಗ್ರಹ ಜಿಎಸ್ಎಲ್ ವಿ-ಡಿ3ಯ ಉಡಾವಣೆ ವಿಫಲವಾಗಿತ್ತು. [ಉಪಗ್ರಹ]

English summary
The launch of advanced communication satellite GSAT-5P failed due to major technical fault in the first phase.The launch vehicle (GSLV) exploded mid-air moments after it took off from the Sriharikota rocket launch centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X