ಮೋಟಮ್ಮ ಪರಿಷತ್ ಪ್ರತಿಪಕ್ಷ ನಾಯಕಿ
ಬೆಂಗಳೂರು,
ಜ. 10 : ವಿ ಎಸ್ ಉಗ್ರಪ್ಪ ಅವರ ನಿವೃತ್ತಿಯಿಂದ ತೆರವಾಗಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ಸ್ಥಾನವನ್ನು ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯರೂ ಆಗಿ ಕಾರ್ಯನಿರ್ವಹಿಸುತ್ತಿರುವ ಮೊಟಮ್ಮ ಅವರನ್ನು ಮೇಲ್ಮನೆ ನಾಯಕಿಯನ್ನಾಗಿ ನೇಮಿಸಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ. id="toptextpromo">ಜ5.
ರಂದು ಉಗ್ರಪ್ಪ ಅವರ ಅವಧಿ ಮುಗಿದಿದ್ದರಿಂದ ಆ ಸ್ಥಾನ ಖಾಲಿ ಉಳಿದಿತ್ತು. ಮಹಿಳೆಯರಿಗೆ ಹೆಚ್ಚು ಅವಕಾಶ ನೀಡಬೇಕು ಹಾಗೂ ದಲಿತ ಮತ್ತು ಹಿಂದುಳಿದವರಿಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಮೋಟಮ್ಮ ಅವರನ್ನು ನೇಮಕ ಮಾಡಲಾಗಿದೆ. ಮೋಟಮ್ಮ ಅವರು ಮೂಡಿಗೆರೆ ಮೀಸಲು ಕ್ಷೇತ್ರದಿಂದ ಶಾಸಕಿಯಾಗಿ ಪಕ್ಷದ ಹಲವು ಮಜಲುಗಳನ್ನು ಕಾರ್ಯನಿರ್ವಹಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಸ್
ಎಂ ಕೃಷ್ಣ ಆಡಳಿತಾವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಸ್ತ್ರೀ ಸಂಘಟನೆಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಮೋಟಮ್ಮ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿರುವುದು ವಿಶೇಷ.











Click it and Unblock the Notifications