ಗೋಪಿನಾಥ್ ರೆಸಾರ್ಟ್ ಮೇಲೆ ಕಾಫಿ ಡೇ ಕಣ್ಣು

ಈ ಐಷಾರಾಮಿ ರೆಸಾರ್ಟ್ಸ್ ಬೇರ್ ಫುಟ್ ನಲ್ಲಿ ಕ್ಯಾ.ಗೋಪಿನಾಥ್ ಶೇ.35 ಪಾಲು ಹೊಂದಿದ್ದು, 7 ಎಕರೆ ಪ್ರದೇಶದ ವಿಸ್ತಾರ ಹಾಗೂ 18 ವಿಲ್ಲಾಗಳನ್ನು ಹೊಂದಿದೆ. ಈ ರೆಸಾರ್ಟಿನಲ್ಲಿ ಲಂಡನ್ ಮೂಲದ ಭಾರತೀಯ ಹೂಡಿಕೆದಾರರು ಶೇ.38 ಪಾಲು ಹೊಂದಿದ್ದು ಉಳಿದದ್ದನ್ನು ಸ್ಥಳೀಯ ಹೂಡಿಕೆದಾರರು ಹೊಂದಿದ್ದಾರೆ. ಈ ರೆಸಾರ್ಟಿಗೆ ಸೇರಿದ 60 ಎಕರೆಗಳಷ್ಟು ಹೆಚ್ಚುವರಿ ಭೂಮಿಯೂ ಇದೆ.
ಕಾಫಿ ಡೇ ಹೋಲ್ಡಿಂಗ್ಸ್ ಚಿಕ್ಕಮಗಳೂರು, ಕಬಿನಿ, ಬಂಡಿಪುರದಲ್ಲಿ ರೆಸಾರ್ಟ್ ನಡೆಸುತ್ತಿದೆ. ಸಿಕಾಡಾ ರೆಸಾರ್ಟ್ ಅಲ್ಲದೆ ವಿಪ್ರೋ ಅಜಿಂ ಪ್ರೇಜಿಂ ಒಡೆತನ ರೆಸಾರ್ಟ್ ಕೂಡಾ ಖರೀದಿಸಿದೆ. ಇನ್ನೂ ಹತ್ತು ಪ್ರದೇಶಗಳಲ್ಲಿ ರೆಸಾರ್ಟ್ ಸ್ಥಾಪನೆಗೆ ಮುಂದಾಗಿದೆ.
ಮುಂಬರುವ ಮುರ್ನಾಲ್ಕು ವರ್ಷಗಳಲ್ಲಿ ಸುಮಾರು 1,700 ಕೋಟಿ ಬಂಡವಾಳ ಹೂಡಿ ತನ್ನ ವಹಿವಾಟನ್ನು ವಿಸ್ತರಿಸಲು ಕಾಫಿ ಡೇ ಚಿಂತನೆ ನಡೆಸಿದೆ. ಇದರಲ್ಲಿ 200 ಕೋಟಿ ಪ್ಲಾಂಟೇಷನ್ ಗೆ, 700 ಕೋಟಿ ರೀಟೈಲ್ ಮಳಿಗೆಗಳ ವಿಸ್ತರಣೆಗೆ ಹಾಗೂ ಮೂಲ ಸೌಕರ್ಯ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗಾಗಿ 750 ಕೋಟಿ ಖರ್ಚುಮಾಡಲಿದೆ.












Click it and Unblock the Notifications