ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎಎಲ್ ಗೆ ಕೆಂಪೇಗೌಡ ಹೆಸರು: ಆರ್ ಅಶೋಕ

By Mahesh
|
Google Oneindia Kannada News

BIA to be named after Kempegowda
ಬೆಂಗಳೂರು, ಡಿ. 16: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎ)ಕ್ಕೆ ಬೆಂದಕಾಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದನೆಗೆ ಕಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರ್ ಅಶೋಕ ತಿಳಿಸಿದ್ದಾರೆ. ಡಾ ಹೇಮಚಂದ್ರ ಸಾಗರ್ ನೇತೃತ್ವದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಂಟಿ ಸದನ ಪರಿಶೀಲನಾ ಸಮಿತಿ ಸಲ್ಲಿಸಿದ್ದ ವರದಿಯ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ.

ಜಂಟಿ ಸದನ ಸಮಿತಿಯ ವರದದಿಯಂತೆ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಒದಗಿಸುವುದು ಮತ್ತು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕುವುದು ಹಾಗೂ ಎಚ್ಎಎಲ್ ನಿಲ್ದಾಣಕ್ಕೆ ಮರುಚಾಲನೆ ನೀಡುವುದರ ಬಗ್ಗೆ ಕೂಡಾ ಚಿಂತನೆ ನಡೆದಿದೆ ಎಂದು ಸಚಿವ ಅಶೋಕ್ ಹೇಳಿದರು.

ನಾಡಪ್ರಭು ಕೆಂಪೇಗೌಡ ಅವರ 500ನೇ ಜಯಂತಿಯನ್ನು 5 ಕೋಟಿ ರು ವೆಚ್ಚದಲ್ಲಿ ಆಚರಿಸಲಾಗುವುದು. ಕರಗದ ದಿನ ಅಥವಾ ಮುಂಚಿತವಾಗಿ ಪ್ರತಿ ವಾರ್ಡ್ ನಲ್ಲೂ ಕೆಂಪೇಗೌಡ ಜಯಂತಿ ಆಚರಿಸಲು ಸೂಚಿಸಲಾಗುವುದು. ಕೆಂಪೇಗೌಡರ ಹಿರಿಮೆಯನ್ನು ಎಲ್ಲರಿಗೂ ಸಾರಲು ಸಮಿತಿಯನ್ನು ರಚಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ. ಬೆಂಗಳೂರು ನಿರ್ಮಾತೃ ಕೇಂಪೇಗೌಡರ ಸಮುದಾಯದವನು ನಾನು ಎನ್ನುವ ಬಗ್ಗೆ ನನಗೆ ಹೆಮ್ಮೆ ಮತ್ತು ಗೌರವವಿದೆ ಎಂದು ಭೂಮಿ ಬಳಗ ಟ್ರಸ್ಟ್ ಹಮ್ಮಿಕೊಂಡಿದ್ದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಅಶೋಕ್ ತಿಳಿಸಿದರು.

English summary
Karnata Cabinet has approved the Dr.Hema Chandra Sagar lead Karnataka Joint legislative committee recommendation of naming Bangalore International Airport (BIAL) after Kempegowda said Home minister R Ashoka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X