ಒಬಾಮಾ ನಟರಾಜ ನೃತ್ಯಭಂಗಿ ಚಿತ್ರಕ್ಕೆ ಹಿಂದೂಗಳ ಕಿಡಿ

Obama as Nataraja
ವಾಷಿಂಗ್ಟನ್, ನ.26‌: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ನರ್ತಿಸುವ ನಟರಾಜನ ದೇವರ ರೂಪದಲ್ಲಿ ಅಮೆರಿಕದ ಸುದ್ದಿ ಮ್ಯಾಗಜಿನ್‌ ನ್ಯೂಸ್‌ವೀಕ್‌ನ ಮುಖಪುಟದಲ್ಲಿ ಚಿತ್ರಿಸಿದೆ. ನ್ಯೂಸ್ ವೀಕ್ ನ ಈ ವರ್ತನೆಗೆ ಹಿಂದೂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

2010 ರ ನವೆಂಬರ್‌ 22 ರ ನ್ಯೂಸ್‌ವೀಕ್‌ ಸಂಚಿಕೆಯಲ್ಲಿ ಹಲವು ಕೈಗಳುಳ್ಳ ಒಬಾಮಾ ಅವರ ವ್ಯಂಗ್ಯಚಿತ್ರವನ್ನು ಮುದ್ರಿಸಲಾಗಿದ್ದು, ಹಿಂದೂಗಳ ಆರಾಧ್ಯದೇವ ಶಿವ(ನಟರಾಜ)ನ ತಾಂಡವ ನೃತ್ಯವನ್ನು ಅಣಕಿಸುವ ರೀತಿಯಲ್ಲಿ ಎಡಗೈಯನ್ನು ಮೇಲಕ್ಕೆತ್ತಿ ನೃತ್ಯ ಮಾಡುವ ಭಂಗಿಯಲ್ಲಿ ಈ ಚಿತ್ರವಿದೆ.

ಹಿಂದೂಗಳ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ನ್ಯೂಸ್‌ವೀಕ್‌ ಇಂಥ ವ್ಯಂಗ್ಯಚಿತ್ರವನ್ನು ಪ್ರಕಟಿಸಿದೆ ಎಂಬುದನ್ನು ಸ್ಥಳೀಯ ಹಿಂದೂ ನಾಯಕರು ಒಪ್ಪದಿದ್ದರೂ, ಹಿಂದೂ ಚಿಹ್ನೆಗಳು ಹಾಗೂ ದೇವತೆಗಳನ್ನು ಟೀಕಿಸುವ ರೀತಿಯಲ್ಲಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸುತ್ತಿರುವ ನಿಯತಕಾಲಿಕೆಗಳ ಪ್ರವೃತ್ತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ನ್ಯೂಸ್‌ವೀಕ್‌ ಮ್ಯಾಗಜಿನ್‌ನ ಇತ್ತೀಚಿನ ಸಂಚಿಕೆಯನ್ನು ನಿಷೇಧಿಸುವಂತೆ ಮಲೇಶಿಯಾ ಸರಕಾರವನ್ನು ಮಲೇಶಿಯದ ಹಿಂದೂ ಸಂಘಟನೆ ಆಗ್ರಹಿಸಿದೆ. ಹಿಂದೂ ದೇವರನ್ನು ಅಣಕಿಸುವ ರೀತಿಯಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿರುವ ನಿಯತಕಾಲಿಕೆ ತನ್ನ ಈ ಕೃತ್ಯಕ್ಕೆ ಸಮಸ್ತ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಮಲೇಶಿಯಾ ಹಿಂದೂ ಸಂಗಮದ ನಾಯಕ ಪಿ. ಮುರುಗಯ್ಯ ಹೇಳಿದ್ದಾರೆ.

ಒಬಾಮಾ ಕಾಸ್ಮಿಕ್ ಡಾನ್ಸ್ : ನ್ಯೂಸ್ ವೀಕ್ ನ ಈ ತರಲೆ ವಿರುದ್ಧ ಅಮೆರಿಕದ ಹಿಂದೂ ಫೌಂಡೇಷನ್(HAF) ಕೂಡಾ ಕಿಡಿ ಕಾರಿದೆ. ನ್ಯೂಸ್ ವೀಕ್ ನ ಮುಖಪುಟದಲ್ಲಿ ನೃತ್ಯ ಭಂಗಿಯಲ್ಲಿರುವ ಒಬಾಮಾ ಕೈಲಿ ಹಣ, ಹೆಲಿಕಾಪ್ಟರ್, ಮನೆ, ಪಾರಿವಾಳ, ಗಡಿಯಾರ ಹಾಗೂ ಗ್ಲೋಬ್ ಇದ್ದು, ನಟರಾಜ ಮೂರ್ತಿಯ ನಕಲಿನಂತಿದೆ. "God of All Things" ಎಂಬ ಅಡಿ ಬರಹ ಕೂಡಾ ನೀಡಲಾಗಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+