ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರ್ಣಾ ಪೋಪಟ್‌ ಪುನರಾಗಮನ

By Super
|
Google Oneindia Kannada News

ಬೆಂಗಳೂರು : -ಉ-ದ್ದೀ-ಪ-ನ ಮ-ದ್ದು ಸೇವ-ನೆ-ಯ ಆರೋ-ಪ-ದ ಮೇರೆ-ಗೆ 3 ತಿಂಗಳಿಂದ ಅಂತರರಾಷ್ಟ್ರೀಯ ಟೂರ್ನಿಗಳಿಂದ ಹೊರಗುಳಿದಿದ್ದ -ರಾ-ಜ್ಯ-ದ ಬ್ಯಾಡ್ಮಿಂಟನ್‌ ಆಟಗಾರ್ತಿ ಅಪರ್ಣಾ ಪೋಪಟ್‌ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಒಲಂಪಿಕ್ಸ್‌ನಲ್ಲಿ ಆಡಲು ಸಿಡ್ನಿಗೆ ಹಾರಲಿದ್ದಾರೆ.

ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯ ಪೋಪಟ್‌ ಸಿಡ್ನಿ ಒಲಂಪಿಕ್ಸ್‌ ಮಹಿಳಾ ಸಿಂಗಲ್ಸ್‌ ಬ್ಯಾಡ್ಮಿಂಟನ್‌ಗೆ ಆಯ್ಕೆಯಾಗಿರುವ ವಿಷಯವನ್ನು ಶುಕ್ರವಾರ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೆಡರೇಷನ್‌ ಪ್ರಕಟಿಸಿರುವುದಾಗಿ ಅವರ ತರಬೇತುದಾರ ವಿಮಲ್‌ ಕುಮಾರ್‌ ತಿಳಿಸಿದ್ದಾರೆ.

ನಿಷೇಧ ವಿಧಿಸಿದ್ದು ಯಾತಕ್ಕೆ? : ಮೂರು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಥಾಮಸ್‌ ಉಬೇರ್‌ ಕಪ್‌ನಲ್ಲಿ ಆಡುತ್ತಿದ್ದಾಗ ಶೀತವಾದ ಕಾರಣ ಪೋಪಟ್‌ 'ಡಿ ಕೋಲ್ಡ್‌" ಮಾತ್ರೆ ಸೇವಿಸಿದ್ದರು. ಆ ಮಾತ್ರೆಯಲ್ಲಿ ಕ್ರೀಡಾಪಟುಗಳಿಗೆ ನಿಷೇಧಿಸಿರುವ ಮದ್ದು ಇದ್ದ ಉದ್ದೀಪನಾ ಪರೀಕ್ಷೆಯಲ್ಲಿ ಪಾಸಿಟಿವ್‌ ರಿಸಲ್ಟ್‌ ಬಂದಿತ್ತು. ಹೀಗಾಗಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೆಡರೇಷನ್‌ ಅವರಿಗೆ 3 ತಿಂಗಳ ಕಾಲ ನಿಷೇಧ ವಿಧಿಸಿತ್ತು.

ರ್ಯಾಂಕ್‌ ಪಟ್ಟಿಯಲ್ಲಿ ಕೆಳಗಿಳಿಸಿದ ನಿಷೇಧ : ಆಗ ಅಂತರರಾಷ್ಟ್ರೀಯ ರ್ಯಾಂಕಿಂಗ್‌ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದ್ದ ಪೋಪಟ್‌ ಈವತ್ತು 23ನೇ ಸ್ಥಾನಕ್ಕಿಳಿದಿದ್ದಾರೆ. ನಿಷೇಧಕ್ಕೊಳಗಾದ 3 ತಿಂಗಳ ಅವಧಿಯಲ್ಲಿ ಅನೇಕ ಅಂತರರಾಷ್ಟ್ರೀಯ ಟೂರ್ನಿಗಳಿಂದ ಅವರು ವಂಚಿತರಾಗಿದ್ದಾರೆ. ಆದರೂ ಎದೆಗುಂದದ ಅಪರ್ಣಾ ಅಭ್ಯಾಸ ಮಾತ್ರ ಬಿಡಲಿಲ್ಲ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದ್ದಾಗ ಎಷ್ಟು ಗಂಟೆ ಅಭ್ಯಾಸ ಮಾಡುತ್ತಿದ್ದರೋ, ನಿಷೇಧಕ್ಕೆ ಗುರಿಯಾದಾಗಲೂ ಅಷ್ಟೇ ತಾಸುಗಳ ಕಾಲ ಅಭ್ಯಾಸ ಮುಂದುವರೆಸಿದರು. ಈಗ ಮತ್ತೆ ಆಡುವ ಅವಕಾಶ ಸಿಕ್ಕಿರುವುದು ಪೋಪಟ್‌ಗೆ ಸಂತಸ ತಂದಿದೆ. ಸಿಡ್ನಿಯಲ್ಲಿ ಭಾರತದ ಕೀರ್ತಿ ಹೆಚ್ಚಿಸುವುದೇ ನನ್ನ ಮುಂದಿನ ಗುರಿ ಎಂದು ಅವರು ನುಡಿಯುತ್ತಾರೆ.

English summary
Aparna Poppat to play in Sydney olympics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X