ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು?
ಕರ್ನಾಟಕ ಸೇರಿದಂತೆ ದೇಶದಲ್ಲಿ ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಿಸಿಲಿನ ತಾಪಕ್ಕೆ ಜನರು ಫ್ಯಾನ್ಸ್ ಕೂಲರ್, ಎಸಿಗಳ ಮೊರೆ ಹೋಗುತ್ತಿದ್ದಾರೆ. ಕೆಲವರಲ್ಲಿ 'ಏರ್ ಕೂಲರ್ ಉತ್ತಮವೋ' ಅತವಾ 'ಎಸಿ (ಏರ್ ಕಂಡಿಷನರ್)' ಉತ್ತಮವೋ? ಯಾವುದು ಆಯ್ಕೆ ಮಾಡುವುದೆಂಬ ಗೊಂದಲ ಇದೆ. ಏರ್ ಕೂಲರ್‌ಗಳು ಬಜೆಟ್ ಸ್ನೆಹಿ ಆಯ್ಕೆ ಹೌದಾದರೂ, ಏರ್ ಕಂಡಿಷನರ್ ಹೆಚ್ಚು ಆರಾಮದಾಯಕ, ತಂಪು ಅನುಭವ ನೀಡುತ್ತವೆ. ಏರ್ ಕೂಲರ್ vs ಏರ್ ಕಂಡಿಷನರ್ ಮಧ್ಯೆ ಹಲವು ವ್ಯತ್ಯಾಸಗಳಿವೆ.
ಬೇಸಿಗೆ ವೇಳೆ ಮನೆಯಲ್ಲಿ ಎಷ್ಟು ಜನ, ಅಳವಡಿಕೆ ಎಲ್ಲಿ, ಎಷ್ಟು ಜನರ ಬಳಕೆ ಆಧಾರದಲ್ಲಿ ನೀವು ಸರಿಯಾದ ಉಪಕರಣ ಆಯ್ಕೆ ಮಾಡಬಹುದು. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಒಂದಷ್ಟು ವಿವರಣೆ ಇಲ್ಲಿ ಕೊಡಲಾಗಿದೆ. ಖರೀದಿಸುವ ಗ್ರಾಹಕರಿಗೆ ಇದು ಸಹಾಯಕ್ಕೆ ಬರಬಹುದು. ಮೊದಲಿಗೆ "ಏರ್ ಕೂಲರ್ ಮತ್ತು ಕಂಡಿಷನರ್ ನಡುವಿನ ವ್ಯತ್ಯಾಸವೇನು? ಎಂಬ ಪ್ರಮುಖ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ.

ಕೂಲರ್ vs ಎಸಿ ನಡುವಿನ ವ್ಯತ್ಯಾಸ
ಏರ್ ಕೂಲರ್ ಮತ್ತು ಏರ್ ಕಂಡಿಷನರ್ ಮಧ್ಯ ಪ್ರಮುಖ ವ್ಯತ್ಯಾಸಗಳಿವೆ. ಕ್ರಮವಾಗಿ ನೋಡುವುದಾದರೆ, ಏರ್ ಕೂಲರ್ ಬಜೆಟ್ ಸ್ನೇಹಿಯಾಗಿದೆ. ಕಡಿಮೆ ವಿದ್ಯುತ್ ಬಳಸಿಕೊಳ್ಳುತ್ತದೆ. ಕೂಲರ್ ಹೊರಗಿನ ಗಾಳಿ ಹಿಡಿದು ಸ್ಥಳ ತಂಪಾಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಹವಾನಿಯಂತ್ರಣ ವೇಗವಾಗಿರುವುದಿಲ್ಲ, ಉತ್ತಮವಾಗಿರುವುದಿಲ್ಲ. ಕೂಲರ್ ಪರಿಸರಕ್ಕೆ ಹಾನಿ ಮಾಡುವ ಕ್ಲೋರೋಫ್ಲೋರೋಕಾರ್ಬನ್ (CFO) ಹೊರ ಸೂಸುವುದಿಲ್ಲ. ಕೋಣೆಯ ತೇವಾಂಶದ ಮಟ್ಟ ಕಾಯ್ದುಕೊಳ್ಳುತ್ತದೆ. ಆಸ್ತಮಾ ಮತ್ತು ಇತರ ಅಲರ್ಜಿ ಸಮಸ್ಯೆಗಳಿರುವ ರೋಗಿಗಳಿಗೆ ಕೂಲರ್ ಉತ್ತಮ ಆಯ್ಕೆ ಆಗಿದೆ.
ಕೂಲರ್‍ಗೆ ನಿತ್ಯ ನೀರು ಹಾಕಬೇಕಿರುತ್ತದೆ. ಇದರ ನಿರ್ವಹಣೆ ತುಂಬ ಸುಲಭವಾಗಿರುತ್ತದೆ. ಒಳಾಂಗಣ ಮತ್ತು ಹೊರಾಂಗಣ ಎಲ್ಲಿ ಬೇಕಾದರು ಇಟ್ಟುಕೊಳ್ಳಬಹುದು. ಅದರೆ ಎಸಿ ಈ ರೀತಿ ಅಲ್ಲ. ಈಗಾಗಿ ಎಸಿ ಉತ್ತಮವೇ? ಕೂಲರ್? ಉತ್ತಮವೇ ಎಂಬ ಚರ್ಚೆ ಬೇಸಿಗೆಯಲ್ಲಿ ಶುರುವಾಗಿದೆ.
ಎಸಿ ದುಬಾರಿ, ಪರಿಸರಕ್ಕೆ ಹಾನಿ
ಮನೆ, ಕೊಠಡಿಗೆ ಎಸಿ ಅಳವಡಿಕೆ ದುಬಾರಿಯಾಗುತ್ತದೆ. ಒಂದೇ ಕಡೆಗೆ ಮಾತ್ರ ಸಿಮೀತವಾಗುತ್ತದೆ. ಕೂಲರ್‍ಗಿಂತ ಹೆಚ್ಚಿನ ವಿದ್ಯುತ್ ಬಳಸಿಕೊಳ್ಳುತ್ತದೆ. ಕೋಣೆಯಲ್ಲಿನ ತಾಪಮಾನವನ್ನು ಕಡಿಮೆ ಮಾಡಲು ಹವಾನಿಯಂತ್ರಣದ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತದೆ. ಒಂದು ಕೊಠಡಿ ಬಹುಬೇಗ ತಂಪಾಗಿಸುತ್ತದೆ. ಐರಾಶಾಮಿ ಸೌಕರ್ಯ, ಉತ್ತಮ ಅನುಭವ ನೀಡುತ್ತದೆ. ಎಸಿಯು ಪರಿಸರಕ್ಕೆ ತೊಂದರೆ ಉಂಟು ಮಾಡುವ ಕ್ಲೋರೋಫ್ಲೋರೋಕಾರ್ಬನ್‌ಗಳನ್ನು (CFOs) ಹೊರಸೂಸುತ್ತವೆ. ನಿರಂತರವಾಗಿ ತೇವಾಂಶದ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಸಿ ಮನುಷ್ಯರ ಚರ್ಮ ಮತ್ತು ಕಣ್ಣುಗಳಿಗೆ ಹಾನಿ ಉಂಟು ಮಾಡುತ್ತವೆ.
ನಿತ್ಯವು ಎಸಿ ನಿರ್ವಹಣೆ ಮಾಡಬೇಕೆಂದಿರುವುದಿಲ್ಲ. ಒಮ್ಮೆ ನಿರ್ವಹಣೆಗೆ ಮುಂದಾರೆ ಹೆಚ್ಚಿನ ಖರ್ಚು ಬರುತ್ತದೆ. ಎಸಿ ಮನೆ, ಕಚೇರಿಯ ಒಳಾಂಗಣ ಬಳಕೆಗೆ ಮಾತ್ರ ಉತ್ತಮ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ. ಎಸಿಯಲ್ಲಿ ಒಂದಷ್ಟು ಸೆಟ್ಟಿಂಗ್ಸ್‌ಗಳು ಸಿಗುತ್ತವೆ. ಕೇವಲ ತಂಪಿಗೆ ಮಾತ್ರವಲ್ಲದೇ, ತಾಪಮಾನ ಕಾಯ್ದುಕೊಳ್ಳಲು ಅನುಕೂಲಕರವಾಗಿದೆ.
ಕೂಲರ್ ಬಜೆಟ್ ಸ್ನೇಹಿ, ವಿದ್ಯುತ್ ಉಳಿಕೆ
ಸಾಮಾನ್ಯವಾಗಿ ಒಂದು ಕೂಲರ್ ಆರಂಭಿಕ ದರ ಸುಮಾರು 3000 ರೂಪಾಯಿ ಆಗಿದೆ. ಅದೇ ಎಸಿ ಆರಂಭಿಕ ದರ ಕನಿಷ್ಠ 20,000 ರೂಪಾಯಿ ಇದೆ. ಹೀಗಾಗಿ ದರದ ಕಾರಣಗಳಿಗೂ ಕೂಲರ್ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕೂಲರ್‌ಗಿಂತ ಎಸಿಗೆ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತದೆ. ಇದರಿಂದ ವಿದ್ಯುತ್ ಬಿಲ್ ಸಹ ಹೆಚ್ಚಬಹುದು. ಎಸಿಗೆ ಹೋಲಿಕೆ ಮಾಡಿದರೆ ಕೂಲರ್ ಶೇ.80ರಷ್ಟು ವೆಚ್ಚ ಕಡಿತಗೊಳಿಸುತ್ತದೆ.
(ವಿಶೇಷ ಸೂಚನೆ: ಈ ಸುದ್ದಿಯು ನಿಮಗೆ ಏರ್ ಕೂಲರ್, ಏರ್ ಕಂಡಿಷನರ್ ಮಧ್ಯದ ವ್ಯತ್ಯಾಸ, ಬಳಕೆ, ನಿರ್ವಹಣೆ ಕುರಿತು ಮಾಹಿತಿ ನೀಡುವುದಾಗಿದೆ. ನಿಮ್ಮ ಅಗತ್ಯತೆ ನೋಡಿಕೊಂಡು ಯಾವುದನ್ನಾದರು ಖರೀದಿಸಿ)












Click it and Unblock the Notifications