ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಕ್ರಿಯೆ

By Staff
|
Google Oneindia Kannada News
ರಾಜ್‌ ನಾಡಿಗೇನು ಕೊಟ್ಟಿದ್ದಾರೆ?
ನಾಡಿನ ಅತ್ಯಂತ ಜನಪ್ರಿಯ ವ್ಯಕ್ತಿಯ ಬದುಕು- ಸಾಧನೆ ಬಗೆಗೆ ವಾರೆನೋಟ

ಅಸಂಗತ ಮತ್ತು ಅಸಂಬದ್ಧ ವಾದ ಸರಣಿ....

ಮಾನ್ಯರೇ,

ರಾಜ್‌ ನಾಡಿಗೇನು ಕೊಟ್ಟಿದ್ದಾರೆ ? ಎಂಬ ಲೇಖನದ ಬಗ್ಗೆ ಹಲವರ ಪ್ರತಿಕ್ರಿಯೆಗಳನ್ನು ಓದಿದೆ.

ಒಬ್ಬ ಅದ್ಭುತ ನಟನಾಗಿ, ಅಣ್ಣಾವ್ರು ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಜನತೆಗೆ ನೀಡಿರುವ ಕೊಡುಗೆ, ಮಾಡಿರುವ ಸೇವೆ ಅಪಾರವಾದದ್ದು.

ಪ್ರತಿಯಾಬ್ಬನೂ ತನ್ನ ತನ್ನ ಕ್ಷೇತ್ರದಲ್ಲಿ ಶೇಷ್ಠವಾದದ್ದನ್ನು ನಾಡಿಗೆ ನೀಡಿದರೆ ಸಾಕು. ಎಲ್ಲರಿಗೂ ಅವರದೇ ರೀತಿಯಲ್ಲಿ ನಾಡಿನ ಸೇವೆ ಮಾಡುವ ಅವಕಾಶಗಳಿವೆ. ಒಬ್ಬರಂತೆ ಇನ್ನೊಬ್ಬರು ಇರಬೇಕೆಂದಿಲ್ಲ. ಅವರವರು ಮಾಡಿದ ಸೇವೆಯನ್ನು ಗುರುತಿಸುವ ಮನೋಭಾವ ನಮ್ಮಲ್ಲಿರಬೇಕು. ಶೇಷಾದ್ರಿ ವಾಸು ಮೇಲಿನ ಪ್ರಶ್ನೆಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ತುರುವೇಕೆರೆಯ ಸತೀಶ್‌ ಶಾನಭೋಗ್‌ ಹೇಳಿರುವಂತೆ ಗೋಕಾಕ್‌ ಚಳವಳಿಯಲ್ಲಿ ಅಣ್ಣಾವ್ರ ಪಾತ್ರ ನಾಡಿಗೆ ಮಾಡಿರುವ ಒಂದು ಅಮೂಲ್ಯ ಸೇವೆಯೇ.

ಕನ್ನಡ ನಾಡಿನ ಅನೇಕ ರಂಗ ಮಂದಿರಗಳಿಗೆ, ಅಶಕ್ತ ಕಲಾವಿದರಿಗೆ, ಅಂಧರ ಕಲ್ಯಾಣ ನಿಧಿಗೆ, ಕನ್ನಡ ಸಾಹಿತ್ಯ ಪರಿಷತ್ತಿಗೆ, ಇನ್ನೂ ಹಲವಾರು ಸಂಘ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಗಳಷ್ಟು ಧನ ಸಹಾಯ ಮಾಡಿ ಬಡವ ಬಲ್ಲಿದ ಬೇಧವಿಲ್ಲದೆ ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಅಣ್ಣ, ದುರದೃಷ್ಟವಶಾತ್‌ ವನವಾಸ ಅನುಭವಿಸಬೇಕಾಯಿತು. ಆ ಕಾಡೊಳಗಿನ ಚಳಿಗಾಳಿ, ಕ್ರಿಮಿ ಕೀಟ, ದೈತ್ಯ ಗಾತ್ರದ ಸೊಳ್ಳೆಗಳು, ಸಾಲದ್ದಕ್ಕೆ ಕಾವಲಿರುವ ಭಯೋತ್ಪಾದಕರು-ಇವೆಲ್ಲದರ ನಡುವೆ ನೂರಾರು ದಿನಗಳಿಂದ ಹೇಗಿದಾರೋ ಎಂದು ಆತಂಕ ಪಡುವ ಬದಲು ರಾಮ. ಎಚ್‌ ಹಾಗೂ ವಿ. ಮನೋಹರ್‌(ನನ್ನ ದುರಾದೃಷ್ಟ ! ಈತನೂ ನನ್ನ ಹೆಸರಿನವರನೇ. ವಿ. ಮನೋಹರ್‌ ಎಂಬ ಹೆಸರಿವರು ನಾನು ತಿಳಿದಂತೆ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಮಂದಿ ಇದ್ದಾರೆ.) ಎಂಬಿಬ್ಬರು ನೀಡಿರುವ ಹೇಳಿಕೆ ತೀರಾ ಬೇಜವಾಬ್ದಾರಿಯ ಹಾಗೂ ಬಾಲಿಶ ಎಂದೆನಿಸುತ್ತದೆ. ಶ್ರೀಧರ್‌ ಎಂಬವರು ಬರೆದಂತೆ ಈ ಸಂದರ್ಭದಲ್ಲಿ ಅಣ್ಣಾವ್ರು ಏನು ಕೊಟ್ಟಿದ್ದಾರೆ ಎಂದು ಚರ್ಚಿಸುವುದು ತೀರಾ ಅಸಂಗತ ಎನ್ನುವುದನ್ನು ನಾನು, ನನ್ನಂತೆಯೇ ಅನೇಕ ಕನ್ನಡಿಗರು ಒಪ್ಪುತ್ತಾರೆ.

ಈ ವಿಷಯವನ್ನು ಇಲ್ಲಿಗೇ ನಿಲ್ಲಿಸಿ, ಅವರ ಬರುವಿಕೆಗೆ ಎಲ್ಲಾ ರೀತಿಯಲ್ಲಿ ಹಾರೈಸುವುದು ನಾವು ಮಾಡಬೇಕಾದ ಮುಖ್ಯ ಕೆಲಸ.

ವಿ.ಮನೋಹರ

ಸಂಗೀತ ನಿರ್ದೇಶಕ, ಸಾಹಿತಿ, ನಿರ್ದೇಶಕ

e-mail : [email protected]


ರಾಜ್‌ಕುಮಾರ್‌ ಅವರಿಂದ ಇನ್ನಷ್ಟು ನಿರೀಕ್ಷಿಸಿದರೆ... ನಾವು ಮೈಗಳ್ಳರು

ರಾಜ್‌ಕುಮಾರ್‌ ಕನ್ನಡಕ್ಕೆ ಏನು ಕೊಟ್ಟಿದ್ದಾರೆ ? ಎಂಬ ಬಗ್ಗೆ ಎಲ್ಲರೂ ಬರೆದದ್ದನ್ನು ಓದಿ ನನ್ನ ಅಭಿಪ್ರಾಯ ಬರೆಯುತ್ತಿದ್ದೇನೆ.

ರಾಜ್‌ ಕುಮಾರ್‌, ಕಾಡುಗಳ್ಳ ವೀರಪ್ಪನ್‌ ಅದೇನು ಕೇಳಿದ್ದಾರೋ ಅವನ್ನು ಆದಷ್ಟು ಬೇಗ ಈಡೇರಿಸಿದರೆ ನಾನು ವಾಪಸ್ಸು ಬರಬಹುದು ಎಂದಷ್ಟೇ ಮೊದಮೊದಲು ಹೇಳಿಕೆ ನೀಡಿದ್ದರು. ಅವರಿರುವ ಪರಿಸ್ಥಿತಿಯಲ್ಲಿ ಅಷ್ಟು ಹೇಳಿಕೆಯನ್ನಾದರೂ ಕೊಡದಿರಲು ಸಾಧ್ಯವಿಲ್ಲ. ತಮಿಳನ್ನು ಕರ್ನಾಟಕದ ಎರಡನೇ ಭಾಷೆಯನ್ನಾಗಿ ಮಾಡಿಬಿಡಿ ಎಂದು ರಾಜ್‌ ಕುಮಾರ್‌ ಅವರು ಪತ್ರಿಕಾ ಹೇಳಿಕೆ ಕೊಟ್ಟಿದ್ದರೆ ಅದು ಖಂಡಿತಾ ತಪ್ಪಾಗುತ್ತಿತ್ತು. ಆದರೆ ಅವರು ಆ ರೀತಿ ಹೇಳಿಕೆ ನೀಡಿದ್ದಾರೆಂದು ಯಾವ ಪತ್ರಿಕೆಯಲ್ಲಿಯೂ ವರದಿಯಾಗಿಲ್ಲವಲ್ಲ ! ಈಗಂತೂ ಸುಮಾರು ವಾರಗಳಿಂದ ಯಾವುದೇ ಹೇಳಿಕೆಗಳನ್ನೂ ಕೊಡದೆ ದೇವರ ಮೇಲೆ ಭಾರ ಹಾಕಿ ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದಾರೆ.

ಕನ್ನಡಕ್ಕೆ ರಾಜ್‌ ಅವರ ಕೊಡುಗೆ ನಿರ್ಧರಿಸುವಲ್ಲಿ ರಾಜ್‌ ಕುಮಾರ್‌ ಅವರು ಹುಟ್ಟಿದ ಊರು ತಮಿಳುನಾಡು, ಅವರ ಮಕ್ಕಳು ಓದಿದ್ದು ತಮಿಳುನಾಡಿನಲ್ಲಿ ಎಂಬ ಅಂಶವನ್ನು ಗಮನಿಸಬೇಕೇ ? ಉದ್ಯೋಗ ನಿಮಿತ್ತ ಅನೇಕ ಕನ್ನಡಿಗರು ಹೊರದೇಶಗಳಲ್ಲಿ ನೆಲೆಸಿಲ್ಲವೇ ? ಒಂದು ಕಾಲದಲ್ಲಿ ಕನ್ನಡ ಚಿತ್ರಗಳೆಲ್ಲಾ ಮದ್ರಾಸಿನಲ್ಲಿ ತಯಾರಾಗುತ್ತಿತ್ತು ಎಂಬುದು ನೆನಪಿರಲಿ. ಅನೇಕ ಪ್ರಖ್ಯಾತ ಕನ್ನಡ ಸಾಹಿತಿಗಳು ಮುಂಬಯಿಯಲ್ಲಿ ನೆಲೆಸಿಲ್ಲವೇ ?

ರಾಜ್‌ ಕುಮಾರ್‌ ಈಗ ಸಾಕಷ್ಟು ಹಣಗಳಿಸಿದ್ದಾರೆ ನಿಜ. ಆದರೆ, ಅನ್ಯಾಯದಿಂದೇನೂ ಅಲ್ಲವಲ್ಲ. ಅದು ಕೇವಲ ಪ್ರತಿಭೆಯಿಂದ ಮಾತ್ರ ಬಂದದ್ದು. ಸಾಕಷ್ಟು ಹಣ ಮಾಡಿದರು ಎಂಬ ಒಂದು ಕಾರಣದಿಂದ ಅವರ ಕನ್ನಡ ಪ್ರೇಮ ಕೇವಲ ವ್ಯಾವಹಾರಿಕ ಜಾಣತನ ಎಂದು ಬರೆದಿರುವುದು ಸರಿಯಲ್ಲ. ಒಂದುವೇಳೆ ಕುವೆಂಪು, ಬೇಂದ್ರೆ ಸಹ ಸಾಕಷ್ಟು ಹಣಗಳಿಸಿದ್ದರೆ ಅವನರನ್ನೂ ಸಹ ಜನ ಇದೇ ರೀತಿ ಸಂಶಯ ದೃಷ್ಠಿಯಿಂದ ನೋಡುತ್ತಿದ್ದರೇನೋ?

ಬರೀ ಹಣ ಸಂಪಾದನೆ ಮಾಡುವುದೇ ಗುರಿಯಾಗಿದ್ದರೆ, ಇಷ್ಟೊಂದು ಪ್ರತಿಭೆ ಇರುವ ರಾಜ್‌ ಕುಮಾರ್‌ ಇತರ ಭಾಷೆಗಳಿಗೆ ಎಂದೋ ಹಾರಿಹೋಗಿಬಿಡಬಹುದಾಗಿತ್ತು. ತೆಲುಗು, ತಮಿಳು ಚಿತ್ರರಂಗಗಳು ಕನ್ನಡ ಚಿತ್ರರಂಗಕ್ಕಿಂತ ಹೆಚ್ಚಿನ ಅವಕಾಶ, ಐಶ್ವರ್ಯಗಳನ್ನು ಕೊಡುವುದಾಗಿದ್ದರೂ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರ ತೆಗೆದುಕೊಂಡು ತಮ್ಮ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ ಅಲ್ಲವೇ ? ( ಸ್ವಲ್ಪ ಹೆಚ್ಚು ಸಂಬಳ ಸಿಗುತ್ತೆ ಅಂದ ತಕ್ಷಣ ಕಂಪೆನಿಗಳನ್ನು, ಸ್ಥಳಗಳನ್ನು ನಾವು ಬದಲಾಯಿಸುವುದಿಲ್ಲವೇ ? )

ರಾಜ್‌ ಕುಮಾರ್‌ ಸಹ ಎನ್‌ಟಿಆರ್‌, ಎಂಜಿಆರ್‌ ಅವರಂತೆ ರಾಜಕಾರಣಿಗಳಾಗಿ ಕರ್ನಾಟಕಕ್ಕೆ ಇನ್ನೂ ಸೇವೆ ಸಲ್ಲಿಸಬಹುದಿತ್ತು ಎಂಬ ಮಾತು, ಎಂಜಿಆರ್‌ , ಎನ್‌ಟಿಆರ್‌ ಸಹ ರಾಜ್‌ ಕುಮಾರ್‌ ರೀತಿ ಸಂಗೀತ ಕಲಿತು ಕಲೆಗೆ ಇನ್ನಷ್ಟು ಸೇವೆ ಸಲ್ಲಿಸಬಹುದಿತ್ತು ಎಂಬ ವಾದದಂತೆ ಹುರುಳಿಲ್ಲದ್ದು. ಅದು ಅವರವರ ಸಾಮರ್ಥ್ಯಕ್ಕೆ ಬಿಟ್ಟಿದ್ದು. ಕೇವಲ ಜನಪ್ರಿಯತೆಯಾಂದನ್ನೇ ಯೋಗ್ಯತೆಯಾಗಿ ಪರಿಗಣಿಸಿ ಕಲಾವಿದರನ್ನು ರಾಜಕಾರಣಿಗಳನ್ನಾಗಿ ಮಾಡುವುದು ಪ್ರಜೆಗಳಾದ ನಮಗೂ ಒಳ್ಳೆಯದಲ್ಲ ! ಎಲ್ಲರೂ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಸೇವೆ ಮಾಡಬೇಕಾಗಿಲ್ಲ. ಅವರವರು ಮಾಡುವ ಕೆಲಸಗಳಿಗೆ ಸರಿಯಾದ ನ್ಯಾಯ ದೊರಕಿಸಿದರಾಯಿತು.

ಕುವೆಂಪು ಬೇಂದ್ರೆಯವರ ಕನ್ನಡ ಪ್ರೇಮ ಪ್ರತಿಭೆಗಳು ರಾಜಕುಮಾರ್‌ಗಿಂತ ಹೆಚ್ಚಿನದಿರಬಹುದು. ಸಿನಿಮಾ ಮಾಧ್ಯಮದಿಂದಾಗಿ ರಾಜ್‌ ಕುಮಾರ್‌ ಇಷ್ಟು ಜನಪ್ರಿಯರಾಗಿರಬಹುದು. ಆದರೆ ರಾಜ್‌ಕುಮಾರ್‌ ತಮ್ಮ ಜನಪ್ರಿಯತೆಯನ್ನು ಯಾವತ್ತೂ ದುರುಪಯೋಗ ಪಡಿಸಿಕೊಂಡಿಲ್ಲ. ರಾಜ್‌ ಕುಮಾರ್‌ ಕನ್ನಡ ಚಲನ ಚಿತ್ರಗಳ ಮೂಲಕ ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ. ಕೈಲಾದ ಮಟ್ಟಿಗೆ ಜನಸೇವೆಯನ್ನೂ ಮಾಡಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳುವುದು, ಅವುಗಳಿಂದ ಪ್ರೇರಿತರಾದ ಕನ್ನಡಿಗರ ಜವಾಬ್ದಾರಿ. ಅದು ಬಿಟ್ಟು ರಾಜ ಕುಮಾರ್‌ರಿಂದ ಇನ್ನಷ್ಟು ಉಪಕಾರ ನಿರೀಕ್ಷೆ ಮಾಡುವುದು ನಮ್ಮ ಸ್ವಾರ್ಥ, ಮೈಗಳ್ಳತನವನ್ನು ಎತ್ತಿ ತೋರುತ್ತದೆ.

ಶೇಷಾದ್ರಿ ವಾಸು


ಆ ಶಕ್ತಿಯ ಸಾಕ್ಷಾತ್ಕಾರಕ್ಕೆ ನಾವೆಲ್ಲ........

ಕರ್ನಾಟಕದ ಪ್ರಸಿದ್ಧ ನಟರಲ್ಲಿ ರಾಜ್‌ ಕುಮಾರ್‌ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ರಾಜ್‌ ಅವರ ಹೆಸರಿಗೆ ಹೋಲಿಸಿದರೆ ನಾಡಿಗೆ ಅವರ ಕೊಡುಗೆ ಸೀಮಿತ ಎನಿಸುತ್ತದೆ. ಕರ್ನಾಟಕ, ಕನ್ನಡ ಎಂಬ ವಿಷಯಗಳ ಬಗ್ಗೆ ಮಾತನಾಡುವಾಗ, ತನ್ನ ಬೆಂಬಲಿಗರು, ಅಭಿಮಾನಿಗಳಿಗೆ ರಾಜ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು. ರಾಜ್ಯ ಮತ್ತು ರಾಜ್‌ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಅವರಲ್ಲಿ ಹುದುಗಿರುವ ಕರ್ತೃತ್ವ ಶಕ್ತಿ ಅಪಾರ. ಆ ಶಕ್ತಿಯ ಸಾಕ್ಷಾತ್ಕಾರಕ್ಕೆ ನಾವೆಲ್ಲ ಎದುರುನೋಡುತ್ತಿದ್ದೇವೆ.

ನಾಡಿಗೆ, ನಾಡಿನ ಜನರಿಗೆ ಕಳೆದ ಎರಡು ದಶಕದಲ್ಲಿ ತಮ್ಮ ಕೊಡುಗೆ ಏನು ಎಂಬ ಬಗ್ಗೆ ರಾಜ್‌ ಚಿಂತಿಸಲು ಈ ವನವಾಸ ಅವಕಾಶ ಕಲ್ಪಿಸಿಕೊಟ್ಟಿದೆ. ತಮ್ಮ ಯಶಸ್ಸಿನ ಬೆನ್ನಿಗಿದ್ದವರ ಬಗ್ಗೆ ರಾಜ್‌ ಈಗಲಾದರೂ ಚಿಂತಿಸಲಿ.

ರಾಮ ಎಚ್‌.


ಇಂಥ ಸಮಯದಲ್ಲಿ ನಮ್ಮ ಚಿಂತನೆ ಹೇಗಿರಬೇಕು ?

ಶ್ಯಾಮ್‌ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ರಾಜ್‌ಕುಮಾರ್‌ ವ್ಯಕ್ತಿತ್ವವನ್ನು ಸತ್ಯದ, ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವಂಥವಾಗಿವೆ. ಜನರನ್ನು ಸಮೂಹ ಸನ್ನಿಗೊಳಪಡಿಸಿದ ವ್ಯಕ್ತಿಗಳ ಕುರಿತು ಇಂಥ ನಿರ್ಭಿಡೆಯ ಅಭಿಪ್ರಾಯಗಳನ್ನು ವ್ಯಕ್ತಮಾಡುವುದು ನಿಜಕ್ಕೂ ಧೈರ್ಯದ ವಿಚಾರವೇ.

ಆದರೆ, ನನ್ನನ್ನು ಕಾಡುವ ಪ್ರಶ್ನೆ ಬೇರೆಯೇ ಇದೆ. ರಾಜ್‌ಕುಮಾರ್‌ ಅವರನ್ನು ಒಬ್ಬ ಕಾಡುಗಳ್ಳ ಅಪಹರಿಸಿದ ಈ ಸಂದರ್ಭದಲ್ಲಿ ಅವರು ನಾಡಿಗೆ ಏನು ಕೊಟ್ಟಿದ್ದಾರೆ ಎಂಬುದನ್ನು ಚರ್ಚಿಸುವುದೇ ಅಸಂಗತ ಮತ್ತು ಅಸಂಬದ್ಧ ಅಲ್ಲವೇ? ಅವರ ಒಂದು ಚಿತ್ರ ಶತದಿನೋತ್ಸವ ಆಚರಿಸಿದಾಗಲೋ, ಅದ್ಧೂರಿಯಿಂದ ಅವರು ಹುಟ್ಟುಹಬ್ಬವನ್ನು ಆಚರಿಸಿ ಅವರ ಅಭಿಮಾನಿಗಳು ಕೇಕೆ ಹಾಕುತ್ತಾ ಬೀದಿಯಲ್ಲಿ ಕುಣಿಯುವ ಸಂದರ್ಭದಲ್ಲೋ ಈ ಪ್ರಶ್ನೆ ಎತ್ತಿದ್ದರೆ ಅದು ಸಕಾಲಿಕ ಆಗಿರಬಹುದಿತ್ತು. ಇಂಥ ಸನ್ನಿವೇಶದಲ್ಲಿ ಖಂಡಿತ ಅಲ್ಲ. ಅವರ ಕೊಡುಗೆ ಏನಿದೆಯೋ, ಬಿಟ್ಟಿದೆಯೋ ಈಗ ಅದು ಪ್ರಸ್ತುತ ಅಲ್ಲ. ಏನೇ ಆಗಲಿ, ತಮ್ಮ ಅದ್ಭುತ ಕಲಾ ಪ್ರೌಢಿಮೆಯಿಂದ ಅವರು ಒಂದು ಭಾರೀ ಸಮೂಹದ ಮನ ಗೆದ್ದಿದ್ದಾರೆ. ಅಂಥ ಒಬ್ಬ ವ್ಯಕ್ತಿಯನ್ನು ಹೀನ ಚರಿತ್ರೆಯ ಕಾಡುಗಳ್ಳನೊಬ್ಬ ಅಪಹರಿಸಿದಾಗ ಅರೋಗ್ಯವಂತ ಮನಸ್ಸುಗಳು ರಾಜ್‌ರ ಶೀಘ್ರ ಬರುವಿಕೆಯನ್ನು ಮಾತ್ರ ಆಶಿಸಬಹುದು.

ಉಳಿದ ಪ್ರಶ್ನೆಗಳನ್ನು ಎತ್ತಲು ಸಮಯ ಇದ್ದೇ ಇದೆ.

ಶ್ರೀಧರ್‌


ನಮ್ಮ ಅಮ್ಮ ನಮಗೆ ಹೇಳಿಕೊಟ್ಟಿದ್ದೇನು ?

ಶ್ರೀ ಶ್ಯಾಮ್‌ ಅವರ ಲೇಖನ ಓದಿದೆ. ತರ್ಕ ಒಪ್ಪ ತಕ್ಕದ್ದೇ. ಆದರೂ, ರಾಜ್‌ ಕುಮಾರ್‌ ಒಬ್ಬ ಕಲಾವಿದನಾಗಿ ನಾಡಿಗೆ ಏನು ನೀಡಬೇಕೋ ಅದನ್ನು ನೀಡಿದ್ದಾರೆ. ಆಡಳಿತ ಸೂತ್ರ ಹಿಡಿದಿದ್ದ ಜನರೇ ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಅನುಷ್ಠಾನಕ್ಕೆ ತರಲು ಹಿಂದು ಮುಂದು ನೋಡಿದಾಗ, ನಡೆದ ಗೋಕಾಕ ಚಳವಳಿ ಮಹತ್ವದ್ದು. ಈ ಚಳವಳಿಯಲ್ಲಿ ಡಾ. ರಾಜ್‌ಕುಮಾರ್‌ ಅವರು ಭಾಗವಹಿಸದೇ ಇದ್ದಿದ್ದಲ್ಲಿ ಗೋಕಾಕ್‌ ವರದಿ ಜಾರಿಗೂ ಬರುತ್ತಿರಲಿಲ್ಲ. ಇಂದಿನವರೆಗೆ ಕನ್ನಡ ರಾಜ್ಯದಲ್ಲಿ ಉಳಿಯುತ್ತಲೂ ಇರಲಿಲ್ಲ ಎಂಬುದು ನನ್ನ ಅನಿಸಿಕೆ.

ಡಾ. ರಾಜ್‌ಕುಮಾರ್‌ ಕಾಡಿನಿಂದ ನಾಡಿಗೆ ಬಂದ ಮೇಲಾದರೂ ಕನ್ನಡ ಕಟ್ಟುವ ಕೆಲಸ ಮಾಡಲಿ ಎಂಬ ಸಲಹೆ ಸೂಕ್ತವಾಗಿದೆ. ಎನ್‌.ಟಿ.ಆರ್‌., ಎಂಜಿಆರ್‌ ರಂತೆಯೇ ರಾಜ್‌ ಕುಮಾರ್‌ ಅವರಿಗೆ ಕನ್ನಡ ಸೇವೆ ಮಾಡುವ ಸಾಕಷ್ಟು ಅವಕಾಶ ಇತ್ತು. ಆದರೆ, ಮೊದಲಿನಿಂದಲೂ ಹೋರಾಟದ ಮನೋಭಾವದಿಂದ ದೂರವಾಗಿ, ಸಾತ್ವಿಕ ಬದುಕು ಸಾಗಿಸುತ್ತಿದ್ದ ರಾಜ್‌ ಅವರಿಗೆ ಅನಗತ್ಯವಾಗಿ ವಿವಾದಕ್ಕೆ ಸಿಲುಕಲು ಇಷ್ಟವಿಲ್ಲದೆ ಇದ್ದುದೇ ಅವರು ಕನ್ನಡ ಸೇವೆಯಿಂದಲೂ ದೂರವಾದರು. ಇಲ್ಲವಾಗಿದ್ದಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯೇ ಆಗಿರುತ್ತಿದ್ದರು.

ನಾವು ಚಿಕ್ಕವರಿರುವಾಗ ನಮ್ಮ ಅಮ್ಮ ಎಣ್ಣೆ ಸ್ನಾನ ಮಾಡಿಸುವಾಗ, ಒಳಲೆಯಲ್ಲಿ ಹಾಲು ನೀಡುವಾಗ ಕೆರೆಯನ್ನು ಕಟ್ಟಿಸು, ಬಾವಿಯನ್ನು, ತೋಡಿಸು, ಸತ್ಕಾರ್ಯಗಳನ್ನು ಮಾಡು, ಸಾಲು ಮರ ನೆಡಿಸಿ, ಅರವಟ್ಟಿಗೆ ಇಡಿಸು, ಅನ್ನ ಛತ್ರ ಕಟ್ಟಿಸು ಎಂದು ಹೇಳುತ್ತಿದ್ದರು. ಆಗ ಮಗುವಿನ ಹೊಟ್ಟೆಯನ್ನು ಸೇರುವ ಹಾಲಿನ ರೀತಿಯೇ ಉತ್ತಮ ಗುಣಗಳು ಮೆದುಳಿಗೆ ಸೇರುತ್ತಿದ್ದವಂತೆ. ಪ್ರತಿಯಾಬ್ಬ ಮನುಷ್ಯನೂ ತನ್ನ ಕೈಲಾದ ಮಟ್ಟಿಗೆ ಹಾಗೂ ತಮಗೆ ಇರಬಹುದಾದ ಇತಿ - ಮಿತಿಯಲ್ಲಿ ಸಾರ್ವಜನಿಕ ಹಾಗೂ ಸಮಾಜದ ಸೇವೆ ಮಾಡಬೇಕು. ನಾವು ಹುಟ್ಟಿದ ಮಣ್ಣಿನ ಋಣ ತೀರಿಸಬೇಕು.

ರಾಜ್‌ಕುಮಾರ್‌ ಮನಸ್ಸು ಮಾಡಿದ್ದರೆ, ಕನ್ನಡ ಇಂದು ಉತ್ತುಂಗ ಸ್ಥಿತಿಯಲ್ಲಿರುತ್ತಿತ್ತು. ಈಗ ಅವರು ವೀರಪ್ಪನ್‌ ವಶದಲ್ಲಿ ಕಾಡಿನಲ್ಲಿ ವನವಾಸ ಅನುಭವಿಸುತ್ತಿದ್ದಾರೆ. ಅವರು ಆದಷ್ಟು ಬೇಗ ನಾಡಿಗೆ ಮರಳಲಿ ಕನ್ನಡದ ಉಳಿವಿಗೆ ಶಕ್ತಿ ಮೀರಿ ದುಡಿಯಲಿ ಎಂದು ಆಶಿಸುವೆ.

ಸತೀಶ್‌ ಶ್ಯಾನುಭೋಗ್‌

ತುರುವೇಕೆರೆ


ನಿಜನಾಯಕನ ಗುಣ ವಿಶೇಷ

  • ವಿ. ಮ-ನೋ-ಹ-ರ್‌
-ವ-ಸ್ತು ಸ್ಥಿತಿ-ಯ ಮೇಲೆ ವ್ಯಕ್ತಿ-ಗ-ಳ ಸಾಧ-ನೆ-ಯ-ನ್ನು ಅಳೆ-ಯ-ಬೇ-ಕೆ ಹೊರ-ತು, ಭಾವು-ಕ-ತೆ-ಯ ಮೇಲ-ಲ್ಲ ಅನ್ನು-ವ ಶ್ಯಾಮ್‌ ಅವ-ರ ಅಭಿ-ಪ್ರಾ-ಯ-ವ-ನ್ನು ನಾನು ಸಂ-ಪೂ-ರ್ಣ ಒಪ್ಪು-ತ್ತೇ-ನೆ. ಜನ-ರ-ನ್ನು ಸೆಳೆ-ಯು-ವ ಶಕ್ತಿ ರಾಜ್‌ ಅವ-ರಿ-ಗಿ-ರು-ವು-ದು ಸ್ಪಷ್ಟ . ಅಂತೆ-ಯೇ ಅವ-ರು ಜನ-ರ ಪ್ರತಿ-ನಿ-ಧಿ-ಯಾ-ಗಿ-ಯೂ ಆಗಾ-ಗ ಕಾಣಿ-ಸಿ-ಕೊಂ-ಡಿ-ದ್ದಾ-ರೆ. ಎ-ತ್ತ-ರ-ದ ಸ್ಥಾನ-ದ-ಲ್ಲಿ -ಕೂರಿ-ಸಿ-ದ ಜ-ನ-ತೆ-ಗೆ ಋಣ ತೀರಿ-ಸು-ವ ಜವಾ-ಬ್ದಾ-ರಿ-ಯ-ನ್ನು ರಾಜ್‌ ಹೊರ-ಲೇ-ಬೇ-ಕು. ಅಪ-ಹ-ರ-ಣ-ದಿಂ-ದ ಸಾವಿರಾ-ರು ಕೂಲಿ ಕಾರ್ಮಿ-ಕ-ರ ಅನ್ನ-ಕ್ಕೆ ತೊಂದ-ರೆ-ಯಾ-ಯಿ-ತು. ಅವ-ರ ಬಗ್ಗೆ ರಾ-ಜ್‌ ಅವರಿ-ಗೆ ನಿಜ-ವಾ--ದ ಕಾಳ-ಜಿ ಇದ್ದ-ಲ್ಲಿ ಅವ-ರು ತಮ್ಮ ಜೀವ-ಕ್ಕಾ-ಗಿ ಅಲ-ವ-ತ್ತು-ಕೊ-ಳ್ಳು-ವ ಅವ-ಶ್ಯ-ಕ-ತೆ ಇರ-ಲಿ-ಲ್ಲ . ಅವ-ರು ನಿಜ-ವಾ-ದ ನಾಯ-ಕ-ನೇ ಆಗಿ-ದ್ದ-ಲ್ಲಿ ಅದ-ಕ್ಕೆ ತಕ್ಕಂ-ತೆ ನಡೆ-ದು-ಕೊ-ಳ್ಳು-ತ್ತಿ-ದ್ದ-ರು. ಮುಂದೆ ಹಾಗೆ ನಡೆದುಕೊಳ್ಳುತ್ತಾರೆ ಎನ್ನುವುದು ನನ್ನ ಎಣಿಕೆ.

ನಿಮ್ಮ ಪ್ರತಿಕ್ರಿಯೆ
ವಾರ್ತಾ ಸಂಚಯ
ರಾಜ್‌ಕುಮಾರ್‌ ನಾಡಿಗೇನು ಕೊಟ್ಟಿದ್ದಾರೆ?

ಮುಖಪುಟ / ರಾಜ್‌ ಅಪಹರಣ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X