ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡಂದಿರ ಮೇಲೆ ದೌರ್ಜನ್ಯಕ್ಕೆ ಪ್ರತಿಭಟನೆ

By Mrutyunjaya Kalmat
|
Google Oneindia Kannada News

Harassment
ಬೆಂಗಳೂರು, ಫೆ. 15 : ವಿವಾಹಿತ ಸ್ತ್ರೀಯರು ಮಹಿಳಾ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಪುರುಷರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ಫ್ಯಾಮಿಲಿ ಸೊಸೈಟಿ ಸಂಘಟನೆಯ ಸದಸ್ಯರು ನಗರದ ಎಂಜಿ ರಸ್ತೆಯ ಮಹಾತ್ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದ ಅವರು, ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿರುವ ಕಾನೂನುಗಳು ಪುರುಷರ ಮೇಲೆ ದೌರ್ಜನ್ಯ ನಡೆಸುವ ಅಸ್ತ್ರಗಳಂತೆ ಬಳಕೆಯಾಗುತ್ತಿವೆ ಎಂದು ದೂರಿದರು. ವರದಕ್ಷಿಣೆ ಮತ್ತು ಕಾನೂನು ದೌರ್ಜನ್ಯ ತಡೆ ಹಾಗೂ ಕುಟುಂಬ ನಿರ್ವಹಣೆ ಕಾಯ್ದೆಸ ವಿವಾಹ ವಿಚ್ಛೇದನ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ವ್ಯವಸ್ಥೆಯೂ ಮಹಿಳೆಯರ ಪರವಾಗಿಯೇ ಕೆಲಸ ಮಾಡುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಪಿ ಸುರೇಶ್ ಆರೋಪಿಸಿದರು.

ವಿವಾಹಿತ ಮಹಿಳೆಯರು ತಮ್ಮ ಪತಿ ಹಾಗೂ ಅತ್ತೆ ಮಾವಂದಿರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಸ್ತ್ರೀಯರು ದೂರು ನೀಡಿದ ಸಂದರ್ಭದಲ್ಲಿ ಸೂಕ್ತ ತನಿಖೆ ನಡೆಸದೇ ಏಕಾಏಕಿ ಪುರುಷರನ್ನು ಬಂಧಿಸಲಾಗುತ್ತಿದೆ. ಸ್ತ್ರೀಯರು ಪತಿಯನ್ನು ನಿಯಂತ್ರಣದಟ್ಟುಕೊಳ್ಳುವ ಸಲುವಾಗಿ ಅವರ ವಿರುದ್ಧ ಸುಳ್ಳು ದೂರು ದಾಖಲಿಸುವುದು ಎಲ್ಲಡೆ ಸಾಮಾನ್ಯವಾಗಿದೆ ಎಂದು ಅವರು ದೂರಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X