Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಬೊಗಸೆಯಷ್ಟೇ ನೀರು ದಕ್ಕುವುದು ಎನ್ನುವ ಅರಿವನ್ನು ನಿಮ್ಮದಾಗಿಸಿಕೊಳ್ಳಿ. ಇದರಿಂದಾಗಿ ಅತಿಯಾದ ನಿರೀಕ್ಷೆಗಳು ತರುವ ನಿರಾಶೆಯಿಂದ ಪಾರಾಗುತ್ತೀರಿ. ಈ ದಿನ ನಿಮಗೆ ಸಾಧಾರಣದ್ದು .

ವೃಷಭ :ಹಳೆಯ ವ್ಯಾಜ್ಯವೊಂದು ನಿಮಗೆ ಅನುಕೂಲಕರವಾಗಿ ಬಗೆಹರಿಯಲಿದೆ. ವೃತ್ತಿಯಲ್ಲೂ ಪ್ರಗತಿ ಕಾಣುತ್ತೀರಿ. ಆರೋಗ್ಯದ ಬಗ್ಗೆ ತುಸು ಹೆಚ್ಚಿನ ನಿಗಾ ವಹಿಸಿ.

ಮಿಥುನ : ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನಸ್ಸಿನ ಸಂತೋಷ ನಿಮ್ಮನ್ನೇ ಅವಲಂಬಿಸಿದೆ. ಆದರೆ, ಇತರರ ಮನಸ್ಥಿತಿಯೂ ನಿಮ್ಮ ಮೂಡಿಗೆ ತಕ್ಕನಾಗಿರುವುದು ಈ ದಿನ ಸಾಧ್ಯವಿಲ್ಲ .

ಕಟಕ : ಯಾರು ಏನು ಮಾಡುವರು ಎನ್ನುವ ಉದಾಸೀನ ಒಳ್ಳೆಯದಲ್ಲ . ನಿಮ್ಮ ಬಗ್ಗೆ ನಿಮಗಿಂತಾ ಅವರಿಗೇ ಚೆನ್ನಾಗಿ ಗೊತ್ತು . ಈ ಕಾರಣದಿಂದಲೇ ಅವರೆದುರು ಸೋಲುತ್ತಿದ್ದೀರಿ.

ಸಿಂಹ : ಮಳೆಬಿಲ್ಲನ್ನು ಬೇಸಗೆಯಲ್ಲಿ ಕಾಣುವ ಕನಸನ್ನು ಮೆಚ್ಚಬಹುದಾದರೂ, ಅದು ಸಾಧ್ಯವಾದೀತೆಂದು ಭರವಸೆ ಕೊಡುವುದು ಹೇಗೆ. ಇಷ್ಟಕ್ಕೂ ನೀವು ಎದೆಯಲ್ಲಿ ಈಗಾಗಲೇ ಜತನವಾಗಿರುವ ಬಣ್ಣಗಳನ್ನು ಏಕೆ ಗುರ್ತಿಸುತ್ತಿಲ್ಲ .

ಕನ್ಯಾ : ದುಡ್ಡಿನಿಂದ ಏನೆಲ್ಲಾ ಕೊಳ್ಳಬಹುದು ಎನ್ನುವ ಸಂಗಾತಿಯ ಮಾತಿಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದು ಬೇಡ. ನಿಮ್ಮ ಭಾವನೆಗಳೆದುರು ಅವರ ವ್ಯವಹಾರಿಕತನ ಸೋಲುತ್ತದೆ.

ತುಲಾ : ಏನ ಮಾಡಿದರೇನು ಭವ ಹಿಂಗದು. ಆದರೆ ಏನಾದರು ಮಾಡುತಿರು ತಮ್ಮಾ ಅನ್ನುತ್ತಾರೆ ಬಲ್ಲವರು. ಮನಸ್ಸು ಖಾಲಿ ಎನ್ನುವ ತಲ್ಲಣ ಬೇಡ. ಮಳೆ ಹೊಸಿತಿಲಲ್ಲೇ ಭೋರೆನ್ನುತ್ತಿದೆ.

ವೃಶ್ಚಿಕ : ಆಫೀಸಿನಲ್ಲಿ ಕತ್ತೆ ದುಡಿತ. ಬೇಜಾರು. ಅಂದುಕೊಂಡದ್ದೆಲ್ಲಾ ನಿಮ್ಮ ಎಣಿಕೆಗೆ ತಕ್ಕಂತೇನೂ ನಡೆಯುವುದಿಲ್ಲ . ಆ ರೀತಿಯ ನಿರೀಕ್ಷೆಗಳಲ್ಲಿ ರುವುದು ನಿರಾಶೆ ಮಾತ್ರ.

ಧನಸ್ಸು :ಗಾಣದೆತ್ತಿನಂತೆ ದುಡಿತಕ್ಕೆ ಒಗ್ಗಿ ಹೋಗಿರುವ ನಿಮಗೆ ರಜೆ ಮಹಾ ಹಿಂಸೆಯೇ ಸರಿ. ಆದರೆ, ನಿಮ್ಮ ಕುಟುಂಬ ನಿಮ್ಮೊಂದಿಗೆ ಕಾಲ ಕಳೆಯಲು ಬಯಸುತ್ತಿದೆ. ಈ ರಜೆಯನ್ನು ಅವರ ಸಂತೋಷಕ್ಕೆ ಮೀಸಲಿಡಿ.

ಮಕರ : ಸಾಹಸ ಕೃತ್ಯಗಳಲ್ಲಿ ಸುಖ ಕಾಣುತ್ತೀರಿ. ಆದರೆ, ದುಂದು ವೆಚ್ಚಗಳಿಂದ ನೋಯುತ್ತೀರಿ. ಈ ದಿನ ಕೊಂಚ ಸುತ್ತಾಟವಿದೆ. ಅದನ್ನು ಖುಷಿಕರವಾಗಿ ಬದಲಿಸಿಕೊಳ್ಳಿ.

ಕುಂಭ : ನೀವು ಗೆಳೆಯರ ನಿರೀಕ್ಷೆಗಳನ್ನು ಹುಸಿ ಮಾಡುತ್ತಿದ್ದೀರಿ. ಇನ್ನೂ ಲಾಭ ನಷ್ಟಗಳ ಲೆಕ್ಕಾಚಾರದಲ್ಲೇ ಇರುವುದಾದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ವ್ಯರ್ಥ. ಖುಷಿಯ ದಿನ.

ಮೀನ : ಕುಟುಂಬದೊಂದಿಗೆ ಮೋಜಿನ ದಿನ. ಅಂದಮೇಲೆ ಜೇಬು ಸಾಕಷ್ಟು ಹಗುರಾಗಲೇಬೇಕು. ತಿಂಗಳ ಕೊನೆಯಾದ್ದರಿಂದ ಉಭಯ ಸಂಕಟ ಅನುಭವಿಸುತ್ತೀರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+