ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಗೆ ಬಂದಿದ್ದೇವೆ' ಕೈ' ನೋಡ ಬನ್ನಿ

By Mrutyunjaya Kalmat
|
Google Oneindia Kannada News

Congress
ಬಳ್ಳಾರಿ, ಆ. 9 : ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂಬ ಬಳ್ಳಾರಿ ರೆಡ್ಡಿಗಳ ಪಟಾಲಮ್ಮಿನ ಪಂಥಾಹ್ವಾನವನ್ನು ಸ್ವೀಕರಿಸಿದ ಕಾಂಗ್ರೆಸ್ ಸತತ 16 ದಿನಗಳ ಕಾಲ ನಾಡು ನುಡಿ ಸಂರಕ್ಷಣಾಗಾಗಿ ಪಾದಯಾತ್ರೆ ನಡೆಸಿ ಇಂದು ಬಳ್ಳಾರಿ ತಲುಪಿ ಭಾರಿ ಗಲಾಟೆ ಎಬ್ಬಿಸಿದೆ. ಯಡಿಯೂರಪ್ಪನವರ ಕುರ್ಚಿ ಗಡಗಡ ಎನ್ನುವಷ್ಟು ಆಕ್ರೋಶ, ಟೀಕೆ ಟಿಪ್ಪಣಿಗಳು, ವಾಗ್ಬಾಣಗಳು, ಗದಾಪ್ರಹಾರಗಳು ಸುರಿಮಳೆಗೈಯುತ್ತಿವೆ. ಕಾಂಗ್ರೆಸ್ ಜನಾಂದೋಲನ ಯಶಸ್ವಿಯಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದಾರೆ. ಮುಖ್ಯವಾಗಿ ರಾಜ್ಯಕಾಂಗ್ರೆಸ್ ಉಸ್ತುವಾರಿ ಗುಲಾಮ್ ನಬಿ ಅಜಾದ್, ಕೇಂದ್ರ ಸಚಿವರಾದ ಎಂ ಎಸ್ ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಕೆ ಎಚ್ ಮುನಿಯಪ್ಪ, ಮಾಜಿ ಕೇಂದ್ರ ಮಂತ್ರಿ ಜಾಫರ್ ಷರೀಫ್, ಮಾಜಿ ಮುಖ್ಯಮಂತ್ರಿ ಧರಂಸಿಂಗ್, ರಾಜ್ಯಸಭಾ ಸಭಾಪತಿ ಎ ಆರ್ ರೆಹಮಾನ್ ಖಾನ್ ಬಿ ಕೆ ಹರಿಪ್ರಸಾದ ಜೊತೆಗೆ ಪಾದಯಾತ್ರೆಯ ರೂವಾರಿಗಳಾದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಡಿಕೆ ಶಿವಕುಮಾರ, ಆರ್ ವಿ ದೇಶಪಾಂಡೆ, ಮೋಟಮ್ಮ ಸೇರಿದಂತೆ ಅನೇಕ ರಾಜ್ಯ ನಾಯಕರು ಭಾಗವಹಿಸಿದ್ದಾರೆ.

ಕಾಂಗ್ರೆಸ್ ನಾಯಕರ ವಾಗ್ಬಾಣಗಳು

ಡಿಕೆ ಶಿವಕುಮಾರ

ರೆಡ್ಡಿಗಳೆ ತಾಕತ್ತಿದ್ದರೆ ನನ್ನದೊಂದು ಸವಾಲು ಸ್ವೀಕರಿಸಿ, ರಾಜ್ಯ ವಿಧಾನಸಭೆ ವಿಸರ್ಜಿಸಿ ಚುನಾವಣೆ ಹೋಗೋಣ. ಜನರ ತೀರ್ಪಿಗೆ ನಾವು ಬದ್ದರಾಗಿದ್ದೇವೆ. ಕೃಷ್ಣನ ನನಗೂ ಗೊತ್ತಿದೆ. ನಿಮ್ಮ ಅಷ್ಟೂ ಶಕ್ತಿಯನ್ನು ಎದುರಿಸುವ ಶಕ್ತಿ ನಮ್ಮ ಬಳಿ ಇದೆ ಎಂದು ಡಿಕೆಶಿ ಗುಡುಗಿದರು. ಬಿಜೆಪಿ ಲೂಟಿ ನಿಲ್ಲಿಸಲು ಪಾದಯಾತ್ರೆ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಹಿತಕ್ಕೆ ಪಾದಯಾತ್ರೆ ಮಾಡಿದ್ದೇವೆ. ಲಕ್ಷಾಂತರ ಮಂದಿ ರಾಜ್ಯ ಸಂಪತ್ತು ಉಳಿಸಲು ಬೆಂಬಲಿಸಿದ್ದೇರಿ. ಇದು ರಾಜ್ಯ ಸರಕಾರಕ್ಕೆ ಗೊತ್ತಾಗಬೇಕು. ಹೀಗೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ಜನ ರೊಚ್ಚಿಗೆದ್ದಾರು ಎಂದು ಅವರು ಎಚ್ಚರಿಕೆ ನೀಡಿದರು.

ಎಂ ಪಿ ಪ್ರಕಾಶ

ಬಳ್ಳಾರಿ ಗಣಿ ಲೂಟಿ ಮಾಡುತ್ತಿರುವ ಗಣಿ ಕಳ್ಳರ ಕೈಗೆ ಕೋಳ ತೊಡಿಸಿ ಎಂದು ಆರ್ಭಟಿಸಿದ ಮಾಜಿ ಮುಖ್ಯಮಂತ್ರಿ ಎಂ ಪಿ ಪ್ರಕಾಶ, ಕಳ್ಳತನ ಮಾಡುವುದು ರಾತ್ರಿಯಲ್ಲಿ ಆದರೆ, ಇಲ್ಲಿನ ಕೆಲ ಕಳ್ಳರು ಹಗಲಲ್ಲೇ ಕಳ್ಳತನ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯ ಆಶೀರ್ವಾದ ಇದೆ. ಕುರ್ಚಿ ಶಾಶ್ವತವಲ್ಲ. ರಾಜ್ಯ ಏನು ಮಾಡಿದೆ ಅನ್ನುವುದೇ ಮುಖ್ಯ. ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಲೇಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಗುಲಾಮ್ ನಬಿ ಅಜಾದ್

ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಬಾರಿ ಬೆಂಬಲ ದೊರೆಕಿದ್ದು ಹರ್ಷವಾಗಿದೆ. ಗಣಿಗಾರಿಕೆ ನಿಲ್ಲಬೇಕು. ಅಕ್ರಮ ಗಣಿಗಾರಿಕೆಗೆ ಸಿಬಿಐ ತನಿಖೆಯೊಂದು ರಾಮಬಾಣ. ಸರಕಾರ ಇದಕ್ಕೆ ಸಿದ್ದವಾಗಬೇಕು. ಸರಕಾರ ಸಿಬಿಐ ತನಿಖೆ ನಡೆಸುವವರೆಗೂ ಹೋರಾಟ ನಿಲ್ಲದು ಎಂದು ಅಜಾದ್ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ

ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ರಾಜಕೀಯ ಮರುಹುಟ್ಟು ನೀಡಿದ ಕರ್ನಾಟಕ್ಕೆ ಶನಿಕಾಟ ಶುರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಿದ್ದು ರಾಜ್ಯದ 6 ಕೋಟಿ ಜನರ ಮಂದಿಯ ದುರ್ದೈವ. ರಾಜ್ಯ ನೈಸರ್ಗಿಕ ಸಂಪನ್ಮೂಲ ಲೂಟಿಯಾಗುತ್ತಿದ್ದರೂ ಮುಖ್ಯಮಂತ್ರಿ ಕೈಕಟ್ಟಿ ಕುಳಿತಿದ್ದಾರೆ. ಈ ಸರಕಾರದ ಕೀಲ ಕೈ ಇರುವುದು ಬಳ್ಳಾರಿಯ ರೆಡ್ಡಿಗಳ ಕೈಯಲ್ಲಿ. ಅವರನ್ನು ವಿರೋಧಿಸಿದರೆ ಸಿಎಂ ಪೀಠ ಕೈಬಿಟ್ಟು ಹೋಗುತ್ತದೆ ಎಂಬ ಕಾರಣದಿಂದ ಅವರ ಹೇಳಿದಂತೆ ಸಿಎಂ ಕುಣಿಯುತ್ತಿದ್ದಾರೆ ಎಂದು ಖರ್ಗೆ ಭಾವಾವೇಶಕ್ಕೆ ಒಳಗಾದರು.

ಮೋಟಮ್ಮ

ಆಧುನಿಕ ಇಸ್ಟ್ ಇಂಡಿಯಾ ತದ್ರೂಪದಂತಿರುವ ಗಣಿ ಮಾಫಿಯಾ ಬಳ್ಳಾರಿ ಜನರ ದನಿಯಾನ್ನು ಕಿತ್ತುಕೊಂಡಿದೆ. ಬಡಜನರಿಗೆ ಶೋಷಣೆ, ಕೃಷಿಕರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ರೈತರು ಭಯದಲ್ಲಿ ಜೀವನ ಮಾಡುತ್ತಿದ್ದಾರೆ. ಇದೆಲ್ಲವೂ ಬಳ್ಳಾರಿಯ ಅಭಿವೃದ್ಧಿಯ ಎಂದು ಪ್ರಶ್ನಿಸಿದ ಮೋಟಮ್ಮ, ಪ್ರತಿ ಹಂತದಲ್ಲೂ ಬಿಜೆಪಿ ಸರಕಾರ ಮತ್ತು ರೆಡ್ಡಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ಸರಕಾರ ನಡೆಸಲು ಸಾಧ್ಯವಾಗದಿದ್ದರೆ ವಿಧಾನಸಭೆ ಬಿಟ್ಟು ತೊಲಗಿ ಎಂದ ಅವರು ಗೋಹತ್ಯೆ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X