ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಜ್-2009 : ನ.5 ರಿಂದ 21ವರಿಗೆ ಕ್ಯಾಂಪ್

By Super Admin
|
Google Oneindia Kannada News

ಬೆಂಗಳೂರು, ನ. 4 : ಕರ್ನಾಟಕ ರಾಜ್ಯ ಹಜ್ ಸಮಿತಿಯು ರಾಜ್ಯದ ಹಜ್ ಯಾತ್ರಿಗಳು ಸುಗಮ ಹಾಗೂ ಸುರಕ್ಷಿತವಾಗಿ ಪ್ರಯಾಣಿಸಲು ಅನುವಾಗುವಂತೆ ಯಾತ್ರಿಕರಿಗಾಗಿ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ (ಕಂಟೋನ್‌ಮೆಂಟ್ ರೈಲ್ವೇ ನಿಲ್ದಾಣದ ಹಿಂಭಾಗ) ಖುದ್ರೂಸ್ ಸಾಹೇಬ್ ಇದ್ಗಾ ಮೈದಾನದಲ್ಲಿ ನವೆಂಬರ್ 5 ರಿಂದ 21 ರವರೆಗೆ ಹಜ್ ಕ್ಯಾಂಪನ್ನು ಆಯೋಜಿಸಲಾಗಿದೆ.

ಹಜ್ - 2009 ರ ಸಾಲಿನ ಕರ್ನಾಟಕ ರಾಜ್ಯ ಹಜ್ ಯಾತ್ರಿಗಳ ಮೊದಲ ವಿಮಾನವು ನವೆಂಬರ್ 7 ರಂದು ಸಂಜೆ 5.30 ಗಂಟೆಗೆ ಹೊರಡಲಿದೆ. ಕರ್ನಾಟಕ ರಾಜ್ಯ ಹಜ್ ಸಮಿತಿಯು ನವೆಂಬರ್ 6 ರಂದು ಸಂಜೆ 6.30 ಗಂಟೆಗೆ ಹಜ್ ಕ್ಯಾಂಪ್‌ನಲ್ಲಿ ಯಾತ್ರಾರ್ಥಿಗಳ ವಿಮಾನ ಉಡಾವಣೆ ಉದ್ಫಾಟನಾ ಸಮಾರಂಭವನ್ನು ಆಯೋಜಿಸಿರುತ್ತದೆ.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಫಾಟಿಸಲಿದ್ದಾರೆ. ಹಜ್ ಹಾಗೂ ವಕ್ಪ್ ಖಾತೆಯ ಸಚಿವ ಮಮ್ತಾಜ್ ಆಲಿಖಾನ್, ಕೇಂದ್ರದ ಸಚಿವರುಗಳು, ರಾಜ್ಯದ ಸಚಿವರುಗಳು, ರಾಜ್ಯದ ವಿಧಾನಸಭಾ ಹಾಗೂ ವಿಧಾನಪರಿಷತ್ತಿನ ಶಾಸಕರುಗಳು, ಮುಸ್ಲಿಂ ಸಮುದಾಯದ ಮುಖ್ಯಸ್ಥರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. (ದಟ್ಸ್ ಕನ್ನಡ ವಾರ್ತೆ)

English summary
The meningitis immunization program for Haj pilgrims is being organized at PSM OPD No. 9. The program will be held from 12 noon to 1.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X