20ರಂದು ಮೆರವಣಿಗೆ, 25ರಿಂದ ಚಲನಚಿತ್ರ ಚಟುವಟಿಕೆ ಆರಂಭ
ಬೆಂಗಳೂರು : ರಾಜ್‌ಕುಮಾರ್ ಅವರ ಅಪಹರಣವಾದ ದಿನದಿಂದಲೂ ಸ್ತಬ್ಧವಾಗಿರುವ ಕನ್ನಡ ಚಲನಚಿತ್ರ ಚಟುವಟಿಕೆ 25ರಿಂದ ಪುನಾರಂಭಗೊಳ್ಳಲಿದೆ. ಇದಕ್ಕೂ ಮುನ್ನ ರಾಜ್‌ಕುಮಾರ್ ಅವರ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ ಕೈಗೊಂಡಿದೆ.
ರಾಜ್‌ಕುಮಾರ್ ಅವರೇ ಸ್ವತಃ ಚಿತ್ರ ಚಟುವಟಿಕೆ ಆರಂಭಿಸುವಂತೆ ಮನವಿ ಮಾಡಿದರೂ ಕೂಡ ನಿರ್ಧಾರ ಕೈಗೊಳ್ಳಲು ಹಿಂಜರಿದಿದ್ದ ಮಂಡಳಿ, ಕೊನೆಗೂ ಚಿತ್ರ ಪ್ರದರ್ಶಕರ ಒತ್ತಡಕ್ಕೆ ಮಣಿದು ಸೆಪ್ಟೆಂಬರ್ 1ರಿಂದ ಚಲನ ಚಿತ್ರ ಪ್ರದರ್ಶನ ನಡೆಸುವ ನಿರ್ಧಾರ ಕೈಗೊಂಡಿತು. ಆದರೆ, ಚಿತ್ರೀಕರಣ ಮುಂತಾದ ಚಿತ್ರನಗರಿಯ ಚಟುವಟಿಕೆಗಳು ಆರಂಭಗೊಂಡಿರಲಿಲ್ಲ.
ಚಿತ್ರನಗರಿಯಲ್ಲಿ ಕೆಲಸವಿಲ್ಲದೇ ಚಿತ್ರ ಕಾರ್ಮಿಕರು ಹೊಟ್ಟೆಪಾಡಿಗೆ ಕಷ್ಟಪಡುತ್ತಿದ್ದು, ಈಗ ವಿಧಿ ಇಲ್ಲದೆ, 25ರಿಂದ ಚಿತ್ರೀಕರಣವೂ ಸೇರಿದಂತೆ ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನೂ ಆರಂಭಿಸುವ ನಿರ್ಧಾರವನ್ನು ಶನಿವಾರ ಸೇರಿದ್ದ ಮಂಡಳಿಯ ತುರ್ತು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಇತ್ತ ವಾಣಿಜ್ಯ ಮಂಡಳಿ ಸಭೆ ನಡೆಯುತ್ತಿದ್ದರೆ, ಅತ್ತ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಕಿರುತೆರೆಯ ಹಿರಿಯ ಸಂಘಟನೆ ಸಭೆ ಸೇರಿ 18ರ ಸೋಮವಾರದಿಂದಲೇ ಕಿರುತೆರೆಯ ಎಲ್ಲ ಚಟುವಟಿಕೆ ಆರಂಭಿಸುವ ತೀರ್ಮಾನ ಕೈಗೊಂಡಿತು. ನಂದಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಿರೀಶ್ ಕಾಸರವಳ್ಳಿ, ನಾಗಾಭರಣ ಸೇರಿದಂತೆ 600ಕ್ಕೂ ಹೆಚ್ಚು ಕಲಾವಿದರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
ಕಿರುತೆರೆಯ ಕಾರ್ಮಿಕರ ಈ ನಿರ್ಧಾರ ಕಿವಿಗೆ ಬಿದ್ದೊಡನೆ ಕಾರ್ಯ ಪ್ರವೃತ್ತರಾದ ಚಿತ್ರನಟ ಅಂಬರೀಶ್ ಅವರು ಕಿರುತೆರೆಯ ಕಾರ್ಮಿಕರ ಮನವೊಲಿಸಿ, 20ರಂದು ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ. ಮೆರವಣಿಗೆಯ ನಂತರದ ಒಂದೆರಡು ದಿನದಲ್ಲೇ ಕಿರುತೆರೆಯ ಚಟುವಟಿಕೆ ಆರಂಭಿಸುವ ಭರವಸೆಯನ್ನೂ ನೀಡಿದ್ದಾರೆ.
ಈ ಮಧ್ಯೆ ಮೊನ್ನೆ ಮೊನ್ನೆಯಷ್ಟೇ ಹೊಸ ಕಿರುತೆರೆಯ ಕಲಾವಿದರ ಸಂಘವನ್ನು ಕಟ್ಟಿಕೊಂಡು ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದ ಕಿರುತೆರೆಯ ಕಲಾವಿದ ವೆಂಕಿ, ಪುನಃ ಕಿರುತೆರೆಯ ಹಿರಿಯ ಸಂಘದ ಮುಖ್ಯ ವಾಹಿನಿಯಲ್ಲಿಯೇ ವಿಲೀನವಾಗುವ ಮಾತುಗಳನ್ನು ಆಡಿದ್ದಾರೆ. 3 ದಿನದ ಹಿಂದಷ್ಟೇ ಜನ್ಮ ತಾಳಿದ ಹೊಸ ಸಂಘ ಹಳೇ ಗಂಡನ ಪಾದವೇ ಗತಿ ಎಂದು ಮಾತೃ ಸಂಸ್ಥೆಗೇ ಶರಣು ಹೋಗಿದೆ. ಅಂದ ಹಾಗೆ ಹೊಸ ಸಂಘ ಜನ್ಮ ತಾಳಲು ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಅವರ ಕುಮ್ಮಕ್ಕು ಇತ್ತು ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ.
(ನಮ್ಮ ಪ್ರತಿನಿಧಿಯಿಂದ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications