ಕ್ರಿಕೆಟಿಗರ ಮೇಲೆ ದಾಳಿ 4 ಉಗ್ರರ ಚಿತ್ರ ಬಿಡುಗಡೆ
ಲಾಹೋರ್, ಮಾ. 5 :ಮಂಗಳವಾರ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಭಯೋತ್ಪಾದಕರ ರೇಖಾಚಿತ್ರವನ್ನು ಲಾಹೋರ್ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದಾರೆ. 12 ಮಂದಿ ತರಬೇತಿ ಪಡೆದ ಉಗ್ರರು ಈ ಕೃತ್ಯ ಎಸಗಿದ್ದು, 60 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಲಾಹೋರಿನ ಗಢಾಫಿ ಕ್ರೀಡಾಂಗಣದ ಹತ್ತಿರವಿರುವ ಲಿಬರ್ಟಿ ಮಾರುಕಟ್ಟೆ ಬಳಿ ನಡೆದ ಗುಂಡಿನ ದಾಳಿಯ ಅಷ್ಟೂ ಚಿತ್ರೀಕರಣವನ್ನು ವೀಕ್ಷಿಸಲಾಗಿದ್ದು, ಗುಂಡಿನ ದಾಳಿ ನಡೆಸಿದವರು 20 ರಿಂದ 25 ವರ್ಷದ ಒಳಗಿನವರಾಗಿದ್ದಾರೆ. ಅಲ್ಲದೇ ಸಾಕ್ಷ್ಯಾಧಾರಗಳ ಅಧಾರದ ಮೇಲೆ ನಾಲ್ಕು ಮಂದಿ ಶಂಕಿತರ ರೇಖಾಚಿತ್ರ ಬಿಡುಗಡೆಗೊಳಿಸಲಾಗಿದೆ. ದಾಳಿಯ ಕೆಲ ಮಹತ್ವದ ಸಂಗತಿಗಳು ಜನಸಾಮಾನ್ಯರ ಮೂಲಕ ತಿಳಿದು ಬಂದಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಭಾರತ ಮೇಲಿನ ಆರೋಪ ಅರ್ಥರಹಿತ: ಚಿದು
ಲಾಹೋರ್ ಗುಂಡಿನ ದಾಳಿ 10 ಜನರ ಬಂಧನ












Click it and Unblock the Notifications