Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಈ ದಿನ ನಿಮ್ಮದು. ಅಂದಮಾತ್ರಕ್ಕೆ ಎಲ್ಲಾ ಮೂಗಿನ ನೇರಕ್ಕೇ ಸಾಗುತ್ತದೆ ಎಂದೇನಲ್ಲ . ಆರೋಗ್ಯ ಯಥಾಸ್ಥಿತಿಯೇ. ಆದರೆ, ಆಫೀಸಿನಲ್ಲಿ ಸಾಕಷ್ಟು ಉಲ್ಲಾಸದ ವಾತಾವರಣ ಕಾಣುತ್ತೀರಿ.

ವೃಷಭ : ನಾಳೆ ಮಾಡಬೇಕಾದ ಕೆಲಸವನ್ನು ಇಂದೇ ಮುಗಿಸುವ ಉತ್ಸಾಹ ನಿಮ್ಮದು. ಇದರಿಂದಾಗಿಯೇ ಹೊಸ ಅವಕಾಶ ಹೊಸಿತಿಲಲ್ಲಿ ನಿಂತಿದೆ. ಈ ನಿಟ್ಟಿನಲ್ಲಿ ಹಿತಚಿಂತಕರ ಸಲಹೆ ಅತ್ಯಗತ್ಯ.

ಮಿಥುನ : ಉದರಬಾಧೆಗೆ ವಿಶೇಷವಾದ ಮದ್ದೇನೂ ಬೇಕಿಲ್ಲ . ವಯಸ್ಸಾಯಿತು ಅನ್ನುವ ಆಲೋಚನೆಯಿಂದ ಹೊರ ಬನ್ನಿ . ಅಧ್ಯಯನಶೀಲತೆ ನಿಮಗೆ ಸಂಗಾತಿಯಾಗಲು ಹವಣಿಸುತ್ತಿದೆ, ತೊಡಗಿಸಿಕೊಳ್ಳಿ.

ಕಟಕ : ಕೋರ್ಟ್‌ ವ್ಯವಹಾರಗಳಲ್ಲಿ ಅನುಕೂಲದ ದಿನ. ವಾಣಿಜ್ಯ ಒಪ್ಪಂದಗಳೂ ಹಿತಕರವಾಗಿಯೇ ಇರುತ್ತವೆ. ಅದರಿಂದಾಗಿ ಈ ದಿನ ನಿಮಗೆ ಯಶಸ್ಸಿನ ದಿನ ಅನ್ನಲಿಕ್ಕೆ ಅಡ್ಡಿಯಿಲ್ಲ.

ಸಿಂಹ : ಆರೋಗ್ಯದಲ್ಲಿ ಏರುಪೇರು ಸಹಜವಾದ್ದರಿಂದ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ . ಕುಲದೇವರನ್ನು ಅರ್ಚಿಸಿ. ವೃಥಾ ನೆಮ್ಮದಿ ಕೆಡಿಸಿಕೊಳ್ಳಬೇಡಿ.

ಕನ್ಯಾ : ನೀವು ಮಾಡುತ್ತಿರುವ ಕೆಲಸದ ಫಲಶ್ರುತಿ ಏನೆಂಬುದರ ಬಗ್ಗೆ ಮತ್ತೊಮ್ಮೆ ಚಿಂತಿಸುವುದು ಒಳ್ಳಿತು. ಹೊಸ ಅವಕಾಶಗಳಿಗೆ ಅಡಿಯಿಡುವಾಗಲೂ ಈ ಅವಲೋಕನ ಒಳ್ಳೆಯದೇ.

ತುಲಾ : ಅತಿಥಿಗಳ ಕಾರಣವಾಗಿ ಸಾಕಷ್ಟು ಹಣ ಕೈ ಬಿಡಲಿದೆ. ಇದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇಲ್ಲವಾದುದರಿಂದ ಬೇಜಾರಿಲ್ಲದೆ ಅನುಭವಿಸಿಬಿಡಿ. ನೀವು ಅತಿಥಿಯಾದಾಗ ಸೇಡು ತೀರಿಸಿಕೊಂಡರಾಯಿತು.

ವೃಶ್ಚಿಕ : ಇತರರ ಕ್ಷುಲ್ಲಕತನವನ್ನು ಎತ್ತಿ ತೋರುವ ನಿಮ್ಮ ನಡವಳಿಕೆ ಅದಕ್ಕಿಂತ ಭಿನ್ನವೇನಲ್ಲ . ಮಿತಿಗಳನ್ನು ಮೀರಿದ್ದೇ ಆದಲ್ಲಿ ಇಷ್ಟ ಪಾತ್ರರ ಪ್ರೀತಿ, ವಿಶ್ವಾಸಕ್ಕೆ ಎರವಾಗುತ್ತೀರಿ.

ಧನಸ್ಸು : ಕುಟುಂಬದೊಂದಿಗಿನ ಹರ್ಷದ ಲಹರಿ ಮುಂದುವರಿಯುತ್ತದೆ. ನಮ್ಮ ಮನೆ, ಅಕ್ಕರೆ ತುಂಬಿದ ಚಂದದ ಅರಮನೆ ಎಂದು ನೀವು ಹಾಡಿ ಕುಪ್ಪಳಿಸಿದರೂ ಅಚ್ಚರಿಯಿಲ್ಲ.

ಮಕರ : ಪರೀಕ್ಷೆಗಳು ಹೊಸಿತಿಲಲ್ಲೇ ಇರುವುದರಿಂದ ನೀವು ಸರಸ್ವತಿಯಾಗುವ ಕಾಲ ಹತ್ತಿರವಾಯಿತು. ಈವರೆಗಿನ ಚಟುವಟಿಕೆಗಳಿಗೆ ನಮಸ್ಕಾರ ಹೇಳಿ ದೀಕ್ಷೆ ವಹಿಸಿ. ಯಶಸ್ಸಿನ ಬಗ್ಗೆ ಅಂಜುವ ಕಾರಣವೇನೂ ಇಲ್ಲ.

ಕುಂಭ : ಅಕ್ಕಿಯೂ ಸವೆಯಬಾರದು, ನಂಟೂ ಉಳಿಯಬೇಕು ಅನ್ನುವ ವ್ಯವಹಾರತನಕ್ಕಿದು ಕಾಲವಲ್ಲ . ಇಷ್ಟಕ್ಕೂ ಬಲವಂತದ ಸಂಬಂಧಗಳು ಗಾಢವಾದ ನೆನಪನ್ನಾಗಲೀ ವಿಷಾದವನ್ನಾಗಲೀ ಉಳಿಸುವುದಿಲ್ಲ.

ಮೀನ : ದೊಡ್ಡತನ ಅನ್ನುವುದನ್ನು ಗೊಮ್ಮಟನ ನೋಡಿ ಕಲಿಯಬೇಕು ಎಂದು ಯಾರಾದರೂ ಹೇಳಿದರೆ ಅಪಾರ್ಥ ಮಾಡಿಕೊಳ್ಳುವುದು ಬೇಡ. ನಿಮ್ಮ ಬಲಹೀನತೆಗಳು ನಿಮಗೆ ಗೊತ್ತಿಲ್ಲದ್ದೇನೂ ಅಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+