ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ X2ಮೊಬೈಲ್: ಕಾಸಿಗೆ ತಕ್ಕ ಕಜ್ಜಾಯ

By Mahesh
|
Google Oneindia Kannada News

Nokia X2
ಬೆಂಗಳೂರು, ಮೇ.3: ಮಧ್ಯಮ ವರ್ಗದ ಗ್ರಾಹಕರ ಮನಸೂರೆ ಮಾಡಲು ನೋಕಿಯಾ ಕಂಪನಿ ಹೊಸ ಮಾದರಿ ಮೊಬೈಲ್ ಹ್ಯಾಂಡ್ ಸೆಟ್ ಹೊರತರುತ್ತಿದೆ. ಕೇವಲ 5 ಸಾವಿರ ರು.ಗಳಿಗೆ 5 ಮೆಗಾ ಪಿಕ್ಸಲ್ ಕೆಮೆರಾ, ಮ್ಯೂಸಿಕ್ ಪ್ಲೇಯರ್ ಹಾಗೂ ತ್ವರಿತ ಫೇಸ್ ಬುಕ್ ಸಂಪರ್ಕ ಮುಂತಾದ ಸೌಲಭ್ಯಗಳನ್ನು ನೀಡುತ್ತಿದೆ. ನೋಕಿಯಾ X2 ಹೆಸರಿನ ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಇನ್ನು ಅನೇಕ ಸೌಲಭ್ಯಗಳು ಅಡಕವಾಗಿದೆ.

ಎಫ್ಎಂ, ಎಂಪಿ3 ಪ್ಲೇಯರ್ ಇಷ್ಟಪಡುವ ನಗರಮೂಲದ ಗ್ರಾಹಕರಿಗೆ ಈ ಹ್ಯಾಂಡ್ ಸೆಟ್ ನಲ್ಲಿ ವಿಶೇಷ ಕೀ ಗಳನ್ನು ಅಳವಡಿಸಲಾಗಿದೆ. 16 ಜಿಬಿ ವಿಸ್ಟೃತ ಮೆಮೋರಿ(micro SD ಕಾರ್ಡ್) , ಬ್ಲೂಟೂತ್, ಓವಿವೈ ಪ್ಲೇಯರ್ ತಂತ್ರಾಂಶ ಕೂಡ ಲಭ್ಯವಿದೆ. ನೋಕಿಯಾ X2 ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಈ ಉತ್ಪನ್ನ(ನೋಕಿಯಾ X2)ದ ಸಂಕ್ಷಿಪ್ತ ವಿವರಗಳನ್ನು ಗಮನಿಸೋಣ:

*ಜಿಎಸ್ ಎಂ/ಜಿಪಿಆರ್ ಎಸ್ (850/900/1800/1900 ಮೆಗಾಹರ್ಜ್ಡ್)
*2.2 ಇಂಚುTFT ಸ್ಕ್ರೀನ್,QVGA ರೆಸೆಲ್ಯೂಷನ್ ,
*48MB ಅಂತರಿಕ ಮೆಮೋರಿ
* 81 ಗ್ರಾಂ ತೂಕ, ಕಪ್ಪು, ಕೆಂಪು ಹಾಗೂ ರಜತ ಬಣ್ಣದಲ್ಲಿ ಲಭ್ಯ
* ಮ್ಯೂಸಿಕ್ ಪ್ಲೇಬ್ಯಾಕ್ 26.8 ಗಂಟೆಗಳ ವರೆಗು
*ಎಲ್ ಇಡಿ ಫ್ಲಾಶ್ ಸಹಿತ 5 ಮೆಗಾ ಪಿಕ್ಸಲ್ ಕೆಮೆರಾ
* ಸುಡೊಕೊ ಸೇರಿದಂತೆ ಅನೇಕ ಆಟಗಳು
*ಟಾಕ್ ಟೈಂ 13 ಗಂಟೆ 30 ನಿಮಿಷಗಳ ತನಕ ಇದೆ.

ನೋಕಿಯಾ X2, ನೋಕಿಯಾ 5130 ಗೆ ಹೋಲಿಸಿದರೆ, ಕೊಂಚ ಮಾರ್ಪಾಟಿನೊಂದಿಗೆ ನೋಕಿಯಾ X2 ಕೊಳ್ಳಲು ಯಾವುದೇ ಅಡ್ಡಿಯಿಲ್ಲ. 5 ಸಾವಿರಕ್ಕೆ 5 ಮೆಗಾ ಪಿಕ್ಸಲ್ ಕೆಮರಾ ಮೊಬೈಲ್ ಎಂಬುದು ಗ್ರಾಹಕರನ್ನು ಸೆಳೆದರೂ, ಮುಂಬರುವ ದಿನಗಳಲ್ಲಿ ಬದಲಾಗುವ ತಂತ್ರಜ್ಞಾನಕ್ಕೆ ಹೋಲಿಸಿದರೆ, ನೋಕಿಯಾ X2 ಇನ್ನು ಹಿಂದೆ ಬಿದ್ದಿರುವುದು ಎದ್ದು ಕಾಣುತ್ತದೆ.

3ಜಿ , ಜಿಪಿಎಸ್ ಸೌಲಭ್ಯದ ಇಲ್ಲದಿರುವುದು ಮಹತ್ವದ ಕೊರತೆ ಎನ್ನಬಹುದಾದರೂ, ನೋಕಿಯಾ ಬ್ರಾಂಡ್ ನ ಅತಿಹೆಚ್ಚು ಬೇಡಿಕೆಯ ಹ್ಯಾಂಡ್ ಸೆಟ್ ಆಗುವ ಎಲ್ಲ ಲಕ್ಷಣಗಳನ್ನು ನೋಕಿಯಾ X2 ಹೊಂದಿಗೆ .ಪ್ರತಿಸ್ಪರ್ಧಿಗಳ ಪೈಪೋಟಿ ನಡುವೆ ಕಾಸಿಗೆ ತಕ್ಕ ಕಜ್ಜಾಯ ಪಾಲಿಸಿಯನ್ನು ನೋಕಿಯಾ ತಪ್ಪದೇ ಅನುಸರಿಸುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X