ಕಚ್ಚಾ ತೈಲ ಬೆಲೆ ದಾಖಲೆ ಇಳಿತ
ನವದೆಹಲಿ, ನ. 21 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 48.54 ಡಾಲರಿಗೆ ಕುಸಿದಿದ್ದು ಮೂರೂವರೆ ವರ್ಷಗಳ ಕನಿಷ್ಟ ದರ ದಾಖಲಿಸಿದೆ. ಅಂತಾರಾಷ್ಟೀಯ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿದ್ದು ಕುಸಿತಕ್ಕೆ ಕಾರಣವಾಗಿದೆ. ಮೇ 2005 ನಂತರ ಇಷ್ಟೊಂದು ಪ್ರಮಾಣದಲ್ಲಿ ತೈಲ ಬೆಲೆ ಕುಸಿತ ಕಂಡಿರುವುದು ಇದೇ ಮೊದಲು ಸಲವಾಗಿದೆ.
ಇದು ದಾಖಲೆಯ ಬೆಲೆ ಕುಸಿತವಾದರೂ ಕೇಂದ್ರ ಪೇಟ್ರೋಲಿಯಂ ಸಚಿವಾಲಯ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಲು ನಿರಾಕರಿಸಿದೆ. ಅಡುಗೆ ಅನಿಲ ಮಾರಾಟದಿಂದ 343 ರೂಪಾಯಿ ಮತ್ತು ಸೀಮೆಎಣ್ಣೆ ಮಾರಾಟದಿಂದ 22.40 ರುಪಾಯಿ ನಷ್ಟವಾಗುತ್ತಿದ್ದು, ಅದನ್ನು ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲ್ ನಿಂದ ಬರುವ ಲಾಭವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications