ಬಣ್ಣ ಬಳಿದು ಅಖಾಡಕ್ಕಿಳಿದ ಸಾಹಸಸಿಂಹ, ರೆಬೆಲ್ ಸ್ಟಾರ್
ಬೆಂಗಳೂರು : ಡಾ. ರಾಜ್‌ಕುಮಾರ್ ಅಪಹರಣವಾದ ನಂತರ ರಾಜ್ ಬಿಡುಗಡೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಓಡಾಡುತ್ತಾ ದಾಡಿ ಬೆಳೆಸಿಕೊಂಡು, ಅಣ್ಣಾವ್ರು ಬರುವತನಕ ಕನ್ನಡ ಚಿತ್ರ ಚಟುವಟಿಕೆ ನಡೆಯದು ಎಂದು ಹೇಳುತ್ತಿದ್ದ ರೆಬೆಲ್‌ಸ್ಟಾರ್ ಅಂಬರೀಶ್ ಕಳೆದ ಶುಕ್ರವಾರ ಚಿನ್ನಿ ಫಿಲಂಸ್ ಅವರ ಜಯಶ್ರೀ ದೇವಿ ನಿರ್ಮಾಣದ ವಂದೇ ಮಾತರಂ ಚಿತ್ರಕ್ಕಾಗಿ ಪ್ರಸಾದ್ ಸ್ಟುಡಿಯೋದಲ್ಲಿ ತಮ್ಮ ಭಾಗದ ಮಾತುಗಳ ಮರು ಜೋಡಣೆಯ ಕಾರ್ಯದಲ್ಲಿ ತಲ್ಲೀನರಾಗಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಅಂಬರೀಶ್ ಹಾಗೂ ವಿಷ್ಣುವರ್ಧನ್ ಬಣ್ಣ ಹಚ್ಚಿ ಶನಿವಾರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಅವರ ದಿಗ್ಗಜರು ಚಿತ್ರಕ್ಕಾಗಿ ಕಳೆದ ಮೂರು ತಿಂಗಳಿನಿಂದ ರಾಜ್ ಭಕ್ತಿಯಿಂದ ಹಾಗೂ ರಾಜ್ ಅಭಿಮಾನಿಗಳ ಭಯದಿಂದ ಬಣ್ಣ ಹಚ್ಚದಿದ್ದ ಅಂಬರೀಶ್ ಹಾಗೂ ವಿಷ್ಣುವರ್ಧನ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದರೊಂದಿಗೆ ಸ್ವಯಂಘೋಷಿತ ಬಂದ್‌ನಿಂದ ಕನ್ನಡ ಚಿತ್ರರಂಗಕ್ಕೆ ಸಂಪೂರ್ಣ ಮುಕ್ತಿ ದೊರೆತಿದೆ.
ಎರಡು ತಿಂಗಳ ಕಾಲ ಸಂಪೂರ್ಣ ಸ್ಥಗಿತಗೊಂಡಿದ್ದ ಚಿತ್ರೀಕರಣ ಅಂತೂ ಇಂತು ಕರ್ನಾಟಕ ಬಂದ್ ನಂತರ ಪ್ರಾರಂಭವಾಗಿತ್ತಾದರೂ, ದೊಡ್ಡ ಬ್ಯಾನರ್‌ಗಳ ಹಾಗೂ ಹೆಸರಾಂತ ನಟರ ಪಾಲ್ಗೊಳ್ಳುವಿಕೆ ಇಲ್ಲದೆ ಸೊರಗಿ ಹೋಗಿತ್ತು. ರಾಜ್‌ಪುತ್ರರು, ರವಿಚಂದ್ರನ್, ಅಂಬರೀಶ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳದ ಕಾರಣ ಕಾರ್ಮಿಕರು ಕೈತುಂಬ ಕೆಲಸವಿಲ್ಲದೆ ಹೊಟ್ಟೆಪಾಡಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕಾಡಿನಿಂದಲೇ ರಾಜ್‌ಕುಮಾರ್ ಅವರು ಮಾಡಿಕೊಂಡಿದ್ದ ಮನವಿಯ ಮೇರೆಗೆ ಚಿತ್ರ ಚಟುವಟಿಕೆ ಪುನಾರಂಭಿಸುವಂತೆ ಹೇಳಿಕೆ ನೀಡುತ್ತಿದ್ದ ಹಿರಿಯ ಹಾಗೂ ಪ್ರಭಾವಿ ನಟರೇ ದಾಡಿ ಬೋಳಿಸಲು ಹಿಂದು ಮುಂದು ನೋಡಿದಾಗ ಚಿತ್ರೀಕರಣ ಆರಂಭವಾಗುವುದಾದರೂ ಎಂತು ಎಂಬ ಜಿಜ್ಞಾಸೆ ಗಾಂಧೀನಗರದಲ್ಲಿ ಸುಳಿದಾಡುತ್ತಿತ್ತು.
ರಾಜ್‌ಕುಮಾರ್ ಅಪಹರಣವಾದ ದಿನದಿಂದಲೂ ರಾಜ್‌ಕುಮಾರ್ ಕುಟುಂಬದವರ ನೋವಿಗೆ - ಆತಂಕಕ್ಕೆ ಪ್ರತಿಕ್ಷಣವೂ ಸ್ಪಂದಿಸುತ್ತಿದ್ದ ರಾಕ್‌ಲೈನ್ ವೆಂಕಟೇಶ್ ಈಗ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಲಹೆಯ ಮೇರೆಗೆ ಹಾಗೂ ಚಿತ್ರೋದ್ಯಮದ ಒತ್ತಾಯಕ್ಕೆ ಮಣಿದು ದಿಗ್ಗಜರು ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ವಿಷ್ಣುವರ್ಧನ್, ಅಂಬರೀಶ್, ಲಕ್ಷ್ಮೀ ಮುಂತಾದವರು ಪಾಲ್ಗೊಂಡಿದ್ದರೆ, ಹಾಲು ಸಕ್ಕರೆ ಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಸಂಸತ್ ಸದಸ್ಯ ಶಶಿಕುಮಾರ್, ಸುಹಾಸಿನಿ, ದೇವರಾಜ್ ಪಾಲ್ಗೊಂಡಿದ್ದಾರೆ.
ಟಿ.ಎನ್. ಸೀತಾರಾಂರ ಮತದಾನದಲ್ಲಿ ಅನಂತನಾಗ್, ಪ್ರೇಮಿ ನಂ.1ನಲ್ಲಿ ರಮೇಶ್, ಪ್ರೇಮಾ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಚಿತ್ರವೊಂದು ಸೆಟ್ಟೇರುವ ಲಕ್ಷಣ ಕಂಡು ಬಂದಿದೆ. ಆದರೆ, ಶಿವರಾಜ್‌ಕುಮಾರ್ ಅಭಿನಯದ ಯಾವ ಚಿತ್ರಗಳೂ ಸದ್ಯಕ್ಕಂತೂ ಸೆಟ್ಟೇರುವ ಸಾಧ್ಯತೆ ಇಲ್ಲವೇ ಇಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications