ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬ್ ರಾಷ್ಟ್ರಗಳಿಂದ ಭಾರತೀಯರಿಗೆ ಕೋಕ್

By Staff
|
Google Oneindia Kannada News

ನವದೆಹಲಿ, ಜು. 9 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಅರಬ್ ದೇಶಗಳಿಗೆ ತೆರಳಿದ್ದ ಸುಮಾರು 1.5 ಲಕ್ಷ ಮಂದಿ ತವರಿಗೆ ಮರಳಿದ್ದಾರೆ ಎಂದು ಕೇಂದ್ರ ಸರಕಾರ ಲೋಕಸಭೆಯಲ್ಲಿ ಬುಧವಾರ ತಿಳಿಸಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾಗರೋತ್ತರ ಭಾರತೀಯ ವ್ಯವಹಾರಗಳ ಖಾತೆ ಸಚಿವ ವಯಲಾರ್ ರವಿ, ಆರ್ಥಿಕ ಬಿಕ್ಕಟ್ಟಪ ಉಂಟಾಗಿ ಭಾರತದ ವಿವಿಧ ರಾಜ್ಯಗಳ ಸುಮಾರು 50 ಸಾವಿರದಿಂದ 1.50 ಲಕ್ಷ ಉದ್ಯೋಗಿಗಳು ಮರಳಿ ತವರಿಗಾಗಮಿಸಿದ್ದಾರೆ. ಭಾರತೀಯ ಉದ್ಯೋಗಿಗಳಾಗಿ ಅರಬ್ ದೇಶಗಳಾದ ಅಪಘಾನಿಸ್ತಾನ, ಸಿರಿಯಾ, ಬ್ರೂನಿಯಾ, ಲಿಬಿಯಾ, ಜೋರ್ಡಾನ್ ಹಾಗೂ ಲೆಬನಾನ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಕಳೆದ ವರ್ಷ ಜಾಗತಿಕ ಆರ್ಥಿಕ ಕ್ಷೇತ್ರದ ಮೇಲೆ ಉಂಟಾದ ಆರ್ಥಿಕ ಕುಸಿತದಿಂದ ಇವರು ಅಲ್ಲಿಂದ ಗುಳೆ ಕಿತ್ತಿದ್ದಾರೆ ಎಂದು ರವಿ ವಿವರಿಸಿದರು.

ಅಮೆರಿಕದಲ್ಲಿ ಈ ಆರ್ಥಿಕ ಕುಸಿತ ಬಿಸಿ ಬಾರಿ ಪ್ರಮಾಣದಲ್ಲಿ ಉಂಟಾಗಿದೆ. ಆದರೆ, ಅಲ್ಲಿರುವ ಭಾರತೀಯರು ತಮ್ಮ ಉತ್ತಮ ಕಾರ್ಯಕ್ಷಮತೆಯಿಂದಾಗಿ ಕೆಲಸ ಕಳೆದುಕೊಂಡಿಲ್ಲ ಎಂದರು. ಅಮೆರಿಕದ ಮತ್ತು ಅರಬ್ ದೇಶಗಲ್ಲಿರುವ ರಾಯಭಾರಿ ಕಚೇರಿಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ರವಿ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X