ರಕ್ತ ಚಂದನ ಅಕ್ರಮ ಸಾಗಣೆ, BIAL ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಕೇಸ್
ಬೆಂಗಳೂರು, ಡಿ. 29: ರಕ್ತ ಚಂದನ ಮಾಫಿಯಾ ಕುರಿತು ನಟ ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ; ಸಿನಿಮಾ ದಾಖಲೆಗಳನ್ನು ಪುಡಿ ಮಾಡುತ್ತಿದೆ. ರಕ್ತ ಚಂದನವನ್ನು ವಿದೇಶಗಳಿಗೆ ರಫ್ತು ಮಾಡಲು ದಂಧೆಕೋರರ ಜತೆ ಶಾಮೀಲಾಗಿರುವ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಫಿಯಾ ನಿಯಂತ್ರಣ ಹಾಕಬೇಕಿದ್ದ ಕಸ್ಟಮ್ಸ್ ಅಧಿಕಾರಿಗಳೇ ಇದೀಗ ರಕ್ತ ಚಂದನ ಅಕ್ರಮ ಸಾಗಣೆ ಕೇಸಲ್ಲಿ ಸಿಬಿಐ ತನಿಖೆಗೆ ಒಳಪಟ್ಟಿದ್ದಾರೆ. ಬಹು ಬೇಡಿಕೆ ರಕ್ತ ಚಂದನ ಸಾಗಣೆ ದಂಧೆಯ ಸ್ಟೋರಿ ಇಲ್ಲಿದೆ ನೋಡಿ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶೇಷಾಚಲಂ ಅರಣ್ಯದಲ್ಲಿ ಬಹು ಬೇಡಿಕೆ ರಕ್ತ ಚಂದನ ಮರಗಳಿವೆ. ವೈದ್ಯಕೀಯ ಗುಣವುಳ್ಳ ಈ ಮರಗಳಿಗೆ ಚೀನಾ ಮತ್ತು ಜಪಾನ್‌ನಲ್ಲಿ ಬಹು ಬೇಡಿಕೆ. ಹೀಗಾಗಿ ಈ ಮರಗಳನ್ನು ಕದ್ದು ವಿದೇಶಕ್ಕೆ ಸಾಗಣೆ ಮಾಡುವ ದೊಡ್ಡ ಜಾಲವೇ ಇದೆ. ತಮಿಳುನಾಡು- ಕರ್ನಾಟಕ- ಆಂಧ್ರ ಪ್ರದೇಶ ಮೂರು ರಾಜ್ಯಗಳ ಜನರು ಸೇರಿ ಮಾಡುವ ಈ ದಂಧೆಯ ಸುತ್ತ ಕತೆ ಹೆಣೆದು ಪುಷ್ಪ ಸಿನಿಮಾ ನಿರ್ಮಿಸಲಾಗಿದೆ. ರಕ್ತ ಚಂದನ ದಂಧೆ ಮಾಡಿದವರು ಆಂಧ್ರಪ್ರದೇಶದಲ್ಲಿ ಡಾನ್ ಗಳಾಗಿ ರೂಪಾಂತರಗೊಂಡ ಉದಾರಣೆಗಳಿವೆ. ರಕ್ತ ಚಂದನ ದಂಧೆ ಮಾಡುವರು ಆಂಧ್ರದವರು ಆದ್ರೆ, ಅರಣ್ಯಕ್ಕೆ ಹೋಗಿ ರಕ್ತ ಚಂದನ ಮರಗಳನ್ನು ಕದಿಯುವರು ತಮಿಳುನಾಡು ಮೂಲದವರು. ಹೀಗೆ ಕದ್ದ ಮರಗಳನ್ನು ಗಡಿಗಳನ್ನು ದಾಟಿ ವಿಮಾನ ನಿಲ್ದಾಣಗಳಿಗೆ ಸಾಗಿಸುವ ಜಾಲ ಕರ್ನಾಟಕದ್ದು. ಹೀಗಾಗಿ ಮೂರು ರಾಜ್ಯದ ಜನರು ಸೇರಿ ಹುಟ್ಟಿ ಹಾಕಿರುವ ರಕ್ತ ಚಂದನ ಮಾರಾಟ ದಂಧೆಯ ಹಿನ್ನೆಲೆ. ಈ ದಂಧೆಯ ಹೊಸ ಸಂಗತಿಯನ್ನು ಇದೀಗ ಸಿಬಿಐ ಪೊಲೀಸರು ಹೊರ ಹಾಕಿದ್ದಾರೆ.
ಅಕ್ರಮವಾಗಿ ವಿದೇಶಗಳಿಗೆ ರಕ್ತ ಚಂದನ ಸಾಗಣೆ ಮಾಡುವ ದಂಧೆಕೋರರ ಜತೆ ಶಾಮೀಲಾದ ಆರೋಪ ಸಂಬಂಧ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಖಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಳೆದ ಜೂನ್ ಮತ್ತು ಜುಲೈನಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಣೆಗೆ ಕಸ್ಟಮ್ಸ್ ಅಧಿಕಾರಿಗಳು ಸಹಕಾರ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮಾಹಿತಿ ಬೆನ್ನಲ್ಲೇ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿ, 3293 ಕೆ.ಜಿ. ತೂಕದ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದರು. ಪರವಾನಗಿ ಇಲ್ಲದೇ ಅಕ್ರಮ ಸಾಗಣೆ ಪತ್ತೆ ಮಾಡಿದ್ದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಬಿಐ ಎಸಿಬಿ ಘಟಕದ ಅಧಿಕಾರಿಗಳು ತನಿಖೆ ನಡೆಸಿದಾಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಏರ್ ಕಾರ್ಗೋ ಕಸ್ಟಮ್ಸ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧೀಕ್ಷಕರು ಮತ್ತು ಇನ್‌ಸ್ಪೆಕ್ಟರ್ ಹಣ ಪಡೆದು ರಕ್ತ ಚಂದನ ಅಕ್ರಮ ಸಾಗಣೆಗೆ ಅವಕಾಶ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಕಸ್ಟಮ್ಸ್ ಅಧೀಕ್ಷಕರು ಮತ್ತು ಇನ್‌ಸ್ಪೆಕ್ಟರ್ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.

ಕಸ್ಟಮ್ಸ್ ಸೂಪರಿಡೆಂಟ್ ವೆಂಕಟೇಶ್, ಅನಂತಪದ್ಮನಾಭ ಹಾಗೂ ಇನ್‌ಸ್ಪೆಕ್ಟರ್ ಅರವಿಂದ ಪವಾರ್ ವಿರುದ್ಧ ರಕ್ತ ಚಂದನ ಕಳ್ಳ ಸಾಗಣೆಗೆ ಅವಕಾಶ ಕೊಟ್ಟು ಲಂಚ ಪಡೆದ ಅರೋಪ ಹೊರಿಸಲಾಗಿದೆ. ಈ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಅಕ್ರಮ ಜಾಲ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಕಳ್ಳ ಸಾಗಣೆಗೆ ಸಹಕರಿಸುತ್ತಿದ್ದ ಅಧಿಕಾರಿಗಳ ಪಾಲಿಗೆ ಮುಳುವಾಗಲಿದೆ.
Recommended Video
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications