ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸು, ಅಶ್ವತ್ಥ್ ನಿಧನ, ದೇವೇಗೌಡರ ಸಂತಾಪ

By Mrutyunjaya Kalmat
|
Google Oneindia Kannada News

HD Devegowda
ಬೆಂಗಳೂರು, ಜ. 18 : ನಾನು ಜ್ಯೋತಿ ಬಸು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇಶದ ಕಂಡ ಮಹಾನ್ ನಾಯಕ ಕಣ್ಮರೆಯಾಗಿದ್ದ ಸಂಕಟಪಡುವ ಸಂಗತಿ. ಮುತ್ಸದ್ಧಿ ರಾಜಕಾರಣಿ ಜ್ಯೋತಿ ಬಸು ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟ ಕೆ ಎಸ್ ಆಶ್ವತ್ಥ್ ಅವರ ನಿಧನಕ್ಕೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಲದ ಸುಧಾರಣೆಯ ಹರಿಕಾರ ಬಸು ಅವರ ಸಾಧನೆಯನ್ನು ದೇಶದ ರಾಜಕಾರಣಕ್ಕೆ ಮಾದರಿಯಾಗಿದೆ ಎಂದರು. ಸಿಪಿಐಎಂ ಪಕ್ಷದ ತತ್ವಸಿದ್ಧಾಂತಗಳನ್ನು ಜೆಡಿಎಸ್ ಹೊಂದಿದ ಸಮಾಜದ ಕಟ್ಟಕಡೆಯ ಮನುಷ್ಯನಿಗಾಗಿ ಬಸು ಕೊನೆಯವರೆಗೂ ನಡೆಸಿದರು. ಜೆಡಿಎಸ್ ಕೂಡ ಅದೇ ದಾರಿಯಲ್ಲಿ ಹೆಜ್ಜೆ ಇರಿಸಲಿದೆ. ಅಲ್ಲದೇ ಬಸು ಮತ್ತು ನಟ ಅಶ್ವತ್ಥ್ ನಿಧನದಿಂದಾಗ ಎರಡು ದಿನಗಳ ಕಾಲ ಜೆಡಿಎಸ್ ಕಾರ್ಯಕ್ರಮಗಳಿಗೆ ರಜೆ ಘೋಷಿಸಿಲಾಗಿದೆ ಎಂದು ದೇವೇಗೌಡ ವಿವರಿಸಿದರು.

ಗ್ಯಾಲರಿ: ಮೇರುನಟ ಅಶ್ವಥ್ ಚಿತ್ರಸಂಪುಟ

ಬಸು ಮತ್ತು ಅಶ್ವತ್ಥ್ ನಿಧನದಿಂದ ರಾಜಕೀಯ ಮತ್ತು ಕನ್ನಡ ಚಿತ್ರರಂಗ ಬಡವಾಗಿದೆ. ಇವರ ನಿಧನದ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಈ ಕುಟುಂಬಗಳಿಗೆ ನೀಡಲಿ ಎಂದು ದೇವೇಗೌಡ ಹೇಳಿದರು. ನೈಸ್ ಗೆ ಸಂಬಂಧಿಸಿದಂತೆ ಮತ್ತೆ ಗುಟುರು ಹಾಕಿದ ದೇವೇಗೌಡ, ನೈಸ್ ವಿರುದ್ಧ ಅಕ್ರಮಗಳ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X