ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2011ರಲ್ಲಿ ಬರುವ ಸರಕಾರಿ ರಜಾದಿನಗಳ ಪಟ್ಟಿ

By Prasad
|
Google Oneindia Kannada News

List of holidays 2011
ಬೆಂಗಳೂರು, ಡಿ. 04 : 2011ನೇ ವರ್ಷಕ್ಕೆ ಕಾಲಿಡುವುದಕ್ಕೆ ಇನ್ನೂ ಕೆಲ ದಿನಗಳಿರುವಾಗ ರಾಜ್ಯದ ಸಕಲ ಸರಕಾರಿ ನೌಕರರು ಕುತೂಹಲದಿಂದ ಕಾಯುತ್ತಿರುವ ಸರಕಾರಿ ರಜಾದಿನಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಸಾರ್ವತ್ರಿಕ ರಜಾದಿನಗಳು ಮತ್ತು ಪರಿಮಿತ ರಜಾದಿನಗಳ ಸಂಪೂರ್ಣ ವಿವರ ಕೆಳಗಿನಂತಿದೆ.

ಸಾರ್ವತ್ರಿಕ ರಜಾ ದಿನಗಳು

ಜನವರಿ 15 ಶನಿವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಜನವರಿ 26 ಬುಧವಾರ, ಗಣರಾಜ್ಯೋತ್ಸವ
ಫೆಬ್ರವರಿ 16 ಬುಧವಾರ, ಈದ್ ಮಿಲಾದ್
ಮಾರ್ಚ್ 2 ಬುಧವಾರ, ಮಹಾಶಿವರಾತ್ರಿ
ಏಪ್ರಿಲ್ 4 ಸೋಮವಾರ, ಚಾಂದ್ರಮಾನ ಯುಗಾದಿ
ಏಪ್ರಿಲ್ 14 ಗುರುವಾರ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಸೌರಮಾನ ಯುಗಾದಿ
ಏಪ್ರಿಲ್ 16 ಶನಿವಾರ, ಮಹಾವೀರ ಜಯಂತಿ
ಏಪ್ರಿಲ್ 22 ಶುಕ್ರವಾರ, ಗುಡ್‌ಫ್ರೈಡೆ
ಮೇ 6 ಶುಕ್ರವಾರ, ಬಸವ ಜಯಂತಿ
ಆಗಸ್ಟ್ 15 ಸೋಮವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 31 ಬುಧವಾರ, ಕುತುಬ್-ಎ-ರಂಜಾನ್, ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 1 ಗುರುವಾರ, ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 27 ಮಂಗಳವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 5 ಬುಧವಾರ, ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 6 ಗುರುವಾರ, ವಿಜಯದಶಮಿ
ಅಕ್ಟೋಬರ್ 11 ಮಂಗಳವಾರ, ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 25 ಮಂಗಳವಾರ, ನರಕಚತುರ್ದಶಿ
ಅಕ್ಟೋಬರ್ 27 ಗುರುವಾರ, ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1 ಮಂಗಳವಾರ, ಕನ್ನಡ ರಾಜ್ಯೋತ್ಸವ
ನವೆಂಬರ್ 7 ಸೋಮವಾರ, ಬಕ್ರೀದ್
ನವೆಂಬರ್ 14 ಸೋಮವಾರ, ಕನಕದಾಸ ಜಯಂತಿ
ಡಿಸೆಂಬರ್ 6 ಮಂಗಳವಾರ, ಮೊಹರಂ ಕಡೇ ದಿನ

ಸೂಚನೆ : ರಜೆ ಪಟ್ಟಿಯು ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಮಹಾತ್ಮಾ ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್‌ಮಸ್ (ಡಿಸೆಂಬರ್ 25) ರಜಾ ದಿನಗಳನ್ನೊಳಗೊಂಡಿರುವುದಿಲ್ಲ.

ಪರಿಮಿತ ರಜಾ ದಿನಗಳ ಪಟ್ಟಿ

ಜನವರಿ 1 ಶನಿವಾರ, ನೂತನ ವರ್ಷಾರಂಭ
ಮಾರ್ಚ್ 19 ಶನಿವಾರ, ಹೋಳಿ ಹಬ್ಬ
ಏಪ್ರಿಲ್ 8 ಶುಕ್ರವಾರ, ದೇವರ ದಾಸಿಮಯ್ಯ ಜಯಂತಿ
ಏಪ್ರಿಲ್ 12 ಮಂಗಳವಾರ, ಶ್ರೀ ರಾಮನವಮಿ
ಏಪ್ರಿಲ್ 23 ಶನಿವಾರ, ಹೋಲಿಸ್ಯಾಟರ್‌ಡೇ
ಮೇ 7 ಶನಿವಾರ, ರಾಮಾನುಜ ಜಯಂತಿ
ಮೇ 17 ಮಂಗಳವಾರ, ಬುದ್ಧ ಪೂರ್ಣಿಮಾ
ಆಗಸ್ಟ್ 12 ಶುಕ್ರವಾರ, ಶ್ರೀ ವರಮಹಾಲಕ್ಷ್ಮಿ ವ್ರತ
ಆಗಸ್ಟ್ 26 ಶುಕ್ರವಾರ, ಜಮ್-ಉಲ್-ವಿದಾ
ಸೆಪ್ಟೆಂಬರ್ 9 ಶುಕ್ರವಾರ, ತಿರುಓಣಂ
ಸೆಪ್ಟೆಂಬರ್ 17 ಶನಿವಾರ, ವಿಶ್ವಕರ್ಮ ಜಯಂತಿ
ಅಕ್ಟೋಬರ್ ಮಂಗಳವಾರ, ತುಲಾ ಸಂಕ್ರಮಣ
ನವೆಂಬರ್ 10 ಗುರುವಾರ, ಗುರುನಾನಕ್ ಜಯಂತಿ
ಡಿಸೆಂಬರ್ 24 ಶನಿವಾರ, ಕ್ರಿಸ್‌ಮಸ್ ಈವ್

ಸೂಚನೆ : ಈ ರಜಾ ಪಟ್ಟಿಯು ಭಾನುವಾರದ ರಜಾ ದಿನಗಳಂದು ಬರುವ ಶ್ರಿ ಶಂಕರ ಜಯಂತಿ (ಮೇ 8), ಷಬ್-ಎ-ಬರಾತ್ (ಜುಲೈ 17), ಬ್ರಹ್ಮಶ್ರೀ ನಾರಾಯನಗುರುಜೀ ಜಯಂತಿ (ಆಗಸ್ಟ್ 14), ಶ್ರೀ ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 21) ಮತ್ತು ಷಬ್-ಎ-ಖಾದರ್ (ಆಗಸ್ಟ್ 28), ಹಾಗೆಯೇ ಎರಡನೇ ಶನಿವಾರದಂದು ಬರುವ ಶ್ರೀ ಮಧ್ವನವಮಿ (ಫೆಬ್ರವರಿ 2), ಋಜುರ್ ಉಪಕರ್ಮ (ಆಗಸ್ಟ್ 13), ಅನಂತ ಪದ್ಮನಾಭ ವ್ರತ (ಸೆಪ್ಟೆಂಬರ್ 10) ಮತ್ತು ಹುತ್ತರಿ ಹಬ್ಬ (ಡಿಸೆಂಬರ್ 10) ಒಳಗೊಂಡಿರುವುದಿಲ್ಲ.

ಪ್ರತಿ ವರ್ಷ ಸೌರಮಾನ ಸಿಂಹಮಾಸ ಶತಭಿಷ ನಕ್ಷತ್ರ, ಚತುರ್ದಶಿಯಂದು ಬ್ರಹ್ಮಶ್ರೀ ನಾರಾಯಣ ಗುರುಜೀ ಜಯಂತಿ ಬರುವುದರಿಂದ ಆ ದಿನವನ್ನು ನಿರ್ಬಂಧಿತ ರಜೆಯಾಗಿ ಘೋಷಿಸಿದೆ.

English summary
Karnataka state govt has announced list of holidays for the government workers for the year 2011. Here are the list of public holidays and restricted holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X