ಖಾಸಗಿ ವಿವಿ ವಿಧೇಯಕ ಪರಿಶೀಲನೆಗೆ

ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದರು. ಸದನದ ಬಾವಿಗೆ ಬಂದ ಉಭಯ ಪಕ್ಷಗಳ ಸದಸ್ಯರು ಸರಕಾರ ಅಜೀಂ ಪ್ರೇಮ್ ಜೀ ಮತ್ತು ಅಲೆಯನ್ಸ್ ವಿವಿಗೆ ಅನುಮತಿ ನೀಡುವ ವಿಧೇಯಕದ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು. ಅಜೀಂ ಪ್ರೇಮ್ ಜಿ ವಿವಿಗೆ ಅನುಮೋದನೆ ಪಡೆದಿದ್ದೀರಿ, ಆದರೆ, ಅಲಯನ್ಸ್ ವಿವಿ ಯಾರದ್ದು, ಫ್ರಾಡ್ ಗಳಿಗೆಲ್ಲ ಸಂಸ್ಥೆ ನಡೆಸಲು ಅನುಮತಿ ನೀಡುತ್ತೀರಾ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ಷೇಪಿಸಿದರು.












Click it and Unblock the Notifications