ಜಸ್ಟ್ ಫಾರ್ ಎ ಚೇಂಜ್ (ಭಾಗ 4)

ಪಾರ್ಕ್ ನ ಗೇಟಿನ ಹೊರಗಡೆ ಅವಳೇ ಕಾಯುತ್ತ ನಿಂತಿದ್ದಾಳೆ. ಏನಾಶ್ಚರ್ಯ! ಪ್ರತಿಬಾರಿ ಕರೆದು ಗಂಟೆಗಟ್ಟಲೆ ಕಾಯ್ದ ಮೇಲೆ ಬರುತ್ತಿದ್ದವಳು, ಈಗಾಗಲೇ ಬಂದಿದ್ದಾಳೆ. ಜಸ್ಟ್ ಫಾರ್ ಎ ಚೇಂಜ್! ಅಲ್ಲಿಯೆ ಸುತ್ತ ಕಣ್ಣಾಡಿಸಿ ನೋಡಿದರೆ ಯಾರೂ ಇರಲಿಲ್ಲ. ಸೂರ್ಯನೂ ಪ್ರೇಮಿಗಳಿಗೆ ಪ್ರೇರಕನಾಗುವಂತೆ ತನ್ನ ಪ್ರಖರ ತೋರುತ್ತಿಲ್ಲ! ಮಧ್ಯಾಹ್ನದಲ್ಲೂ ಸವಿ ಸಂಜೆಯ ಮಂದ ಬೆಳಕಿನ ತುಸು ಮೆಲ್ಲ ಬೀಸುವ ತಂಗಾಳಿಯ ಆಹ್ಲಾದಕರ ವಾತಾವರಣ. ಈರ್ವರಿಗೂ ಹೇಳಿ ಮಾಡಿಸಿದಂತಿದೆ ಇಂದು. ಜೊತೆಗೆ, ಸಾಫ್ಟ್‌ವೇರ್ ಎಂಜಿನಿಯರ್ ಗಳೆಲ್ಲಾ ’ಅರಸಿಕರು’ ಎಂಬ ಅಪವಾದವನ್ನು ತೊಡೆದು ಹಾಕಲು ಶಪಥ ತೊಟ್ಟಂತಿದ್ದ. ಪಿಸು ಮಾತುಗಳು, ಕಣ್ಣಾಟಗಳು, ಚೆಲ್ಲಾಟಗಳು, ಸರಸ-ಸಲ್ಲಾಪಗಳು ಸಂಜೆಯವರೆಗೂ ಸಾಗಿದವು. ಇದಕ್ಕೆ ಸಾಕ್ಷಿಯೆಂಬಂತೆ ಸೂರ್ಯದೇವ ’ಪ್ರಣಯ ದೀವಿಗೆ’ಯಂತೆ ಬೆಳಗುತ್ತಿದ್ದ. ಇದ್ದಕ್ಕಿದ್ದಂತೆ ತರುಣನಿಗೆ ಆಫೀಸಿನ ನೆನಪಾಗಿ ಸಮಯ ನೋಡಿಕೊಂಡ. ಅದು ಸಂಜೆ 5 ಎಂದು ಸಾರಿ ಹೇಳುತ್ತಿತ್ತು. ಕೂಡಲೇ, ನಾನು ಹೊರಡಬೇಕೆಂದು ರಮ್ಯಾಳಿಗೆ ತಿಳಿಸಿ ಹೊರಟಿದ್ದ. ಆಗ ಅವಳೇ, ’ಒಂದು ಮಾತು’ ಎಂದಳು. ತರುಣ್ ಮತ್ತೆ ತಿರುಗಿ ಏನೆಂದ. ಆಗ ಅವಳೇ, "ನಮ್ಮ ಅಪ್ಪ, ಅಮ್ಮನ ಹತ್ತಿರ ಮಾತಾಡಿದ್ದೀನಿ. ನಮ್ಮ ಮದ್ವೆಗೆ ಅವರು ಸಲೀಸಾಗಿ ಒಪ್ಕೊಂಡು ಬಿಟ್ರು" ಎಂದು ಒಮ್ಮೆ ಕಣ್ಣು ಹೊಡೆದು ನಕ್ಕು ಬಿಟ್ಟಳು. ಅವನು ಅಲ್ಲಿಯೆ ಒಂದು ಬಾರಿ ಅವಳನ್ನಪ್ಪಿಕೊಂಡು ಬಿಟ್ಟ.

ಅವಸವಸರವಾಗಿ ಆಫೀಸಿಗೆ ಬಂದು ಮೇಲ್ಸ್ ಚೆಕ್ ಮಾಡಿದ. ಅವನ ಮ್ಯಾನೇಜರ್ ನಿಂದ, ’ಪ್ಲೀಸ್ ಕಮ್ ಟು ಮೈ ಕ್ಯಾಬಿನ್ ಯಾಸ್ ಸೂನ್ ಯಾಸ್ ಯು ಆರ್ ದೇರ್" ಎಂಬ ತಲೆಬರಹವಿರುವ ಮೇಲೊಂದು ಬಂದಿತ್ತು. ಏನು ಗ್ರಹಚಾರವೋ ಎಂಬಂತೆ, ಮನದಲ್ಲಿಯೆ ಸಂಸ್ಕೃತ ಪದ-ಪುಷ್ಪಗಳಿಂದ ಮ್ಯಾನೇಜರ್ ನನ್ನು ಪೂಜಿಸುತ್ತ ಬಂದ. ಆಶ್ಚರ್ಯವೆಂಬಂತೆ, ಮ್ಯಾನೇಜರ್ ನ ಮೊಗದಲ್ಲಿ ಮಂದಹಾಸ! ಜಸ್ಟ್ ಫಾರ್ ಎ ಚೇಂಜ್! ಅವರೇ ಬರಮಾಡಿಕೊಂಡು, ಹಸ್ತಲಾಘವ ಕೊಟ್ಟು, "ಕಂಗ್ರ್ಯಾಟ್ಸ್ ತರುಣ್, ಯು ಆರ್ ಪ್ರಮೋಟೆಡ್ ಅಂಡ್ ಗಾಟ್ ಯಾನ್ ಆನ್ ಸೈಟ್ ಆಫರ್" ಎಂದಾಗ ತರುಣ್ ಗೆ ಭಾರತ ಮಾತೆಯ ಹಿರಿಯ ಸಹೋದರಿ ಅಮೆರಿಕೆ ಒಲಿದಳೆಂದು ಮನದಲ್ಲೇ ಕೈ ಮುಗಿದುಕೊಂಡ.

ಮನೆಗೆ ಇಂದು ಬೇಗನೇ ಬಂದು ಬಿಟ್ಟ. ಆಫೀಸ್ ಬಿಟ್ಟಿದ್ದು ಸರಿಯಾಗಿ 6.30ಕ್ಕೆ, ಅಂದರೆ ಬೇಗನೆಯೇ. ಅಷ್ಟಕ್ಕೂ, ಇಂದು ಟ್ರಾಫಿಕ್ಕು ಇಲ್ಲವಲ್ಲಾ! ತಕ್ಷಣವೇ, ಸ್ವಂತ ಊರಿನಲ್ಲಿದ್ದ ತನ್ನ ತಂದೆ-ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಮಕ್ಕಳ ಏಳ್ಗೆಯ ಜಪವನ್ನೇ ಮಾಡುವ ಯೋಗಿಗಳಿಗೆ ಆ ಭಗವಂತನೇ ಪ್ರತ್ಯಕ್ಷನಾಗಿ ವರ ಕೊಟ್ಟಂತಾಯಿತು. ಇಷ್ಟು ದಿನ ಹೇಳಬೇಕೆಂತಿದ್ದ ತನ್ನ ಪ್ರೇಮದ ವಿಚಾರವನ್ನೂ ತಿಳಿಸಿಯೇ ಬಿಟ್ಟ. ಅದಕ್ಕೆ ಅವರು, "ನೀ ಯಾವ ಹುಡ್ಗಿನಾದ್ರೂ ಮದ್ವೆ ಮಾಡ್ಕೋ. ಒಳ್ಳೇದಾದ್ರೆ, ಅಷ್ಟೇ ಸಾಕು" ಎಂದು ತಮ್ಮ ಅನುಭವಕ್ಕೆ, ಪ್ರೌಢಿಮೆಗೆ ತಕ್ಕುದಾದ ಗೌರವದ ನುಡಿಗಳನ್ನೇ ಆಡಿದರು. ಒಂದು ಕಡೆ ವಿದೇಶದಲ್ಲಿ ಕೆಲಸ, ಇನ್ನೊಂದು ಕಡೆ ನೆಚ್ಚಿನ ಹುಡುಗಿಯೊಡನೆ ವಿವಾಹಕ್ಕೆ ಹಿರಿಯರ ಒಪ್ಪಿಗೆ. ಇನ್ನೇನು ಬಾಕಿ, ಆ ಸ್ವರ್ಗವೇ ಮೂರು ಗೇಣು ಕೆಳಗಿದೆ!

ಯಾವಾಗಲಾದರೂ ಎಚ್ಚರವಾಗಲೇಬೇಕಲ್ಲ! ಅಂದಹಾಗೆ ಈಗ ಸಮಯ ಬೆಳಿಗ್ಗೆ 8.30!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+