ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗದ ಕಲ್ಲಿನ ಕಥೆ ವೈಬ್‌ಸೈಟ್‌ಗೆ ಬಂತು

By Super
|
Google Oneindia Kannada News

ಚಿತ್ರದುರ್ಗ : ತಮ್ಮ ತಮ್ಮ ವೈಭವವನ್ನು ಹೇಳಿಕೊಳ್ಳುವುದಕ್ಕೆ ರಾಜ್ಯದ ಜಿಲ್ಲೆಗಳೆಲ್ಲಾ ಒಂದೊಂದು ವೆಬ್‌ ಸೈಟನ್ನು ಆರಂಭಿಸುತ್ತಿರುವಾಗಲೇ ಸಾಹಸ, ಶೌರ್ಯಗಳ ಗುಂಗನ್ನು ಇನ್ನೂ ಉಳಿಸಿಕೊಂಡಿರುವ ಕೋಟೆಗಳ ತವರು ಚಿತ್ರದುರ್ಗದ ಕುರಿತ ವೆಬ್‌ ಸೈಟ್‌ ಮಾನಿಟರ್‌ ಏರಿದೆ. ಜಿಲ್ಲೆಯ ಇತಿಹಾಸ, ಕೋಟೆ ಕೊತ್ತಲಗಳ ಬಗ್ಗೆ ಸಂಪೂರ್ಣ ವಿವರವಿರುವ ಚಿತ್ರದುರ್ಗ ಸಿಟಿ ಡಾಟ್‌ ಕಾಮ್‌ ನವಂಬರ್‌ 6 ರಂದು ಆರಂಭವಾಗಿದೆ.

ಮದ್ರಾಸ್‌ನಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಡಿ. ವಾಗೀಶ್‌ ಈ ವೆಬ್‌ ಸೈಟನ್ನು ತಯಾರಿಸಿದ್ದಾರೆ. ವೆಬ್‌ಸೈಟಿನಲ್ಲಿ ಚಿತ್ರದುರ್ಗದ ಕೋಟೆ ಕೊತ್ತಲಗಳ ವಿವರ, ಪ್ರವಾಸಿಗರಿಗೆ ಮಾಹಿತಿ, ಸಿನೆಮಾ ಪುಟ, ಜಿಲ್ಲೆಯ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿ ಚಿತ್ರ, ಜಿಲ್ಲಾ ಸುದ್ದಿಗಳು, ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳ ಬಗ್ಗೆ ನಿಮಗೆ ವಿವರವಾದ ಮಾಹಿತಿ ಇದೆ.

ಬೆಂಗಳೂರು, ಮಂಗಳೂರಿನಂತಹ ಮೆಗಾ ಸಿಟಿಗಳು ಸೈಟಿನ ತುಂಬಾ ತಮ್ಮೂರಿನ ಹಿರಿಮೆ ಗರಿಮೆಯನ್ನು ಬಿಚ್ಚಿಡುತ್ತಿರುವಾಗ ಇತರ ಜಿಲ್ಲೆಗಳು ತಮ್ಮದೇ ಆದ ವೈಶಿಷ್ಟ್ಯವನ್ನು ರಂಗಾಗಿಸಿ ವಿಶ್ವತೆರೆಗೆ ಏರಿಸುವಲ್ಲಿ ಸಫಲರಾಗಿದ್ದಾರೆ. ಈ ಹಾದಿಯಲ್ಲಿ ಬೆಳಗಾಂ, ಧಾರವಾಡ, ಬಾಗಲಕೋಟೆ, ಮೈಸೂರುಗಳೂ ನಡೆಯುತ್ತಿವೆ. ಧಾರವಾಡದ ಸಾಹಿತ್ಯ ಕ್ಷೇತ್ರ, ಮೈಸೂರಿನ ಪ್ರವಾಸೀ ತಾಣಗಳು ಜೊತೆಗೆ ಸುದ್ದಿಗಳು, ಬೆಳಗಾಂನಲ್ಲಿನ ಶೈಕ್ಷಣಿಕ ಮತ್ತು ಮನರಂಜನಾ ವಿಷಯಗಳ ಬಗ್ಗೆ ಡಾಟ್‌ ಕಾಂಗಳು ಬೆಳಕು ಚೆಲ್ಲುತ್ತವೆ.

ಉಡುಪಿ, ಬಿಜಾಪುರ, ಹುಬ್ಬಳ್ಳಿ, ಶಿವಮೊಗ್ಗಾ ಮತ್ತು ಧಾರವಾಡ ಜಿಲ್ಲೆಗಳ ಕುರಿತು ಇರುವ ಡಾಟ್‌ ಕಾಂಗಳು ತಮ್ಮೂರಿನ ಸುದ್ದಿ ಸೊಗಡನ್ನು ನೆಟ್‌ನೊಳಗೆ ತರಲು ಜಾಗ ಕಾಯ್ದಿರಿಸಿದ್ದಾರೆ. ಅವರೆಲ್ಲಾ ಆ ಜಿಲ್ಲೆಗಳನ್ನು ಇಂಟರ್‌ನೆಟ್‌ಗೆ ಭಟ್ಟಿಯಿಳಿಸುವ ಮುಂಚೆ ಹಾವೇರಿ, ಕೊಪ್ಪಳ, ಕೋಲಾರ, ಗದಗದಂತಹ ಊರುಗಳು ಮಾತ್ರ ಬಾಕಿಯಿರುವುದು. ವಾಗೀಶ್‌ರಂತಹ ಅನೇಕ ಇಂಜಿನಿಯರ್‌ಗಳು ಈ ಊರಿನಲ್ಲಿ ಕೆಲಸ ಮಾಡುತ್ತಿರಬಹುದು. ಊರಿನಲ್ಲಿರುವ ವಿಶೇಷ ದೇವಸ್ಥಾನವನ್ನೋ, ಆದಿ ಕಾಲದ ಬಸದಿ, ಮಸೀದಿ, ಕೋಟೆಯ ಅವಶೇಷಗಳನ್ನೋ ನೋಡುತ್ತಲೇ ಓಡಾಡಿರಬಹುದು. ಆದರೆ ಯಾವುದೋ ಕುಷ್ಟಗಿಯೆಂಬ ಊರಿನ ಮೂಲೆಯಿಂದ ಅಮೆರಿಕಾಕ್ಕೆ ಹೋಗಿ ದುಡಿಯುತ್ತಿರುವಾತನಿಗೆ ತನ್ನೂರಿನ ಹುಲ್ಲು ಹಾಸು ತನ್ನ ಕಂಪ್ಯೂಟರಿನ ಮೇಲೆ ಗೋಚರಿಸಿದಾಗ ಆಗುವ ಖುಷಿಗೆ ಸಾಟಿ ಇದೆಯೇ ?

English summary
This website gives complete information about this historical place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X