ಫೇಸ್ ಬುಕ್ ನಲ್ಲಿ ಹೊಸ ಟ್ರೆಂಡ್ : ಟ್ರೋಲ್ ಆಗ್ತಿವೆ ಹಳೆ ಫೋಟೋಗಳು

ಮಂಗಳೂರು, ಜೂನ್.08 : ಕರಾವಳಿಯಲ್ಲಿ ಈ ಬಾರಿ ಮಳೆಯ ಜೊತೆ ಇನ್ನೊಂದು ವಿಷಯ ಕೂಡ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಹಳೆ ಫೋಟೋಗಳು.

ಹೌದು, ಕಳೆದ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹೊಸ ಟ್ರೆಂಡ್ ಒಂದು ಸೃಷ್ಠಿಯಾಗಿದ್ದು, ಕರಾವಳಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಉಪಯೋಗಿಸುವವರ ಹಳೆಯ ಪೋಟೋಗಳು ಟ್ರೋಲ್ ಆಗತೊಡಗಿದೆ.

ಮಂಗಳೂರು ಮೂಲದ ಕೆಲವು ಹುಡುಗರು ತಮ್ಮ ಗೆಳೆಯರನ್ನು ಗೋಳು ಹೊಯ್ದುಕೊಳ್ಳಲು ಮಾಡಿದ ಈ ಕೆಲಸ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

 ನಿಮ್ಮ ಫೋಟೋ

ನಿಮ್ಮ ಫೋಟೋ

ಮೊಬೈಲ್ ನಲ್ಲಿ ಫೇಸ್ ಬುಕ್ ಓಪನ್ ಮಾಡಿದಾಗ ನೋಟಿಫಿಕೇಶನ್ ನಲ್ಲಿ ನಿಮ್ಮ ಫೋಟೋ ಒಂದಕ್ಕೆ ಹಲವಾರು ಲೈಕ್ ಗಳು ಬಂದಿರುತ್ತವೆ. ನಿಮ್ಮ ಗೆಳೆಯ ಅಥವಾ ಗೆಳತಿ ನಿಮ್ಮ ಫೋಟೋ ಒಂದಕ್ಕೆ ಲೈಕ್ ಅಥವಾ ಹಾಹಾ ಅಥವಾ ನೈಸ್ ಎಂದು ಕಮೆಂಟ್ ಮಾಡಿರುತ್ತಾರೆ.

ಅದು ಯಾವ ಫೋಟೋ ಎಂದು ನೋಡಿದಾಗ ತಿಳಿಯುವುದು ಅದು ಯಾವುದೋ ಕಾಲದಲ್ಲಿ ತೆಗೆದ ಪೋಟೋ ಅದಾಗಿರುತ್ತದೆ. ಹಳೆಯ ಫೋಟೋವನ್ನು ಹೆಕ್ಕಿ ತೆಗೆದು ಮತ್ತೆ ಅದಕ್ಕೆ ಲೈಕ್ಸ್ ಹಾಗೂ ಕಮೆಂಟ್ ಹಾಕಲಾಗಿರುತ್ತದೆ. ಜೊತೆಗೆ ಟ್ರೋಲ್ ಗಳು ಬೇರೆ.

 ಸೃಷ್ಟಿಯಾಗಿರುವ ಹೊಸ ಟ್ರೆಂಡ್

ಸೃಷ್ಟಿಯಾಗಿರುವ ಹೊಸ ಟ್ರೆಂಡ್

ಇದು ಕಳೆದ ನಾಲ್ಕು ದಿನಗಳಿಂದ ಫೇಸ್‌ಬುಕ್‌ನಲ್ಲಿ ಸೃಷ್ಟಿಯಾಗಿರುವ ಹೊಸ ಟ್ರೆಂಡ್. ಗೆಳೆಯ ಗೆಳತಿಯರ ಹಳೇ ಫೋಟೋಗಳನ್ನು ಅವರ ಫೇಸ್‌ಬುಕ್ ಅಲ್ಬಂನಿಂದ ಹುಡುಕಿ ತೆಗೆದು ಅದಕ್ಕೆ ನೈಸ್ ಎಂದು ಕಮೆಂಟ್ ಅಥವಾ ಇಮೋಜಿ ಮೂಲಕ ರಿಯಾಕ್ಟ್ ಮಾಡಿ ಸುಮ್ಮನಿರಲಾಗುತ್ತದೆ.

ಈ ಮೂಲಕ ಎಲ್ಲೊ ಇದ್ದ ಹಳೆಯ ಫೋಟೋ ಒಂದು ಇದ್ದಕ್ಕಿದ್ದ ಹಾಗೇ ಫೇಸ್ ಬುಕ್ ನ ಮುಖ್ಯ ಟೈಮ್ ಲೈನ್ ನ್ಯೂಸ್ ಫೀಡ್ ಗೆ ಬರುತ್ತದೆ. ಜೊತೆಗೆ ಮತ್ತಷ್ಟು ನಿಮ್ಮ ಫ್ರೆಂಡ್ ಗಳಿಗೆ ಅದು ಗೋಚರವಾಗಿ ಮತ್ತಷ್ಟು ಲೈಕ್ ಕಮೆಂಟ್ ಗಳು ಬರಲಾರಂಭಿಸುತ್ತದೆ.

 ಸಾಕಷ್ಟು ಟ್ರೋಲ್ ಗೂ ಗುರಿ

ಸಾಕಷ್ಟು ಟ್ರೋಲ್ ಗೂ ಗುರಿ

2009ರಲ್ಲಿ ಮತ್ತು ಅದರ ನಂತರದಲ್ಲಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಅಪ್‌ಲೋಡ್ ಮಾಡಿದ್ದ ಫೋಟೋಗಳು ಎಲ್ಲವೂ ಈಗ ಮೇಲೆದ್ದು ಬರುತ್ತಿದೆ. ಜತೆಗೆ ಈ ಟ್ರೆಂಡ್ ಗೆ ಸರಿಯಾಗಿ ಸಾಕಷ್ಟು ಟ್ರೋಲ್ ಗೂ ಗುರಿಯಾಗುತ್ತಿದೆ.

 ನಗು ತರಿಸುತ್ತವೆ

ನಗು ತರಿಸುತ್ತವೆ

ಗೆಳೆಯರ ಹಳೇ ಫೋಟೋಗಳು ಮತ್ತು ಈಗಿನ ಅವತಾರಗಳನ್ನು ಈಗ ನೋಡಿದರೆ ನಗು ಬರುವ ಜತೆಗೆ, ಆ ವ್ಯಕ್ತಿಗೂ ನಿಜಕ್ಕೂ ನಾನು ಅವಾಗ ಹೀಗೆ ಇದ್ದೆನಾ ಎಂದು ಅನ್ನಿಸುತ್ತಿದೆ.

ಕಳೆದ 2-3 ದಿನಗಳಲ್ಲಂತೂ ಫೇಸ್‌ಬುಕ್‌ನ ಬಳಕೆದಾರರು ಲೈಕ್ ಮತ್ತು ಕಮೆಂಟ್ ನೋಟಿಫೀಕೇಶನ್ ಬಂದಕೂಡಲೇ ಈ ಬಾರಿ ಯಾವ ಫೋಟೋ ಸಿಕ್ಕಿದೆಯೋ ಎಂದು ಗಾಬರಿಪಟ್ಟುಕೊಳ್ಳುವಂತಾಗಿದೆ. ಸದ್ಯಕ್ಕಂತೂ ಈ ಟ್ರೆಂಡ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+