ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಕಾನ್ ಬೃಹತ್ ಯೋಜನೆ; ಕೃಷ್ಣಲೀಲಾ ಪಾರ್ಕ್

By Rajendra
|
Google Oneindia Kannada News

ISKCON Krishna Lila park
ಬೆಂಗಳೂರು, ಜೂ.19: ಕನಕಪುರ ರಸ್ತೆಯಲ್ಲಿ ಕೃಷ್ಣಲೀಲಾ ಪಾರ್ಕ್ ನಿರ್ಮಿಸುವ ಮೆಗಾ ಯೋಜನೆಯನ್ನು ಇಸ್ಕಾನ್ ಕೈಗೆತ್ತಿಕೊಂಡಿದೆ. ಒಟ್ಟು ರು.350 ಕೋಟಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗುತ್ತದೆ. ಮುಂಬರು ಮೂರು ವರ್ಷಗಳಲ್ಲಿ ಈ ಪಾರ್ಕ್ ತಲೆ ಎತ್ತಲಿದೆ.

ಒಟ್ಟು 42.5 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಕಳೆದು ಹೋದ ಭಾರತೀಯ ಸಂಸ್ಕೃತಿಯನ್ನು ಪುನಃ ಪರಿಚಯಿಸುವ ಉದ್ದೇಶದಿಂದ ಈ ಪಾರ್ಕ್ ನಿರ್ಮಾಣವಾಗುತ್ತಿದೆ. ಶ್ರೀಕೃಷ್ಣನ ಬಾಲ ಲೀಲೆಗಳು, ಅವರ ಸಾಹಸಗಾಥೆಗಳನ್ನು ಪಾರ್ಕ್ ನಲ್ಲಿ ನಿರ್ಮಿಸಲಾಗುತ್ತದೆ. ಜೂನ್ 20ರಂದು ಈ ಬೃಹತ್ ಯೋಜನೆಗೆ ಶಂಕುಸ್ಥಾಪನೆ ನಡೆಯಲಿದೆ.

ಮುಖ್ಯ ಸಂಕೀರ್ಣದ ಎತ್ತರ 360 ಅಡಿಯಿರುತ್ತದೆ. ಶ್ರೀಪುರಿ ಜಗನ್ನಾಥ ಮಂದಿರ, ಶ್ರೀ ರಾಧಾಕೃಷ್ಣ ಮಂದಿರ ಹಾಗೂ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ಒಳಗೊಂಡಿರುತ್ತದೆ. ಇಸ್ಕಾನ್ ಹಾಗೂ ಇಂಡಿಯಾ ಹೆರಿಟೇಜ್ ಫೌಂಡೇಷನ್ ಜಂಟಿಯಾಗಿ ಈ ಪಾರ್ಕನ್ನು ನಿರ್ಮಿಸುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X