ರಣತುಂಗ ಕೊನೆ ಪಂದ್ಯ ಶುರುವಾಗಿದೆ
ಕೊಲೊಂಬೊ : ಭಾನುವಾರ ಪ್ರಾರಂಭವಾಗಿರುವ ಶ್ರೀಲಂಕಾ- ದಕ್ಷಿಣ ಅಫ್ರಿಕ ಸರಣಿಯ ನಿರ್ಣಾಯಕ ಟೆಸ್ಟ್ ಕ್ರಿಕೆಟ್ ಪಂದ್ಯ ರಣತುಂಗ ಜೀವನದ ಕೊನೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವೂ ಹೌದು.
ಈ ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಬೈಬೈ ಹೇಳುವುದಾಗಿ ಈಗಾಗಲೇ ತಿಳಿಸಿರುವ ಶ್ರೀಲಂಕಾದ ಅರ್ಜುನ ರಣತುಂಗ ಅವರ 93ನೇ ಟೆಸ್ಟ್ ಪಂದ್ಯ ಇದಾಗಿದ್ದು, ಈ ಪಂದ್ಯವನ್ನು ಶ್ರೀಲಂಕಾ ಗೆದ್ದಲ್ಲಿ ಸರಣಿ ಅದರದ್ದಾಗಲಿದೆ. ಕೊಲೊಂಬೊ ರಣತುಂಗ ಅವರ ತಾಯ್ನಾಡೂ ಹೌದು. ಅವರಿಂದ ಕೊನೆಯ ಭರ್ಜರಿ ಆಟವನ್ನು ಶ್ರೀಲಂಕಾ ನಿರೀಕ್ಷಿಸುತ್ತಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವಿನ ಮನೆಯ ಹೊಸ್ತಿಲಿಗೆ ಬಂದು ಎಡವಿದ ಲಂಕಾ ಪಂದ್ಯವನ್ನು ಕೇವಲ 7 ರನ್ನುಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಉತ್ತಮ ಆಟವಾಡಿ 88 ರನ್ಗಳಿಸಿದ ರಣತುಂಗ ತಮ್ಮ ಕೊನೆ ಪಂದ್ಯದಲ್ಲಿ ತಂಡಕ್ಕೆ ಜಯ ದೊರಕಿಸಿ ಕೊಟ್ಟೇ ಕೊಡುತ್ತಾರೆ ಎಂಬ ಭರವಸೆ ಸಹ ಆಟಗಾರರದು. ಸರಣಿ ಈಗ 1-1ರಲ್ಲಿ ಸಮನಾಗಿದೆ.
1982ರಲ್ಲಿ ಇದೇ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಣತುಂಗ ಟೆಸ್ಟ್ ಕ್ರಿಕೆಟ್ನಲ್ಲಿ ಖಾತೆ ತೆರೆದಿದ್ದರು. 1996ರ ವಿಶ್ವಕಪ್ ಗೆದ್ದ ನಾಯಕನೆಂಬ ಕೀರ್ತಿ ಇವರದು. ಲಂಕಾ ಪರ ಅರವಿಂದ ಡಿಸಿಲ್ವ ಅವರನ್ನು ಬಿಟ್ಟರೆ ಹೆಚ್ಚು ರನ್ ಗಳಿಸಿರುವ ಆಟಗಾರ ರಣತುಂಗ. 36ರ ಹರೆಯದ ರಣತುಂಗ ಕ್ರಿಕೆಟ್ ಜೀವನ ಪ್ರಾರಂಭಿಸಿದ ಮೈದಾನದಲ್ಲೇ ತಮ್ಮ ಜೀವನದ ಕೊನೆ ಟೆಸ್ಟ್ ಆಡಲಿದ್ದು, ಅವರ ಉತ್ತಮ ಕ್ರಿಕೆಟ್ ಜೀವನಕ್ಕೆ ಯಾವ ರೀತಿ ಫೈನಲ್ ಟಚ್ ಕೊಡುತ್ತಾರೆ ಎಂಬುದನ್ನು ನೋಡಬೇಕು.
-
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ 2026: ಕರ್ನಾಟಕ ಚಾಂಪಿಯನ್, ಆತಿಥೇಯ ಛತ್ತೀಸ್ಗಢಕ್ಕೆ 9ನೇ ಸ್ಥಾನ -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications