ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ ಹೊರುವ ದಲಿತರ ಮೇಲೆ ದೌರ್ಜನ್ಯ

By * ಚಂದ್ರಶೇಖರ್, ಸವಣೂರು
|
Google Oneindia Kannada News

ಸವಣೂರು,ಜು.20 : ದಲಿತ ಸಮುದಾಯದಲ್ಲಿಯೇ ಅತ್ಯಂತ ಹಿಂದುಳಿದ ಪಂಗಡವಾದ ಭಂಗಿ ಸಮುದಾಯದ ಕುಟುಂಬಗಳ ಮೇಲೆ ಸ್ವತಃ ಪುರಸಭೆಯೇ ದೌರ್ಜನ್ಯ ಹಾಗೂ ಅಸ್ಪೃಷ್ಯತೆಯ ಭಾವನೆ ತೋರುತ್ತಿದೆ ಎಂದು ಸವಣೂರಿನ ಭಂಗಿ ಸಮುದಾಯದ ಹಲವು ಕುಟುಂಬಗಳು ಆಕ್ಷೇಪಿಸಿದ್ದಾರೆ.

ಈ ಕುರಿತಂತೆ ಸವಣೂರಿನ ಉಪವಿಭಾಗಾಧಿಕಾರಿ ಕೆ.ಪಿ ಮೋಹನರಾಜ್ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಭಂಗಿ ಸಮುದಾಯ, ದಲಿತ ವರ್ಗದ ಜನರನ್ನು ನಗರದಿಂದ ಹೊರಗೆ ಹಾಕುವ ಮೂಲಕ ಪುರಸಭೆ ಭಂಗಿ ಸಮುದಾಯದ ಬದುಕಿನ ಹಕ್ಕಿಗೆ ಚ್ಯುತಿ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಗ್ಯಾಲರಿ:
ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ

ಸವಣೂರ ನಗರದಲ್ಲಿ ಭಂಗಿ ಸಮುದಾಯದ 7 ಕುಟುಂಬಗಳಿವೆ. ವೃತ್ತಿಯಿಂದ ಭಂಗಿ (ಮನುಷ್ಯರ ಮಲ ಹೊರುವ) ವೃತ್ತಿಯನ್ನು ತಲೆತಲಾಂತರಗಳಿಂದ ಮಾಡುತ್ತಿದ್ದೇವೆ. ಸವಣೂರಿನ ಕಮಾಲ ಬಂಗಡಿ ಬಡಾವಣೆಯಲ್ಲಿ ಕಳೆದ 70 ವರ್ಷಗಳಿಂದ ವಾಸವಾಗಿದ್ದೇವೆ.

ಸವಣೂರಿನ ಬಹುತೇಕ ಎಲ್ಲ ಮನೆಗಳ ಹಾಗೂ ಸರಕಾರಿ ಕಛೇರಿಗಳ ಪಾಯಕಾನಿಗಳಲ್ಲಿನ ಮಲ ತೆಗೆಯುವ, ಸ್ವಚ್ಛಗೊಳಿಸುವ ಕಾರ್ಯವನ್ನು ಇಂದಿಗೂ ಬರಿ ಕೈಗಳಿಂದಲೇ ಮಾಡುತ್ತೇವೆ.
ವಾಸವಾಗಿರುವ ಮುರುಕಲು ಗುಡಿಸಲು ಹೊರತುಪಡಿಸಿ ವೃತ್ತಿಗೆ ಅನುಕೂಲಕರವಾದ ಯಾವದೇ ಯಾಂತ್ರಿಕ ಸೌಲಭ್ಯವನ್ನೂ ನಾವು ಈವರೆಗೂ ಹೊಂದಿರುವದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇತ್ತಿಚಿನ ದಿನಗಳಲ್ಲಿ ನಮ್ಮ ಮನೆಗಳನ್ನೂ ತೆರವುಗೊಳಿಸಲು ಪುರಸಭೆ ಮುಂದಾಗಿದೆ. ನಮ್ಮ ಗುಡಿಸಲಿನ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಪುರಸಭೆ ಯತ್ನ ಕೈಗೊಳ್ಳುತ್ತಿದೆ. ಭಂಗಿ ಸಮುದಾಯದ ಜನರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಹಾಗೂ ಮನೆಯ ಸೌಲಭ್ಯ ಕಲ್ಪಿಸದ ಪುರಸಭೆ, 7 ಭಂಗಿ ಕುಟುಂಬಗಳನ್ನು ನಗರದಿಂದ ಹೊರಕ್ಕೆ ಹಾಕಲು ಮುಂದಾಗಿದೆ.

ಮನೆಯ ಸ್ಥಳಾಂತರ ಕುರಿತಂತೆ ನಮಗೆ ಯಾವದೇ ಲಿಖಿತವಾದ ನೋಟಿಸ್ ನೀಡದೆ, ಕೇವಲ ಬಾಯಿ ಮಾತಿನಲ್ಲಿ ಬೆದರಿಕೆ ಹಾಗೂ ಸೂಚನೆ ನೀಡಲಾಗುತ್ತಿದೆ ಎಂದು ಭಂಗಿಗಳು ದೂರಿದ್ದಾರೆ.

ಈ ಸಂದರ್ಭದಲ್ಲಿಯೇ ನಮ್ಮ ಮನೆಗಳಿಗೆ ಇದ್ದ ನಲ್ಲಿಯ ಸಂಪರ್ಕವನ್ನು ಶನಿವಾರದಂದು ಪುರಸಭೆಯ ಏಕಾಏಕಿ ಕಡಿತಗೊಳಿಸಿದೆ. ಇದರಿಂದಾಗಿ 7 ಕುಟುಂಬಗಳಿಗೂ ತೀವೃವಾದ ನೀರಿನ ಸಮಸ್ಯೆ ಎದುರಾಗಿದೆ. ನಾವು ಭಂಗಿ ಸಮುದಾಯದ ಜನರು ಇರುವ ಕಾರಣ ಸಾರ್ವಜನಿಕ ನಳಗಳಲ್ಲಿಯೂ ನಮಗೆ ನೀರು ಕೊಡುವದಿಲ್ಲ. ಹೊಸ ನಳದ ಸಂಪರ್ಕ ನೀಡಲೂ ಪುರಸಭೆಯ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.

ನಮ್ಮ ಮನೆಯ ಅಂಗಳದಲ್ಲಿಯೂ ಕಸ ಕೊಳಚೆ ಹಾಕುವ ಮೂಲಕ ಪರೋಕ್ಷವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಭಂಗಿ ಸಮುದಾಯ ತಮ್ಮ ನೋವು ತೋಡಿಕೊಂಡಿದ್ದಾರೆ.

ಈ ಮೂಲಕ ನಮಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ನಮಗೆ ಎಲ್ಲ ರೀತಿಯ ಸರಕಾರಿ ಸೌಲಭ್ಯಗಳನ್ನು ಕಲ್ಪಿಸುವರೆಗೂ ನಳದ ಸಂಪರ್ಕವನ್ನು ಯಥಾಸ್ಥಿತಿ ಮುಂದುವರೆಸಬೇಕು ಎಂದು ಕೋರಿಕೊಳ್ಳಲಾಗಿದೆ.

English summary
bhangi community night soil savanur muncipal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X