ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ವರ್ಷ ಆಚರಣೆ ಸರಳವಾಗಿರಲಿ

By Staff
|
Google Oneindia Kannada News

Celebrate the new year eve safely
ಬೆಂಗಳೂರು, ಡಿ. 31 : ಹೊಸ ವರ್ಷದ ಸಂಭ್ರಮಾಚರಣೆ ಎಲ್ಲೆಡೆ ಚಾಚಿಕೊಂಡಿದ್ದರೂ ಏನೋ ಒಂಥರ ದುಗುಡದ ವಾತಾವರಣ. ವರ್ಷಾಚರಣೆಯಲ್ಲಿ ಪಂಜರದಿಂದ ಬಿಟ್ಟ ಹಕ್ಕಿಯಂತೆ ಹಾರಾಡುತ್ತಿದ್ದ ಹುಡುಗಿಯರಿಗೆ ಈ ಬಾರಿ ಅಕ್ಷರಶಃ ಪಂಜರದಲ್ಲಿ ಬಂಧಿಯಾಗಿರುವ ಅನುಭವ. ಭಯೋತ್ಪಾದನೆಯ ಕರಿನೆರಳು, ಆರ್ಥಿಕ ಹೊಡೆತ ಈಸತಿ ವರ್ಷಾಚರಣೆಯ ಒಂದು ಭಾಗವನ್ನು ಕಸಿದುಕೊಂಡಿದೆ.

ಝಗಮಗಿಸುವ ಮಿಣುಕು ದೀಪಗಳ ಅಡಿಯ ಕರಿನೆರಳಿನಲ್ಲಿ ಹೊಸವರ್ಷ ಆಚರಿಸಲು ಬೆಂಗಳೂರು ಸಜ್ಜಾಗಿದೆ. ನಗರದ ಎಂಜಿ ರಸ್ತೆ , ಬ್ರಿಗೇಡ್ ರಸ್ತೆಗಳು ಎಂದಿನ ರಂಗುಪಡೆದಿವೆ. ಸಂಜೆಯಾಗುತ್ತಿದ್ದಂತೆಯೇ ಯುವಕರು ಗುಂಪು ಗುಂಪಾಗಿ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಭಯೋತ್ಪಾದನೆಯ ಭೀತಿಯ ಹಿನ್ನೆಲೆಯಲ್ಲಿ ಪೊಲೀಸರು ನಗರದಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಹೊಟೇಲ್, ಪಬ್ ಗಳಲ್ಲಿ ಕೂಡ ವರ್ಷಾಚರಣೆ ಹದ್ದು ಮೀರಬಾರದು ಎಂದು ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ.

* ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಯವತಿಯರಿಗೆ ಅವಕಾಶವಿಲ್ಲ. ಕಿಡಿಗೇಡಿಗಳು ಕಳೆದ ವರ್ಷ ಯವತಿಯರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.
* ಬೆಂಗಳೂರು ನಗರದ ತುಂಬಾ ವ್ಯಾಪಕ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
* ರಾತ್ರಿ 12 ಗಂಟೆ ನಂತರ ಓಡಾಟ ಬಂದ್
* ಮದ್ಯಪಾನ ಮಾಡಿ ವಾಹನ ಚಾಲನೆ ನಿಷಿದ್ಧ

ಈ ರೀತಿ ವರ್ಷಾಚರಣೆ ಇರಲಿ

* ಹೊಸ ವರ್ಷಾಚರಣೆ ನಿಯಂತ್ರಣದಲ್ಲಿರಲಿ.
* ನೆನಪಿರಲಿ, ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು!
* ಮನೆಯೆಲ್ಲಿಯೇ ಹೊಸ ವರ್ಷಾಚರಣೆ ಮಾಡುವುದು ಒಳಿತು.
* ಎಂಜಿ ರೋಡು, ಬ್ರಿಗೇಡ್ ರಸ್ತೆಗೆ ಹೆಣ್ಣಮಕ್ಕಳನ್ನು ಕರೆದುಕೊಂಡು ಹೋಗಲೇಬೇಡಿ.
* ಬೇರೆಲ್ಲಿಯಾದರೂ ಹೋದಾಗಲೂ ಹೆಂಡತಿ ಮಕ್ಕಳ ಬಗ್ಗೆ ವಿಶೇಷ ಎಚ್ಚರವಿರಲಿ.
* ಯಾರದೇ ಬಗ್ಗೆ ಅನುಮಾನ ಬಂದರೆ ಕೂಡಲೆ ಪೊಲೀಸರಿಗೆ ತಿಳಿಸಿ, ಹಿಂಜರಿಯಬೇಡಿ.
* ಕುಡಿತ, ಕುಣಿತದಿಂದ ಹೊಸ ವರ್ಷ ಬರಮಾಡಿಕೊಳ್ಳುವುದು ಬೇಡ.
* ಆರ್ಥಿಕ ಹಿನ್ನೆಡೆಯ ಸಂಕಷ್ಟದ ದಿನಗಳಿವು. ಆದ್ದರಿಂದ ದುಂದುವೆಚ್ಚಕ್ಕೆ ಭಾರಿ ಕಡಿವಾಣಿ ಇರಲಿ.
* ಮನಮಂದಿಯಲ್ಲಾ ಸೇರಿಕೊಂಡು ಸರಳ ರೀತಿಯಲ್ಲಿ ಹೊಸ ವರ್ಷ ಆಚರಿಸದೆರೆ ಅದಕ್ಕಿಂತ ಉತ್ತಮ ಮತ್ತೇನಿದೆ?

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X