ಎನ್ನೆಸ್ಸೆಲ್ ಭಟ್ಟರ ಜೊತೆ ಕಾವ್ಯಾಂತರಂಗ
ದಿನಾಂಕ: 25 ಏಪ್ರಿಲ್ 2010, ಭಾನುವಾರ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.
ವೇಳೆ: ಬೆಳಗ್ಗೆ 10.30 ರಿಂದ 12.30 ಗಂಟೆಯವರೆಗೆ
ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ: - ಕಿರು ಪರಿಚಯ
ಡಾ. ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡದ ಪ್ರಖ್ಯಾತ ಕವಿಗಳಲ್ಲಿ ಒಬ್ಬರಾಗಿದ್ಧಾರೆ. 1936ರಲ್ಲಿ ಸಾಂಸ್ಕೃತಿಕ ತವರಾದಂತಹ ಶಿವಮೊಗ್ಗೆಯಲ್ಲಿ ಜನಿಸಿದವರು. ಶ್ರೀಯುತರು ಕನ್ನಡ ಸಾಹಿತ್ಯ ಲೋಕದಲ್ಲಿ ಕಾವ್ಯ, ವಿಮರ್ಶೆ, ಶಿಶು ಸಾಹಿತ್ಯ, ಅನುವಾದ ಮುಂತಾದ ಸಾಹಿತ್ಯ ಪ್ರಾಕಾರಗಳಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದಂತಹ ಶ್ರೀಯುತರು ಇದುವರೆಗೂ ಹಲವಾರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವರು ಅನುವಾದ ಮಾಡಿದಂತಹ ಶೇಕಸ್ಪಿಯರ್ ಸಾನ್ನೆಟುಗಳು ಹಾಗು ಏಟ್ಸ್ ಕವಿತೆಗಳು ಇಂದಿಗೂ ಸಾಹಿತ್ಯಾಸಕ್ತರಿಗೆ ಪ್ರಿಯವಾಗಿವೆ. ಸುಗಮ ಸಂಗೀತದಲ್ಲಿ ಹೆಸರು ಮಾಡಿದಂತಹ ಶ್ರೀಯುತರ ಭಾವಗೀತೆಗಳು ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗು ಮಾಸ್ತಿ ಪ್ರಶಸ್ತಿಗಳಲ್ಲದೆ ಹಲವಾರು ಪ್ರಶಸ್ತಿಗಳು ಡಾ ಏನ್. ಎಸ್. ಎಲ್ ಅವರಿಗೆ ಲಭಿಸಿವೆ.
ಸಂವೇದನ : ಕಿರು ಪರಿಚಯ
ಪ್ರಸ್ತುತ ಜೇವನ ಶೈಲಿಯ ಜಂಜಾಟದಲ್ಲಿ, ಐಟಿ ಬಿಟಿ ಭರಾಟೆಯಲ್ಲಿ, ನಮ್ಮಸುತ್ತ ನಡೆಯುವ ಗದ್ದಲದಲ್ಲಿ, ನಮ್ಮ ತನು, ಮನಗಳು ಜರ್ಜರಿತಗೊಂಡಿವೆ. ಇಂಥ ಸಂಧರ್ಭದಲ್ಲಿ ನಮ್ಮ ಮನಸ್ಸಿನ ಶಾಂತಿ ಹಾಗು ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕ. ನಮ್ಮ ಕಲೆ ಹಾಗು ಸಂಸ್ಕೃತಿಯ ವಿವೇಚನೆಯ ಮೂಲಕ ಮನಸ್ಸಿಗೆ ಮುದ ನೀಡುವ ನಿಟ್ಟಿನಲ್ಲಿ ರೂಪಗೊಂಡಂಥ ವೇದಿಕೆಯೆ 'ಸಂವೇದನ'.
ಕಲೆ, ಕಾವ್ಯ, ಸಂಸ್ಕೃತಿ, ರಂಗಭೂಮಿ, ಜಾನಪದ, ಮುಂತಾದಕ್ಷೇತ್ರಗಳಲ್ಲಿ ಸಾಧನೆಯನ್ನುಮಾಡಿದಂತಹ ವ್ಯಕ್ತಿಗಳೊಂದಿಗೆ ಸಂವಾದದ ಮೂಲಕ ನಮ್ಮಲ್ಲಿನ ಸಂವೇದನಾಶೀಲತೆಯನ್ನು ವೃದ್ಧಿಪಡಿಸುವುದೇ ಈ ವೇದಿಕೆಯ ಉದ್ದೇಶ ಹಾಗು ಆಶಯ. ಈ ಬಗೆಯ ಸಂವಾದದ ಕಾರ್ಯಕ್ರಮಗಳನ್ನು ತಿಂಗಳಿಗೊಂದರಂತೆ ಯೋಜಿಸುವುದು 'ಸಂವೇದನ'ದ ಉದ್ದೇಶವಾಗಿದೆ.'ಸಂವೇದನ'ದ ಈ ತಿಂಗಳ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸುಸ್ವಾಗತ. ಪ್ರವೇಶ ಉಚಿತ
ಸಂವೇದನದ ಬಗ್ಗೆ ಮಾಹಿತಿಯನ್ನು ಬಯಸುವವರು ಕೆಳಗೆ ಕೊಟ್ಟಿರುವ ಸದಸ್ಯರನ್ನು ಸಂಪರ್ಕಿಸಬಹುದು.
ಪೂರ್ಣಪ್ರಜ್ಞ: 98450 44486
ಸಂದೀಪ್: 98455 95760
ಬೃoದ : 98861 67041
ಚಂದ್ರಿಕಾ : 98453 33980