Get Updates
Get notified of breaking news, exclusive insights, and must-see stories!

ಹಣ ಸುಲಿಯಲು ಸುಳ್ಳು ದಾಖಲೆ ಸೃಷ್ಟಿಸಿದಸ್ತ್ರೀರೋಗ ತಜ್ಞೆ ಬಂಧನ

ವಿಜಯವಾಡ : ಭಾರತದ ಹೆಂಗಸರಲ್ಲಿ ಗರ್ಭಧಾರಣಾ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಅದಕ್ಕೆ ಪರಿಹಾರ ಕಂಡು ಹಿಡಿಯುವಂಥ ಸಂಶೋಧನೆಗಳನ್ನು ವೈದ್ಯರು ನಡೆಸಿದ್ದಾರೆ. ಕೆಲವು ದುಬಾರಿ ಕೃತಕ ಗರ್ಭಧಾರಣಾ ವಿಧಾನಗಳ ಮೂಲಕ ಎಷ್ಟೋ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಗರ್ಭ ಕಟ್ಟುವಂತೆ ಮಾಡುತ್ತಿದ್ದಾರೆ. ಇಂಥ ಚಿಕಿತ್ಸೆಗೆ ಸಾಲುಗಟ್ಟಿ ನಿಂತವರು ಮೊದಲೇ ಭಾವನಾತ್ಮಕವಾಗಿ ಕುಸಿದಿರುತ್ತಾರೆ. ಅಂಥಾದರಲ್ಲಿ ಅವರ ಸಮಸ್ಯೆಗೆ ಪರಿಹಾರ ಕೊಡಬೇಕಾದ ವೈದ್ಯರೇ ನಂಬಿಕೆ ದ್ರೋಹ ಮಾಡಿದರೆ? ಅಂಥ ವರದಿ ಇಲ್ಲಿದೆ...

ವಿವಿಧ ಪರೀಕ್ಷೆಗಳ ನೆಪವೊಡ್ಡಿ ಗರ್ಭಧಾರಣಾ ಸಮಸ್ಯೆ ಎದುರಿಸುತ್ತಿರುವ ಅನೇಕ ಮಹಿಳೆಯರಿಂದ ಸಿಕ್ಕಾಪಟ್ಟೆ ಹಣ ದೋಚಿ, ಅವರನ್ನು ಗರ್ಭಿಣಿಯರೆಂದು ನಂಬಿಸಿ ಮೋಸ ಮಾಡುತ್ತಿದ್ದ ಓರ್ವ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ, ಆಕೆಯ ಪತಿ ಮತ್ತು ಒಬ್ಬ ರೇಡಿಯಾಲಜಿಸ್ಟನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಹೆಸರು ಡಾ.ಕೆ.ರಮಾದೇವಿ. ಗರ್ಭಧಾರಣೆಯ ಸಮಸ್ಯೆ ಹೊತ್ತು ಈಕೆಯ ಬಳಿಗೆ ಬರುವ ಹೆಂಗಸರಿಗೆ ಒಂದಾದ ಮೇಲೊಂದರಂತೆ ಅನಗತ್ಯ ಸರಣಿ ಪರೀಕ್ಷೆಗಳನ್ನು ಮಾಡಿ, ಕೃತಕ ಗರ್ಭ ಕಟ್ಟಿಸುವ ವಿಧಾನದಿಂದ ಅವರಿಗೆ ಚಿಕಿತ್ಸೆ ನೀಡಿ, ಕಂಡಾಪಟ್ಟೆ ಹಣ ಸುಲಿಯುತ್ತಿದ್ದರು. ಪರೀಕ್ಷೆಗಳ ಸುಳ್ಳು ದಾಖಲೆ ಸೃಷ್ಟಿಸಿ ಅವರನ್ನು ಗರ್ಭಿಣಿಯಾಗಿದ್ದಾರೆಂದು ನಂಬಿಸುತ್ತಿದ್ದರು. ಆಲ್ಫಾ ಸ್ಕ್ಯಾನಿಂಗ್‌ ಸೆಂಟರ್‌ನ ಕಾರ್ಯ ನಿವಾಹಕ ನಿರ್ದೇಶಕ ಟಿ.ವಿ.ಎಸ್‌.ಎನ್‌.ಮೂರ್ತಿ ಎಂಬುವರೂ ಈ ಸುಳ್ಳು ದಾಖಲೆಗಳನ್ನು ಸೃಷ್ಟಿಸುವಲ್ಲಿ ಕೈ ಮಿಲಾಯಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಇಂಟ್ರಾ ಸೈಟೋಪ್ಲಾಸಮ್‌ ಸ್ಪರ್ಮ್‌ ಇಂಜೆಕ್ಷನ್‌’ ಎಂಬ ವಿಧಾನ. ಈ ಚಿಕಿತ್ಸೆಯಿಂದ ಗರ್ಭಧಾರಣಾ ಸಂಭವನೀಯತೆ ಕೇವಲ ಶೇ. 50ರಷ್ಟು. ಚುಚ್ಚುಮದ್ದಿನ ಮೂಲಕ ಹೆಂಗಸರಿಗೆ ಗರ್ಭ ಧರಿಸುವಂಥ ಹಾರ್ಮೋನ್‌ಗಳನ್ನು ಈ ವಿಧಾನದಲ್ಲಿ ಕೊಡಲಾಗುವುದು.

ಕೆಲವು ಚುಚ್ಚುಮದ್ದುಗಳನ್ನು ಕೊಟ್ಟು ಹಣ ಸುಲಿಯುವುದು, ಗರ್ಭಿಣಿಯಾಗಿದ್ದೀರೆಂದು ಸುಳ್ಳು ದಾಖಲೆ ಸೃಷ್ಟಿಸುವುದು. ಕೆಲ ದಿನಗಳ ನಂತರ ಹೆಂಗಸರಿಗೆ ತಾವು ಗರ್ಭಿಣಿಯರಾಗಿಲ್ಲ ಎಂಬ ವಿಚಾರ ಸ್ಪಷ್ಟವಾಗಿ ಆಕೆಯ ಬಳಿಗೆ ಹೋದರೆ, ‘ಹೇಳಿದಂತೆ ವಿಶ್ರಾಂತಿ ತೆಗೆದುಕೊಂಡಿಲ್ಲ. ಹಾಗಾಗಿದೆ, ಹೀಗಾಗಿದೆ’ ಎಂಬ ಸಬೂಬು ಹೇಳಿ, ಗರ್ಭಪಾತ ಮಾಡಿಸುವಂತೆ ಹೇಳುವುದು. ಮತ್ತೆ ಅದಕ್ಕೂ ಬಾಯಿಗೆ ಬಂದಷ್ಟು ಹಣ ಸುಲಿಯುವುದು. ಈ ರೀತಿ ಡಾ.ರಮಾದೇವಿ ಸುಮಾರು 30 ಹೆಂಗಸರಿಗೆ ಮೋಸ ಮಾಡಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಈಕೆಯಿಂದ ಮೋಸಕ್ಕೊಳಗಾದ ಸೀತಾಲಕ್ಷ್ಮಿ ಎಂಬುವರು ಭಾರತೀಯ ಮಹಿಳೆಯರ ರಾಷ್ಟ್ರೀಯ ಸಂಘಟನೆ (ಎನ್‌ಎಫ್‌ಐಡಬ್ಲ್ಯು) ಗೆ ದೂರು ಕೊಟ್ಟ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 420 ಹಾಗೂ ಅಪರಾಧಿ ಪಿತೂರಿ (ಪರಿಚ್ಛೇದ 120 ಬಿ) ಮೊಕದ್ದಮೆ ದಾಖಲಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+