ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೆ ಮಗನನ್ನು ಒಂದುಗೂಡಿಸಿದ ಫೇಸ್ ಬುಕ್

By Shami
|
Google Oneindia Kannada News

Facebook unites lost son and lost father
ಲಂಡನ್, ಮೇ. 21 : ಮೂವತ್ತೇಳು ವರ್ಷಗಳ ಹಿಂದೆ ಅಗಲಿದ್ದ ಅಪ್ಪ-ಮಗನನ್ನು ಪರಸ್ಪರ ಒಂದು ಮಾಡಿದ ಫೇಸ್ ಬುಕ್‌ನ ಮಾಯಾಜಾಲದ ಕಥೆಯಿದು.

ಲಂಡನ್ನಿನ ಆಂಡಿ ಸ್ಪೀರ್ಸ್ ಕೋರ್ಬಟ್ ಎಂಬ 39 ವರ್ಷದ ಯುವಕನೊಬ್ಬ, ತಾನು ಎರಡು ವರ್ಷ ವಯಸ್ಸಿನವನಿದ್ದಾಗ ತನ್ನ ತಾಯಿಯಿಂದ ವಿಚ್ಚೇದನ ಪಡೆದು ಕೊಂಡು ತನ್ನಿಂದ ದೂರವಾಗಿದ್ದ ತಂದೆಯನ್ನು, ಕಳೆದ ಹಲವಾರು ವರ್ಷಗಳಿಂದ ಹುಡುಕುತ್ತಿದ್ದನಂತೆ. ಅದರಂತೆ ಅವನ ತಂದೆ 61 ವರ್ಷ ಪ್ರಾಯದ ಗ್ರಾಹಂ ಕೋರ್ಬೆಟ್ ಸಹ ತನ್ನ ಮಗನನ್ನು ಮತ್ತೆ ಸೇರಲು ಸಾಕಷ್ಟು ಪ್ರಯತ್ನಿಸಿದ್ದನಂತೆ. ಒಬ್ಬರನ್ನೊಬ್ಬರು ಪತ್ತಹಚ್ಚುವ ಸಲುವಾಗಿ ಪತ್ತೆದಾರರನ್ನು ಸಹ ನೇಮಿಸಿದ್ದರಂತೆ.

ಆದರೆ, ಇದಾವುದೂ ಫಲಕಾರಿಯಾಗದೆ ಇಬ್ಬರೂ ನಿರಾಸೆ ಅನುಭವಿಸಿದ್ದರಂತೆ. ಇತ್ತೀಚೆಗೆ, ಆಂಡಿ ಒಮ್ಮೆ ಪ್ರಯತ್ನಿಸಿ ನೋಡೋಣವೆಂದು ಫೇಸ್‌ಬುಕ್‌ನಲ್ಲಿ ತನ್ನ ತಂದೆಯ ಹೆಸರನ್ನು ಹುಡುಕಲು ಪ್ರಯತ್ನಿಸಿದಾಗ, ತೆರೆದು ಕೊಂಡ ಪುಟಗಳಲ್ಲಿ, ತಕ್ಷಣ ತನ್ನ ತಂದೆಯನ್ನು ಗುರ್ತಿಸಿದನಂತೆ.

ಮೂಗು ಹಾಗೂ ಕಣ್ಣುಗಳಲ್ಲಿ ಪರಸ್ಪರ ಹೋಲಿಕೆ ಕಂಡುಬಂದದ್ದರಿಂದ, ಈತನೇ ತನ್ನ ತಂದೆ ಎಂದು ಗುರ್ತಿಸಿ, ಕೂಡಲೇ ಆತನನ್ನು ಸಂಪರ್ಕಿಸಿ ಈಗ ಪರಸ್ಪರ ಒಂದಾಗಿದ್ದಾರೆ. 37 ವರ್ಷಗಳ ಹಿಂದೆ ಬೇರಾಗಿದ್ದ ಅಪ್ಪ-ಮಗರನ್ನು ಪರಸ್ಪರ ಒಂದು ಮಾಡಿದ ಸಮಾಜ ಸಂಪರ್ಕ ತಾಣ ಫೇಸ್ ಬುಕ್‌ಗೆ ಧನ್ಯವಾದ ಹೇಳೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X