ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಪಾಂಕದ ಬದಲಿಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ 5 ಮೀಸಲಾತಿ

By Staff
|
Google Oneindia Kannada News

ಬೆಂಗಳೂರು : ನೇಮಕಾತಿಗೆ ಸಂಬಂಧಿಸಿದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಕೃಪಾಂಕದ ಬದಲಿಗೆ ಶೇ ಐದರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ನ್ಯಾಯಮೂರ್ತಿ ಆರ್‌. ರಾಮಕೃಷ್ಣ ನೇತೃತ್ವದ ಸಮಿತಿ ಸರಕಾರಕ್ಕೆ ಸಲಹೆ ಮಾಡಿದೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದರ ವಿರುದ್ಧ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಆಯೋಗವು ಶೇ ಐದರಷ್ಟು ಗ್ರಾಮೀಣ ಮೀಸಲಾತಿ ಸೀಟು ಕಾಯ್ದಿರಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ.

ಶುಕ್ರವಾರ ಸಂಜೆ ಆರ್‌. ರಾಮಕೃಷ್ಣ ಅವ-ರು ಮುಖ್ಯಮಂತ್ರಿಗಳನ್ನು ಅವರ ಅಧಿಕೃತ ನಿವಾಸ ಅನುಗ್ರಹದಲ್ಲಿ ಭೇಟಿಯಾಗಿ ಸಮಿತಿ ನಡೆಸಿದ ಅಧ್ಯಯನ ಹಾಗೂ ಶಿಫಾರಸುಗಳನ್ನು ವಿವರಿಸಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸೀಟುಗಳಲ್ಲಿ ಮೀಸಲಾತಿ ನೀಡುವುದರಿಂದ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿದಂತಾಗುವುದಿಲ್ಲ ಎಂದರು. ಅವ- ರೊಂ-ದಿ-ಗೆ ಆಯೋಗದ ಸದಸ್ಯ ಕೆ.ಪಿ. ಸುರೇಂದ್ರನಾಥ್‌ ಹಾಜ-ರಿ-ದ್ದ-ರು.

--ಮೀ-ಸ-ಲಾ-ತಿ-ಗೆ ಆ-ಯೋ-ಗ- ನಿರ್ಣ-ಯಿ-ಸಿ-ರು-ವ ಅರ್ಹ-ತೆ-ಗ-ಳು

  • ಗ್ರಾಮೀಣ ವಿದ್ಯಾರ್ಥಿ ಎಂದು ನಿರ್ಧರಿಸಲು ಜನಗಣತಿಯ ವರದಿಯನ್ನೇ ಆಧಾರವಾಗಿರಿಸಿಕೊಳ್ಳಬೇಕು.
  • ವಿದ್ಯಾರ್ಥಿಗಳು ಒಂದರಿಂದ ಹತ್ತನೇ ತರಗತಿಯವರೆಗ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರಬೇಕು.
  • ಕೃಷಿ ಭೂಮಿ ಇದ್ದಲ್ಲಿ ಪೋಷಕರು ಒಕ್ಕಲುತನ ಮಾಡುತ್ತಿಬೇಕು.
  • ಹಿಂದುಳಿದ ವರ್ಗಗಳಿಗೆ ಸರಕಾರ ನಿಗದಿ ಪಡಿಸಿರುವ ಆದಾಯ ಮಿತಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು.
  • ಒಂ-ದು ವಿಭಾಗದಲ್ಲಿ ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಬೇರೆ ವಿ-ಭಾಗದಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯುವಂತಿಲ್ಲ.
  • ಎ ಮತ್ತು ಬಿ ಗುಂಪಿನವರು ಸೇರಿದಂತೆ ಇತರ ವರ್ಗದವರಿಗೂ ಗ್ರಾಮೀಣ ಮೀಸಲಾತಿ ಅನ್ವಯಿಸುತ್ತದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X