BLR Metaport: ವಿಶ್ವದಲ್ಲೇ ಮೊದಲ ಬಾರಿಗೆ KIA ಟರ್ಮಿನಲ್ 2 ಅನ್ನು ಮೆಟಾವರ್ಸ್‌ನಲ್ಲಿ ಕಣ್ತುಂಬಿಕೊಳ್ಳಿ
ಬೆಂಗಳೂರು, ಡಿಸೆಂಬರ್ 13: ವಿಶ್ವದಲ್ಲೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ದ ಟರ್ಮಿನಲ್ 2ರಲ್ಲಿ ಹೊಸದಾಗಿ ಮೆಟಾವರ್ಸ್ ವರ್ಚುವಲ್ ರಿಯಾಲಿಟಿ 3D ಅನುಭವ ನೀಡುವ 'ಬಿಎಲ್‌ಆರ್ ಮೆಟಾಫೋರ್ಟ್' ವ್ಯವಸ್ಥೆ ಆರಂಭವಾಗಿದೆ. ಇದರಿಂದ ಪ್ರಯಾಣಿಕರು ನೀವಿದ್ದ ಸ್ಥಳದಿಂದಲೇ ಟರ್ಮಿನಲ್ 2 ಅನ್ನು ವಾಸ್ತವದಲ್ಲಿ ನೀವು ಟರ್ಮಿನಲ್ ಒಳಗೇ ಇರುವಂತೆ ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರಯಾಣಿಕರು ಇನ್ನು ಮುಂದೆ ಆನ್‌ಲೈನ್ ಮೂಲಕ ಸ್ಮಾರ್ಟ್‌ಫೋನ್‌ನಲ್ಲೇ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಮೆಟಾವರ್ಸ್ ಅನುಭವ ಹೊಂದಬಹುದು. ಟರ್ಮಿನಲ್‌ನ ಮೂರು ಕಡೆಗಳಲ್ಲಿ ಈ 3D ಸೇವೆ ಲಭ್ಯವಿದ್ದು, ಯೋಜನೆಯ ಮೊದಲ ಹಂತ ಮಂಗಳವಾರ ಆರಂಭವಾಗಿದೆ.
ಏನಿದು ಮೆಟಾವರ್ಸ್- ಮೆಟಾಪೋರ್ಟ್?
'ಮೆಟಾವರ್ಸ್' ಎಂದರೆ ವರ್ಧಿತ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನದ ಮೂಲಕ ಸ್ಥಳದ ವಾಸ್ತವವನ್ನು ಅನಭವಕ್ಕೆ ಬರುವಂತೆ, ವ್ಯಕ್ತಿಗಳೇ ಆ ಸ್ಥಳದಲ್ಲಿದ್ದ ರಿಯಲಿಸ್ಟಿಕ್ ಆಗಿ 3D ರೂಪದಲ್ಲಿ ತೋರಿಸುವುದಾಗಿದೆ. ಇಲ್ಲಿ ಸಂವಾದಕ್ಕೆ ಅವಕಾಶ ಇರಲಿದೆ. ಇಂತಹ ತಂತ್ರಜ್ಞಾನವನ್ನು ಈ ನೂತನ ಟರ್ಮಿನಲ್‌ನಲ್ಲಿ ಬಳಸಲಾಗಿದೆ. ಈ ವ್ಯಸಸ್ಥೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಳವಡಿಸಿದ್ದರಿಂದ 'ಬಿಎಲ್‌ಆರ್ ಮೆಟಾಫೋರ್ಟ್' ಎಂದು ಕರೆಯಲಾಗುತ್ತಿದೆ ಬಿಐಎಎಲ್ ತಿಳಿಸಿದೆ.

ಟರ್ಮಿನಲ್ 2ರಲ್ಲಿ ಈ ಮೆಟಾವರ್ಸ್ ಸೇವೆಯನ್ನು ಅಮೆಜಾನ್ ವೆಬ್ ಸೇವೆಗಳು (AWS) ಮತ್ತು ಪಾಲಿಗಾನ್ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಇದನ್ನು ಪ್ರಯಾಣಿಕರು ಮತ್ತು ಆಸಕ್ತರು http://www.blrmetaport.com ಲಿಂಕ್‌ನಲ್ಲಿ ಲಾಗ್ ಇನ್ ಆಗಿ ಫೋನ್ ಅಥವಾ ಇತರ ಸ್ಮಾರ್ಟ್ ಸಾಧನಗಳನ್ನು ಬಳಸಿ ಮೆಟಾವರ್ಸ್ ಅನುಭವ ಪಡೆಯಬಹುದು. ಇದರಿಂದ ಹೊಸ ಟರ್ಮಿನಲ್ ಸ್ವತಃ ನೀವೆ ಅಲ್ಲಿಗೆ ಹೋಗಿ ವಾಸ್ತವದಲ್ಲೇ ಸಂಚರಿಸಿದ್ದೇವೆಯೇ ಎಂಬ ಅನುಭವ ಹೊಂದಲು ಸಾಧ್ಯವಾಗುತ್ತದೆ.
ಬಿಎಲ್‌ಆರ್ ಮೆಟಾಫೋರ್ಟ್‌ನಡಿ ವಿವಿಧ ಸೇವೆ
ಬಿಐಎಎಲ್ ಹೇಳುವ ಪ್ರಕಾರ, ಈ ಮೆಟಾವರ್ಸ್ 3D ತಂತ್ರಜ್ಞಾನ ಬಳಕೆಯಿಂದ ಗ್ರಾಹಕರು ನಿಲ್ದಾಣದ ಸಿಬ್ಬಂದಿ ಜೊತೆ ಸಂವಹನ ಮಾಡಬಹದು. ವಿಮಾನಗಳನ್ನು ಪರಿಶೀಲಿಸುವುದು, ಟರ್ಮಿನಲ್ ಒಳಗೆ ಸಂಚಾರ, ಶಾಪಿಂಗ್ ಜೊತೆಗೆ ಇತರ ಪ್ರಯಾಣಿಕರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

'ಬಿಎಲ್‌ಆರ್ ಮೆಟಾಫೋರ್ಟ್' ವಿಕೇಂದ್ರೀಕರಣದ ಅಂಶಗಳ ಆಧಾರದಲ್ಲಿ ಟರ್ಮಿನಲ್‌ನಲ್ಲಿ ನಿರ್ಮಿಸಲಾಗಿದೆ. ಇದು ಬಿಎಲ್ ಆರ್ ಮೆಟಾಫೋರ್ಟ್‌ನಲ್ಲಿರುವ ಡಿಜಿಟಲ್ ಕಲಾಕೃತಿ, ವಿವಿಧ ಉದ್ಯಮ-ಸಂಬಂಧಿತ ತರಬೇತಿ ಕೋರ್ಸ್ ಪೂರ್ಣಗೊಳಿಸುವುದು ಸೇರಿದಂತೆ ಇನ್ನಿತರ ಡಿಜಿಟಲ್ ಸ್ವತ್ತುಗಳನ್ನು ವ್ಯಾಪಾರಕ್ಕೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರಾಹಕರು ವಿವಿಧ ಬ್ರಾಂಡ್‌ಗಳನ್ನು ಖರೀದಿಗೆ ಅವಕಾಶ ಮಾಡಿಕೊಡುವ ಗುರಿ ಹೊಂದಿದ್ದೇವೆ ಎಂದು ಬಿಐಎಎಲ್ ತಿಳಿಸಿದೆ.












Click it and Unblock the Notifications