ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೀನು' ಹಿಡಿಯುವುದು ಹೇಗೆ? ಇಲ್ಲಿದೆ ಸುಲಭದ ಉಪಾಯ

|
Google Oneindia Kannada News

ಒಬ್ಬ ಬೆಸ್ತ ನದಿಯಲ್ಲಿ ಮೀನು ಹಿಡಿಯಲು ಹೊಸ ವಿಧಾನ ಬಳಸುತ್ತಿದ್ದ. ಅವನ ಒಂದು ಕೈಯಲ್ಲಿ ಕನ್ನಡಿ, ಮತ್ತೊಂದು ಕೈಯಲ್ಲಿ ಕೈಬಲೆ ಇತ್ತು.

ಹಾಗೆ ಅದೇ ರಸ್ತೆಯಲ್ಲಿ ಬಂದ ದಾರಿಹೋಕನಲ್ಲಿ ಇದು ಕುತೂಹಲ ಮೂಡಿಸಿತು. ಆತನಿಗೆ ಅಚ್ಚರಿಯೂ ಆಯಿತು. ಕೇಳಿಯೇ ಬಿಟ್ಟ, 'ಇದೆಂತ ಉಪಕರಣ? ಇದರ ಬೆಲೆ ಎಷ್ಟು' ಎಂದು ವಿಚಾರಿಸಿದ.

ಜ್ಞಾನೋದಯವಾಗುವುದು ಎಂದರೆ ಏನು ಗೊತ್ತೇ?ಜ್ಞಾನೋದಯವಾಗುವುದು ಎಂದರೆ ಏನು ಗೊತ್ತೇ?

ಅದಕ್ಕೆ ಬೆಸ್ತ ನೂರು ರೂಪಾಯಿ ಎಂದ. ಕಡಿಮೆ ಬೆಲೆಗೆ ಮೀನು ಹಿಡಿಯುವ ಸಾಧನ ಎಂದು ದಾರಿಹೋಕ ಮರುಚಿಂತಿಸದೆ ಕನ್ನಡಿ ಮತ್ತು ಬಲೆಯನ್ನು ಖರೀದಿ ಮಾಡಿದ. ಖರೀದಿಸಿದ ಬಳಿಕ ಅವನಲ್ಲಿ ಅನುಮಾನ ಮೂಡಿತು, 'ಇದನ್ನು ಬಳಸಿ ಮೀನು ಹಿಡಿಯುವುದು ಹೇಗೆ?' ಎಂದು ಕೇಳಿದ.

Zen Stories How To Catch Fishes A Mirror And Small Net

'ಕನ್ನಡಿಯನ್ನು ನೀರಿನ ಕಡೆಗೆ ಹಿಡಿಯಿರಿ. ಸೂರ್ಯನ ಬೆಳಕು ಅದರಲ್ಲಿ ಪ್ರತಿಫಲಿಸುತ್ತವೆ. ನೀರಿನೊಳಗನ ಮೀನುಗಳು ಆ ಬೆಳಕಿನತ್ತ ಧಾವಿಸಿ ಬರುತ್ತವೆ. ಆಗ ಕೈಬಲೆ ಬೀಸಿ ಮೀನು ಹಿಡಿದುಬಿಡಿ' ಎಂದು ಸರಳವಾಗಿ ಬೆಸ್ತ ವಿವರಿಸಿದ.

ಅರೆ! ಅಷ್ಟೊಂದು ಸುಲಭವಿದೆಯಲ್ಲ! ಎಂದು ದಾರಿಹೋಕ ಖುಷಿಪಟ್ಟ.

ಕಾಡಿನಲ್ಲಿ ಎದುರಾದ ಹುಲಿಯ ಕಣ್ಣೊಳಗೆ ಕಣ್ಣಿಟ್ಟು ನೋಡಿದಾಗ...ಕಾಡಿನಲ್ಲಿ ಎದುರಾದ ಹುಲಿಯ ಕಣ್ಣೊಳಗೆ ಕಣ್ಣಿಟ್ಟು ನೋಡಿದಾಗ...

'ಅಂದಹಾಗೆ, ನೀನು ಇದೇ ವಿಧಾನ ಬಳಸಿ ಎಷ್ಟು ಮೀನು ಹಿಡಿದಿದ್ದೀಯಾ?' ಎಂದು ಬೆಸ್ತನನ್ನು ಪ್ರಶ್ನಿಸಿದ.

'ಬೆಳಗಿನಿಂದ ನೀನು ಐದನೆಯವನು' ಎಂದು ಬೆಸ್ತ ಉತ್ತರ ನೀಡಿದ.

(ಝೆನ್ ಕಥೆಯ ಸಂಗ್ರಹ)

English summary
Zen Story of the day: A fisher was seling a mirror and net to capture fishes. A passer-by was curious and bought it. He asked how to fish using these things. What happened next? read the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X