ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾದೇಶಿಕ ಭಾಷೆಯಲ್ಲಿ ರೈಲ್ವೆ ಪರೀಕ್ಷೆ : ಮಮತಾ

By Staff
|
Google Oneindia Kannada News

Mamata Banerjee
ನವದೆಹಲಿ, ಜು. 10 : ಪ್ರಾದೇಶಿಕ ಭಾಷೆಯಲ್ಲೇ ರೈಲ್ವೆ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೂಗಿಗೆ ಧ್ವನಿ ಬಂದಿದ್ದು, ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಿದ್ದಾರೆ.

ರೈಲ್ವೆ ನೇಮಕಾತಿ ಮಂಡಳಿಗಳ ಪೈಕಿ ಶೇ. 50 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡುವ ಮತ್ತು ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳ ಮಾಧ್ಯಮದಲ್ಲಿ ನಡೆಸುವ ಆಲೋಚನೆಯನ್ನು ಮಮತಾ ಬ್ಯಾನರ್ಜಿ ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದರು. ರೈಲ್ವೆ ಬಜೆಟ್ ನಲ್ಲಿ ಈಗಾಗಲೇ ಘೋಷಿಸಿರುವಂತೆ ಮೈಸೂರಿನ ಜೊತೆಗೆ ಬೀದರ್, ಗುಲ್ಬರ್ಗಾ, ವಾಡಿ ಮತ್ತು ಗದಗ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುವುದು ಎಂದರು. ಅಲ್ಲದೇ ರಾಜ್ಯ ತುರಂತ್ ತಡರಹಿತ ರೈಲುಗಳ ವಿಸ್ತರಣೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ರೈಲ್ವೆ ನೇಮಕಾತಿ ಮಂಡಳಿಯ ನೇಮಕಗಳ ಪೈಕಿ ಶೇ. 50 ರಷ್ಟು ಹುದ್ದೆಗಳು ಆಯಾ ಪ್ರದೇಶದ ಜನರಿಗೆ ಸಲ್ಲಬೇಕು. ನಾನಂತೂ ಈ ವಿಷಯದ ಪಕ್ಷಪಾತಿ. ಆಯಾ ರಾಜ್ಯದವರು ಆಯಾ ಪ್ರದೇಶಗಳಲ್ಲಿ ನೇಮಕವಾದರೆ ರೈಲ್ವೆಗೂ ಲಾಭ. ಆಯಾ ಪ್ರಾದೇಶಿಕ ಭಾಷೆಯಲ್ಲಿ ಅರಿತ ಸಿಬ್ಬಂದಿಗೂ ಲಾಭ. ರೈಲ್ವೆ ಎಲ್ಲರಿಗೂ ಸೇರಿದ್ದು, ಯಾರದೋ ಒಬ್ಬರದಲ್ಲ. ಸ್ಥಳೀಯ ಭಾವನೆಗಳನ್ನು ಗೌರವಿಸಬೇಕು ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X