ಇನ್‌ಫೋಸಿಸ್ ವಾರ್ಷಿಕ ಫಲಿತಾಂಶ ಬಿಡುಗಡೆ
ಬೆಂಗಳೂರು : ದೇಶದ ಷೇರುಪೇಟೆಯ ದಿಕ್ಕನ್ನೇ ಬದಲಿಸಬಲ್ಲ ಪ್ರಮುಖ ಹೈಟೆಕ್ ಕಂಪನಿಗಳ ವಾರ್ಷಿಕ ಫಲಿತಾಂಶಗಳಲ್ಲಿ ಇನ್‌ಫೋಸಿಸ್ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಫಲಿತಾಂಶ ಪ್ರಕಟಣೆಯ ಬುಧವಾರದ ಕ್ಷಣಗಳಿಗಾಗಿ ಷೇರುಪೇಟೆಯ ಎಲ್ಲರೂ ಕಾತರದಿಂದ ಕಾಯುತ್ತಿದ್ದರು.
ಪಂಡಿತರ ನಿರೀಕ್ಷಿತ ಲೆಕ್ಕಾಚಾರದಂತೆಯೇ ಫಲಿತಾಂಶ ಹೊರಬಿದ್ದಿದೆ. ಕ್ಯು 4ರ (ನಾಲ್ಕನೇ ತ್ರೆೃಮಾಸಿಕ) ನಿವ್ವಳ ಲಾಭಾಂಶದಲ್ಲಿ ಇನ್‌ಫೋಸಿಸ್ ಟೆಕ್ ಶೇ. 94.46 ಏರಿಕೆ ದಾಖಲಿಸಿದೆ. ಆರ್ಥಿಕ ವರ್ಷ(ಎಫ್.ವೈ) -01ರಲ್ಲಿ ನಿವ್ವಳ ಲಾಭ ಶೇ. 114.23. ಮಾರ್ಚ್ 31, 2001ಕ್ಕೆ ಕೊನೆಗೊಂಡ ತ್ರೆೃಮಾಸಿಕ ಅಂತ್ಯಕ್ಕೆ ಇನ್‌ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್‌ನ ನಿವ್ವಳ ಲಾಭ 1816.70 ಮಿಲಿಯನ್. ಕಳೆದ ಸಾಲಿನ ಇದೇ ಅವಧಿಯಲ್ಲಿ ಸಂಸ್ಥೆ 934.20 ಮಿಲಿಯನ್ ಲಾಭ ದಾಖಲಿಸಿತ್ತು. 2001ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೆೃಮಾಸಿಕದ ಅಂತ್ಯಕ್ಕೆ ಒಟ್ಟು ಆದಾಯ 2860 (ಎಂ.ಕ್ಯು. 2000 ತ್ರೆೃಮಾಸಿಕ ಅಂತ್ಯ) ರಿಂದ 5720.8 ಮಿಲಿಯನ್‌ಗಳಿಗೆ ಏರಿದೆ.
ನಿವ್ವಳ ಲಾಭ ಕೂಡ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಭಾರಿ ಮುನ್ನಡೆ ಗಳಿಸಿದೆ. ಮಾರ್ಚ್ 31, 2001ರ ಅಂತ್ಯಕ್ಕೆ ಅದು 6288.10 ಮಿಲಿಯನ್ ಆಗಿದೆ. ಕಳೆದ ಆರ್ಥಿಕ ವರ್ಷದ ಅಂತ್ಯದಲ್ಲಿ ಇದು 2935.20 ಮಿಲಿಯನ್ ಇತ್ತು. 2000 ಸಾಲಿನ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 9214.60 ಮಿಲಿಯನ್ ಇದ್ದ ಸಂಸ್ಥೆಯ ಒಟ್ಟು ಆದಾಯ 2001ರ ಮಾರ್ಚ್ 31ಕ್ಕೆ 19599.30 ಮಿಲಿಯನ್ ಆಗಿದೆ. ಇದು ಶೇ. 112.70 ಏರಿಕೆಯನ್ನು ದಾಖಲಿಸಿದೆ.
ಈ ಎಲ್ಲ ಸಾಧನೆಯ ಹಿನ್ನೆಲೆಯಲ್ಲಿ ಬೋರ್ಡ್ 5 ರುಪಾಯಿ ಮುಖಬೆಲೆಯ ಪ್ರತಿ ಷೇರಿನ ಮೇಲೆ 7.50 ರುಪಾಯಿಗಳ ಡಿವಿಡೆಂಡ್ (ಲಾಭಾಂಶ) ಘೋಷಿಸಿದೆ. ಅಂದರೆ, ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ಲಾಂಭಾಂಶ ಪ್ರತಿಶತ 150 ರಷ್ಟು ಘೋಷಿಸಿದಂತಾಗಿದೆ.
ಹೀಗಾಗಿ 2000 -01ನೇ ಸಾಲಿನ ಅಂತ್ಯಕ್ಕೆ ಸಂಸ್ಥೆ ಘೋಸಿಸಿರುವ ಲಾಭಾಂಶ ಮಧ್ಯಂತರ ಲಾಭಾಂಶವಾಗಿದ್ದ ಶೇ. 50 ಸೇರಿದಂತೆ ಒಟ್ಟು ಪ್ರತಿಶತ 200ನ್ನು ತಲುಪಿದಂತಾಗಿದೆ. ಅಲ್ಲದೆ ಮಂಡಳಿಯು ಷೇರ್‌ಹೋಲ್ಡಿಂಗ್ ಲಿಮಿಟ್ ಅನ್ನು ಕೂಡ ಹಾಲಿ ಇರುವ ಶೇ. 40ರಿಂದ 49ಕ್ಕೆ ಏರಿಸಲು ಅನುಮೋದನೆ ನೀಡಿದೆ. ಈ ಅನುಮೋದನೆಗೆ ಒಪ್ಪಿಗೆ ಪಡೆಯಲು 02 ಜೂನ್ 2001ರಂದು ಸರ್ವಸದಸ್ಯರ ಸಭೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications