ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋ ಇರುವುದು ಮಾಲ್‌ಗ‌ಳಿಗಾಗಿ ಅಲ್ಲ

By Mahesh
|
Google Oneindia Kannada News

BMRCL commuters to get smart cards
ಬೆಂಗಳೂರು, ಸೆ.28: ಜನವರಿಯಲ್ಲಿ 'ನಮ್ಮ ಮೆಟ್ರೋ'ದ ಸುರಂಗ ಮಾರ್ಗಗಳ ಕಾಮಗಾರಿಗಳು ಆರಂಭವಾಗಲಿವೆ ಎಂದು ಮೆಟ್ರೋ ರೈಲು ಕಾರ್ಪೊರೇಷನ್‌ ವ್ಯವಸ್ಥಾಪಕ ನಿರ್ದೇಶಕ ಎನ್‌. ಶಿವಶೈಲಂ ಹೇಳಿದರು.

ಮೆಟ್ರೋ ಹಾದು ಹೋಗುವ ದಾರಿಯಲ್ಲಿ ಕೆಲವೆಡೆ ಶಾಪಿಂಗ್‌ ಮಾಲ್‌ಗ‌ಳು ಇರುವುದರ ಕುರಿತು ಮತ್ತು ಪ್ರಮುಖ ಶಾಪಿಂಗ್‌ ಮಾಲ್‌ಗ‌ಳು ಇರುವ ಕಡೆ ಮೆಟ್ರೋ ಸಂಚರಿಸಿದ್ದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಆಗುತ್ತಿತ್ತು ಎನ್ನುವ ಪ್ರಸ್ತಾಪ ಬಂದಾಗ 'ಮೆಟ್ರೋ ಇರುವುದು ಮಾಲ್‌ಗ‌ಳಿಗಾಗಿ ಅಲ್ಲ' ಎಂದು ಶಿವಶೈಲಂ ಖಾರವಾದ ಉತ್ತರ ನೀಡಿದರು

ನಗರದಲ್ಲಿ ಸೋಮವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಪದಾಧಿ ಕಾರಿಗಳೊಂದಿಗೆ ನಡೆಸಿದ ಸಂವಾದದ ವೇಳೆ ಅವರು ಈ ವಿಷಯ ತಿಳಿಸಿದರು.

ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌:
ಪ್ರಯಾಣಿಕರು ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಗಾಗಿ ಪಡಿಪಾಟಲು ಪಡುವುದನ್ನು ತಪ್ಪಿಸಲು ಸ್ಮಾರ್ಟ್‌ಕಾರ್ಡ್‌ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಪ್ರಯಾಣಿಕರ ಶ್ರಮ ಮತ್ತು ಹಣ ಕೂಡ ಉಳಿತಾಯ ಆಗುತ್ತದೆ. ಟಿಕೆಟ್‌ ರಹಿತ ಪ್ರಯಾಣದಂಥ ಅಕ್ರಮಕ್ಕೂ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.

ಪ್ರಯಾಣಿಕರು ರೈಲು ಹತ್ತಿದೊಡನೆ ಕಾರ್ಡ್‌ ಸ್ವೀಪ್‌ ಮಾಡಿ ಪ್ರಯಾಣ ಮಾಡಬಹುದು. ಒಮ್ಮೆ ಐದು ರೂಪಾಯಿ ಆಡಳಿತಾತ್ಮಕ ಶುಲ್ಕ ಪಾವತಿಸಿ ಸ್ಮಾರ್ಟ್‌ಕಾರ್ಡ್‌ ಪಡೆಯಬಹುದು. ನಂತರ ಅವರ ಪ್ರಯಾಣದ ಪ್ರಮಾಣವನ್ನು ಆಧರಿಸಿ ಎಷ್ಟು ಬೇಕೋ ಅಷ್ಟು ಮೌಲ್ಯದ ರೀಚಾರ್ಜ್‌ ಮಾಡಬಹುದು. ಪ್ರತಿ ಸಲ ಸ್ವೀಪ್‌ ಮಾಡಿದಾಗಲೂ ನಿಗದಿತ ದರ ಕಡಿತಗೊಳ್ಳುತ್ತದೆ. ಬಾಕಿ ಹಣ ಅವರ ಖಾತೆಯಲ್ಲೇ ಉಳಿದಿರುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X