ಮುಂಬೈನಲ್ಲಿ ಚಿನ್ನದ ದರ ಮತ್ತೆ ಏರಿಕೆ
ಮುಂಬೈ,
ಡಿ.1: ಮಂಗಳವಾರದ ಚಿನಿವಾರ ಪೇಟೆ ವಹಿವಾಟಿನಲ್ಲಿ ಚಿನ್ನದ ವ್ಯಾಪಾರ ಜೋರಾಗಿದ್ದರೆ, ಬೆಳ್ಳಿ ಯಾಕೋ ಕೊಂಚ ಮಂಕಾಗಿತು. ಚಿನ್ನದ ದರ ರೂ 150 ಏರಿಕೆಯಾಗಿ 10 ಗ್ರಾಂಗೆ ದಾಖಲೆ ಮಟ್ಟ ಏರಿ ರೂ 20,820 ತಲುಪಿತು. id="toptextpromo">ಮದುವೆ,
ಮುಂತಾದ ಶುಭಕಾರ್ಯಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತೆ ಹೆಚ್ಚಿದೆ. ಬೆಳ್ಳಿ ಧಾರಣೆ ಕೂಡ ದಾಖಲೆ ಮಟ್ಟದ ಆಸುಪಾಸಿನಲ್ಲೇ ಇದ್ದು, ಮಂಗಳವಾರ ಕೆಜಿಗೆ ರೂ 450 ಏರಿಕೆಯಾಗಿ ರೂ 42,350 ತಲುಪಿದೆ. ಆದರೆ, ಬೆಳ್ಳಿ ದರ ನಿರೀಕ್ಷಿತ ಮಟ್ಟ ಏರಿಲ್ಲ ಎನ್ನುತ್ತಾರೆ ಮುಂಬೈನ ವರ್ತಕರು. id='are-slot-1' class='oiad oi-axt oiadv'> id='top-searched-articles'>99.9
ಮತ್ತು 99.5 ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ತಲಾ ರೂ 150 ಹೆಚ್ಚಿ ಕ್ರಮವಾಗಿ ರೂ 20,820 ಮತ್ತು ರೂ 20,700ಕ್ಕೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡಾ ಚಿನ್ನದ ದರ ಏರಿಕೆ ಕಂಡಿದ್ದು, ಯುರೋ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿದೆ. ಈ ನಡುವೆ ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸ ಮಳಿಗೆ ಆರಂಭಿಸಿದ ಮಣ್ಣಪ್ಪುರಂ ಜ್ಯೂವೆಲ್ಲರ್ಸ್ ವ್ಯಾಪಾರ ಜೋರಾಗಿದೆ ಎಂದು ಹೇಳಿದೆ.











Click it and Unblock the Notifications