ಸಜೀವ ಬಾಂಬ್ ಇಟ್ಟವನ ಗುರುತು ಪತ್ತೆ: ಬಿದರಿ

Subscribe to Oneindia Kannada

ಬೆಂಗಳೂರು, ಜು. 26: ನಗರದ ಕೋರಮಂಗಲ ಫೋರಂ ಮಾಲ್ ಸಮೀಪದಲ್ಲಿ ಇಡಲಾಗಿದ್ದ ಸಜೀವ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ ತಂಡವನ್ನು ಅಭಿನಂದಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ, ಸಾರ್ವಜನಿಕರು ಆತಂಕಪಡುವ ಕಾರಣವಿಲ್ಲ ಎಂದಿದ್ದಾರೆ.

ಇಂದು ಬೆಳಗ್ಗೆ 10:30 ಕ್ಕೆ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. 10:45 ಕ್ಕೆ ಸುಮಾರು 25 ರಿಂದ 30 ವಯಸ್ಸಿನ ಕೆಂಪು ಶರ್ಟ್ ಧರಿಸಿದ ವ್ಯಕ್ತಿ ಈ ಸ್ಥಳದಲ್ಲಿ ಅನುಮನಾಸ್ಪದವಾಗಿ ಓಡಾಡುತ್ತಿದ್ದದ್ದು ಕಂಡು ಬಂದಿದೆ. ಬಾಂಬುಗಳನ್ನು ನಿಷ್ಕ್ರಿಯಗೊಳಿಸಲಾಗಿಸಲು ದೆಹಲಿಯಿಂದ ವಿಶೇಷ ತಜ್ಞರು ಆಗಮಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಕಾರಣವಿಲ್ಲ. ಬಾಂಬಿನಲ್ಲಿ ಡಿಟೋನೇಟರ್ , ಮೈಕ್ರೋ ಚಿಪ್ ಒಳಗೊಂಡಿತ್ತು, ಕಬ್ಬಿಣದ ಬಕೇಟ್ ನಲ್ಲಿ ಇಡಲಾಗಿತ್ತು. ನೆನ್ನೆ ಇಡಲಾಗಿದ್ದ ಬಾಂಬ್ ಗಳ ಮಾದರಿಯಲ್ಲೇ ಈ ಸಜೀವ ತಯಾರಿಸಲಾಗಿದೆ. ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದ್ದಾರೆ.

ಕೋರಮಂಗಲ ಫೋರಂ ಮಾಲ್ ನಿಂದ ಸುಮಾರು 50 ಮೀ ದೂರದಲ್ಲಿರುವ ಹೈದರಾಬಾದ್ ಹೌಸ್ ಅಂಗಡಿಯ ಎದುರಿದ್ದ ಸಜೀವ ಬಾಂಬ್ ನಿಷ್ಕ್ರಿಯಗೊಳಿಸುವ ಸಮಯದಲ್ಲಿ ನೆರೆದಿದ್ದ ಸಾರ್ವಜನಿಕರನ್ನು ಈಗ ಚದುರಿಸಲಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ವರದಿ ಬಂದಿದೆ. ಹೊಸೂರು ರಸ್ತೆ, ಕೋರಮಂಗಲದ ಸಂಚಾರ ಮಾರ್ಗವನ್ನು ಬೇರೆ ದಿಕ್ಕಿನೆಡೆ ತಿರುಗಿಸಲಾಗಿದ್ದು, ಸಾರ್ವಜನಿಕರು ಬದಲೀ ಮಾರ್ಗವನ್ನು ಬಳಸಬೇಕೆಂದು ಪೊಲೀಸರು ಸೂಚಿಸಿದ್ದಾರೆ.

(ದಟ್ಸ್ ಕನ್ನಡವಾರ್ತೆ)

ಮತ್ತಷ್ಟು ಸುದ್ದಿಗಳು
ಕೋರಮಂಗಲ ಫೋರಂ ಮಾಲ್ ಬಳಿ ಬಾಂಬ್ ಪತ್ತೆ
ಬೆಂಗಳೂರು ಸರಣಿ ಸ್ಫೋಟ ಎಲ್ಲಿ,ಯಾವಾಗ??
ಸ್ಪೋಟದ ಹಿನ್ನಲೆಯಲ್ಲಿ ಸಂಜೆ ತುರ್ತು ಸಂಪುಟ ಸಭೆ
ಬೆಂಗಳೂರಿಗರಿಗೆ ಇಂದು ಕರಾಳ ಶುಕ್ರವಾರ
ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ