ಧ್ವಜಾರೋಹಣಕ್ಕೆ ಅಂಜುಮಾನ್ ಬಹಿಷ್ಕಾರ
ಹುಬ್ಬಳ್ಳಿ,
ಜ.25 : ಈದ್ಗಾ ಮೈದಾನದಲ್ಲಿ ಜನವರಿ 26 ಗಣರಾಜ್ಯೋತ್ಸವ ದಿನದಂದು ಪಾಲಿಕೆ ಆಯುಕ್ತರು ನೆರವೇರಿಸಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಅಂಜುಮಾನ್ - ಇ- ಇಸ್ಲಾಂ ಸಂಸ್ಥೆ ಭಾನುವಾರ ಸಂಜೆ ಒಮ್ಮತದ ನಿರ್ಣಯ ಕೈಗೊಂಡಿದೆ. ಧ್ವಜಾರೋಹಣ ನೆರವೇರಿಸುವ ಅಧಿಕಾರವನ್ನು ಸರಕಾರ ಪಾಲಿಕೆ ಆಯುಕ್ತರಿಗೆ ನೀಡಿರುವ ಕ್ರಮವನ್ನು ಖಂಡಿಸಿ ಸಂಸ್ಥೆ ಈ ನಿರ್ಧಾರ ತಾಳಿದೆ. id="toptextpromo">ಅಂಜುಮಾನ್
ಸಂಸ್ಥೆಯ 24ವಿದ್ಯಾ ಸಂಸ್ಥೆಗಳಲ್ಲಿ ಜ. 26ರಂದು ಧ್ವಜಾರೋಹಣ ನಡೆಯಲಿದೆ. 1995ರ ನಂತರ ಈ ವಿವಾದೀತ ಮೈದಾನದಲ್ಲಿ ಅಂಜುಮಾನ್ ಧ್ವಜಾರೋಹಣ ನೆರವೇರಿಸುತ್ತಿತ್ತು. ಸರಕಾರ ಇದನ್ನು ಪರಿಗಣಿಸದೆ ಮುಸ್ಲಿಂ ಸಮುದಾಯದ ಜನರ ಮನಸ್ಸಿಗೆ ನೋವಾಗುವಂತ ನಿರ್ಣಯ ಕೈಗೊಂಡಿದೆ. id='are-slot-1' class='oiad oi-axt oiadv'> id='top-searched-articles'>ಅವಳಿ
ನಗರದಲ್ಲಿ ಧ್ವಜಾರೋಹಣ ವೇಳೆ ಮುಸ್ಲಿಮರು ಭಾವೋದ್ವೇಗಕ್ಕೆ ಒಳಗಾಗದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮೊಹಮದ್ ಯೂಸಫ್ ಸವಣೂರು ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸಮುದಾಯದ 147ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.











Click it and Unblock the Notifications