ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಸ್ಟ್ ಫಾರ್ ಎ ಚೇಂಜ್ (ಭಾಗ 3)

By * ಡಿ.ಗು.ರಾವ್, ಬಳ್ಳಾರಿ
|
Google Oneindia Kannada News

ತನ್ನ ಕ್ಯೂಬಿಕಲ್ ಗೆ ಬಂದು ಕುಳಿತು ಮೇಲ್ಸ್ ಚೆಕ್ ಮಾಡಿದ. ಅಂತಹ ಮುಖ್ಯವಾದುದೇನೂ ಇರಲಿಲ್ಲ. ಹಾಗಾಗಿ, ಕಾಫಿ ಹೀರುತ್ತ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಸ್ (ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್, ಐಬಿಬೊ, ಆರ್ಕುಟ್, ಮುಂತಾದವು) ಓಪನ್ ಮಾಡಿದ. ಒಂದೆರಡು ತಲೆ ಬುಡವಿಲ್ಲದ ಫೋಟೊ ಮತ್ತು ವಿಡಿಯೋಗಳಿಗೆ ಕಾಮೆಂಟ್ ಕೊಟ್ಟ ನಂತರ ಬೇಸರವೆನಿಸಿ ಲಾಗ್ ಔಟ್ ಮಾಡಿದ. ಒಮ್ಮೆ ಹೀಗೆಯೆ ಏನಾದರೂ ಕೆಲಸವಿದ್ದರೆ ಕೇಳೋಣವೆಂದು ಸಹೋದ್ಯೋಗಿಯೊಬ್ಬನತ್ತ ನಡೆದ. ಅವನು, ’ಇವತ್ತು ನೀನ್ ಅರಾಮ್ ಆಗಿರು ಗುರು’ ಎಂದು ಹೇಳಿದಾಗ, ತರುಣ್ ಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ!

ಮತ್ತೆ ತನ್ನ ಕ್ಯೂಬಿಕಲ್ ನಲ್ಲಿ ಕುಳಿತು ’ಜಿ.ಟಾಕ್’ ಚಾಟಿಂಗ್ ಶುರು ಮಾಡಿದ. ಸಿಕ್ಕ ಸಿಕ್ಕ ಗೆಳೆಯ ಗೆಳತಿಯರಿಗೆಲ್ಲಾ ಒಂದೊಂದು ವಿಂಡೊ. ಎಂದೋ ಮಾಡಿದ್ದ ಕೀಟಲೆ-ರಗಳೆಗಳನ್ನು ನೆನಪಿಸಿಕೊಳ್ಳುತ್ತ ಹರಟೆ ಹೊಡಿಯುತ್ತಿದ್ದ. ಇದ್ದಕ್ಕಿದ್ದಂತೆ ಸಮಯ ನೋಡಿಕೊಂಡ, 11.30 ಆಗಿತ್ತು. ಶಿಸ್ತಿನ ಹುಲಿಯಂತಿದ್ದ ತಮ್ಮ ಮ್ಯಾನೇಜರ್ ಇನ್ನೂ ಏಕೋ ಬಂದಿಲ್ಲವೆಂದು ಯೋಚಿಸುತ್ತಿದ್ದ. ’ಎನೋ, ಈ ಸದ್ಯ ನಾನ್ ಎಂಜಾಯ್ ಮಾಡ್ತಿದೀನಿ, ಅಷ್ಟೇ ಸಾಕು’ ಎಂದನಿಸಿತು. ಮತ್ತೆ ಆನ್ ಲೈನ್ ನವರಿಗೆಲ್ಲಾ ಒಂದು ಲೈನ್ ಹೊಡೆದ. ಒಬ್ಬೊಬ್ಬರಿಗೆ ಬೇಸರವಾಗಿ, ಅವರಾಗಿಯೇ ಕಳಚಿಕೊಳ್ಳ ತೊಡಗಿದರು. ಕೊನೆಗೆ ಎಲ್ಲವನ್ನೂ ಕ್ಲೋಸ್ ಮಾಡಿದ.

ಒಮ್ಮೆ ತನ್ನ ನಲ್ಮೆಯ ಹುಡುಗಿ ’ರಮ್ಯಾ’ಳಿಗೆ ಮೀಟ್ ಮಾಡಲು ಏಕೆ ಕರೆಯಬಾರದು ಎನ್ನಿಸಿತು. ಆದರೆ, ಕರೆದ ತಕ್ಷಣ ಬರುತ್ತಾಳೆಯೆ? ಯಾವಾಗಲೂ ಏನಾದರೂ ಗೊಣಗುತ್ತಿರುತ್ತಾಳೆ. ಆದರೂ, ಒಮ್ಮೆ ಪ್ರಯತ್ನಿಸಬಾರದೇಕೆ ಎಂದೆನಿಸಿ ಕೂಡಲೆ ಕಾಲ್ ಮಾಡಿದ. ಏನಾಶ್ಚರ್ಯ! ಪ್ರತಿಬಾರಿ ಏನಾದರೂ ಗೊಣಗುತ್ತಿದ್ದವಳು, ’ಇಂದು ಮನೆಯಲ್ಲೆ ಇದ್ದೀನಿ, ಕಾಲೇಜಿಗೆ ಹೋಗಿಲ್ಲ. ಅದೇ ಮಾಮೂಲಿ ಪಾರ್ಕ್ ಗೆ ಬಂದುಬಿಡ್ತೀನಿ’ ಎಂದಳು. ಅವಳ ಮಾತನ್ನು ಕೇಳಿ, ಒಂದೂವರೆ ವರ್ಷದ ತಮ್ಮ ಪ್ರೀತಿಯಲ್ಲಿ ಇಂದು ಒಂದು ಅತ್ಯಂತ ಸವಿ ದಿನವೆಂದು ಮನದಲ್ಲೇ ಮಲ್ಲಿಗೆ ಚೆಲ್ಲಿದ. ಕೂಡಲೇ, ತನ್ನ ಗೆಳೆಯನ ಹತ್ತಿರ ಹೋಗಿ, "ಇಲ್ಲೇ ಹೋಗಿ ಬರ್ತೀನಿ. ಮ್ಯಾನೇಜರ್ ಬಂದು ಕೇಳಿದ್ರೆ ನೀನೆ ಹ್ಯಾಂಡಲ್ ಮಾಡು" ಎಂದು ಹೇಳಿ ಹೊರಟ.

English summary
The life will never be how we expect it to be. Getting up in the morning, catch the ever crowded bus, get scolded by your boss, rejection by the lover... But, just for a change, if the whole world acts as per our wish? Read one, a short story by Gururaj Rao Desai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X