ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮ ನಿರೀಕ್ಷೆಗಳೆಲ್ಲವೂ ನಿಜವಾಗುತ್ತಿರುವುದಕ್ಕೆ ಸಂತೋಷ ಪಡುತ್ತಿದ್ದೀರಿ. ಇವತ್ತೆಲ್ಲಾ ಹಿರಿಯರು ನಿಮಗೆ ಮುಂದಿನ ಕೆಲಸ ಕಾರ್ಯಗಳ ವಿವರ ನೀಡಲಿದ್ದಾರೆ.ವೃಷಭ : ನಿಮ್ಮ ಕನಸು ಸುಂದರವಾದುದೇ ಹೌದಾದರೂ ಅದನ್ನು ನನಸಾಗಿಸಲು ನೀವು ತುಂಬಾನೇ ಶ್ರಮಿಸಬೇಕು. ಏನೇ ಆದರೂ ಮನೆಯವರ ಸಹಕಾರ ನಿಮ್ಮ ಬಳಿ ಇರುತ್ತದೆ.
ಮಿಥುನ : ಇವತ್ತು ಅಪಾರ ಧನಲಾಭವಾಗಲಿದೆ. ತುಂಬಾ ದಿನಗಳಿಂದ ನಿರೀಕ್ಷಿಸುತ್ತಿದ್ದ ವಿಷಯ ನಿಮ್ಮ ಬಳಿಗೆ ಬಂದಿದೆ.
ಕಟಕ : ಸುಖ ಭೋಜನ ಎಂದರೆ ಅದು ಸಾಂಕೇತಿಕ ಅಷ್ಟೇ. ನಿಜ ಹೇಳಬೇಕೆಂದರೆ ಸದ್ಯದಲ್ಲಿಯೇ ತುಂಬಾ ಅಗತ್ಯ ಸಾಮಾನುಗಳೆಲ್ಲಾ ಮನೆ ತುಂಬುತ್ತದೆ.
ಸಿಂಹ : ಸುಮ್ಮನೇ ಸಿಟ್ಟು ಮಾಡಿಕೊಂಡು ಮೂಡ್ ಹಾಳು ಮಾಡಿಕೊಳ್ಳಬಾರದಪ್ಪಾ. ದಿನವಿಡೀ ತುಂಬಾ ಕೆಲಸಗಳು ನಿಮ್ಮ ಕಾದಿವೆ.
ಕನ್ಯಾ : ಮೇಲಧಿಕಾರಿಗಳ ಕಿರಿಕಿರಿ ಯಾವಾಗಲೂ ಇದ್ದದ್ದೆ ಅಲ್ವೇ? ನಿಮ್ಮ ಅಚ್ಚುಕಟ್ಟಾಗಿರುವ ಕೆಲಸವನ್ನು ತೆಗಳುವುದು ಯಾರಿಂದಲೂ ಸಾಧ್ಯವಿಲ್ಲ.
ತುಲಾ : ಇವತ್ತು ನೀವು ನಡೆವ ದಾರಿಯಲ್ಲ್ಲಿ ಹೂವು ಹಾಸಿರುವುದು. ಮುಟ್ಟಿದ ಕೆಲಸ ತಕ್ಷಣವೇ ಮುಗಿದು ಹೊಗೕಗುತ್ತದೆ. ಹಾಗೇ ದುಡ್ಡು ಕೂಡ.
ವೃಶ್ಚಿಕ : ತುಂಬಾ ಕೆಲಸವಿದೆ ಅಂತ ಆತಂಕ ಪಟ್ಟುಕೊಳ್ಳಬೇಡಿ. ಎಲ್ಲವೂ ಸುಲಲಿತವಾಗಿಯೇ ನಡೆದುಕೊಂಡು ಹೋಗುತ್ತದೆ. ಧನಲಾಭದ ಖುಷಿ ಮುಖದಲ್ಲಿಯೇ ಎದ್ದು ಕಾಣುತ್ತದೆ.
ಧನಸ್ಸು : ಮತ್ತೊಮ್ಮೆ ಜಗಳದ ಕಿರಿಕಿರಿಯನ್ನು ಹೊದ್ದುಕೊಂಡಿದ್ದೀರಿ. ಇವತ್ತು ನೀವು ಸೋತರೆ ಸಂಬಂಧವೆಲ್ಲವೂ ಸುಂದರ.
ಮಕರ : ಪಾಠವೆಲ್ಲಾ ಮರೆತು ಬರೇ ಸುತ್ತಾಟಕ್ಕೆ ಗಮನಕೊಡುತ್ತಿರುವ ಹಾಗಿದೆ. ಕೊನೇ ಪಕ್ಷ ಸ್ವಲ್ಪ ಸುಮ್ಮನಿರುವುದನ್ನಾದರೂ ಕಲಿತುಕೊಳ್ಳಬೇಕು.
ಕುಂಭ : ಪ್ರಯಾಣದ ಸುಸ್ತಿನಿಂದ ಕೆಲಸ ಕಜ್ಜಗಳು ಬಾಕಿ ಉಳಿಯುತ್ತವೆ. ಖುಷಿ ಪಟ್ಟವರೂ ನೀವೇ ಆದ್ದರಿಂದ ಇವತ್ತಿನ ಸುಸ್ತನ್ನು ಅನುಭವಿಸಬೇಕು.
ಮೀನ : ಹುಡುಗಿ ನೋಡಲು ಹೊರಟಿದ್ದರೆ ನೀವು ಲಕ್ಕಿ. ಮಾತುಕತೆಗಳೆಲ್ಲವೂ ನಿರಾಳವಾಗಿ ನಡೆದುಹೋಗುತ್ತವೆ. ಆದರೆ ಅತಿ ಆಸೆ ಗತಿಕೇಡು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications