ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸರಿ ಶಾಲೆ ಪ್ರವೇಶಕ್ಕೆ 100 ಅಂಕಗಳ ಹೊಸ ಸೂತ್ರ

By Staff
|
Google Oneindia Kannada News

Nursery Admissions : 100-point formula by State Governmentಬೆಂಗಳೂರು : ನರ್ಸರಿ ಶಾಲೆಯ ಪ್ರವೇಶ ಪ್ರಕ್ರಿಯೆಯನ್ನು ಬದಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ದೆಹಲಿ ಮಾದರಿಯಲ್ಲಿ ಪ್ರವೇಶ ಕಲ್ಪಿಸಲು 100ಅಂಕಗಳ ನೀತಿಯನ್ನು ಅನುಸರಿಸಲು ನಿರ್ಧರಿಸಿದೆ.

ಏಕಕಾಲದಲ್ಲಿ ಎಲ್ಲಾ ನರ್ಸರಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ; 3-4ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಸಿಬಿಎಸ್‌ಇ ಅಧ್ಯಕ್ಷ ಅಶೋಕ್‌ ಗಂಗೂಲಿ ನೇತೃತ್ವದ ಸಮಿತಿಯ ಶಿಫಾರಸು(100 ಅಂಕಗಳ ನೀತಿ)ಗಳನ್ನು ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಈ ವಿಚಾರವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಖಚಿತಪಡಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಮ ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯವನ್ನು ಅನುಸರಿಸುತ್ತಿರುವ ಶಾಲೆಗಳ ಮೇಲೆ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೊರಟ್ಟಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಏನಿದು ನೂರು ಅಂಕದ ನೀತಿ? : ಪೋಷಕರ ವಿದ್ಯಾರ್ಹತೆಗೆ 20 ಅಂಕ, ಹೆಣ್ಣು ಮಗುವಿಗೆ 5 ಅಂಕ, ಶಾಲೆಯಲ್ಲಿ ಮಗುವಿನ ಅಣ್ಣ, ಅಕ್ಕ ಇದ್ದರೆ 20 ಅಂಕ, ಪೋಷಕರು ಶಾಲೆಯ 3ಕಿ.ಮೀ ವ್ಯಾಪ್ತಿಯಲ್ಲಿದ್ದರೆ 20ಅಂಕ, ಶಾಲೆಯ ಆಡಳಿತ ಮಂಡಳಿಗೆ 20ಅಂಕ -ಹೀಗೆ 100ಅಂಕಗಳನ್ನು ವಿಭಾಗಿಸಲಾಗುತ್ತದೆ. ಈ ಪದ್ಧತಿಯಲ್ಲಿ ಹೆಚ್ಚು ಅಂಕ ಪಡೆದ ಮಗುವಿಗೆ ಪ್ರವೇಶ ನೀಡಬೇಕು. ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎನ್ನುವುದು ನೀತಿ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X