ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಸ್ಟ್ ಫಾರ್ ಎ ಚೇಂಜ್ (ಭಾಗ 2)

By * ಡಿ.ಗು.ರಾವ್, ಬಳ್ಳಾರಿ
|
Google Oneindia Kannada News

ಒಂದು ವೇಳೆ, ಬೇರೆ ಯಾರಾದರೂ ಆ ’ಎಸ್-1’ನ ಬದಲು ಕೂತರೆ, ಕೂಡಲೇ ’ಇದು ನಿಮ್ಮ ಸೀಟ್ ಅಲ್ಲ, ದಯವಿಟ್ಟು ನಿಂತು ಪ್ರಯಾಣಿಸಿ ಸಹಕರಿಸಿ’ ಎಂದು ವಾರ್ನಿಂಗ್ ಮೆಸೇಜ್ ಕೊಡಬೇಕು. ಇದರಿಂದ ಅವರಿಗೆ ಅವಮಾನವೆನಿಸಿ ಎದ್ದುಬಿಡುತ್ತಾರೆ. ಒಂದು ವೇಳೆ, ಅವರಿಗೆ ಮಾನ-ಅವಮಾನವಿರದ ಪಕ್ಷದಲ್ಲಿ, 1 ನಿಮಿಷ ಹಾಗೆಯೇ ಕುಳಿತಿದ್ದರೆ ಕೂಡಲೇ ಕಂಡಕ್ಟರ್ ಗೆ ದಂಡ ವಿಧಿಸುವಂತೆ ಆದೇಶಿಸಬೇಕು. ದುರದೃಷ್ಟವಶಾತ್, ಯಾರಿಗಾದರೂ ಕೊನೆಯವರೆಗೂ ಸೀಟ್ ಸಿಗದೆ ಅವರು ಕನಿಷ್ಟ 30 ನಿಮಿಷ ಪ್ರಯಾಣಿಸಿದ್ದಲ್ಲಿ, ಅವರಿಗೆ ಪ್ರಯಾಣ ದರದ ಶೇ.10ರಷ್ಟು ಹಣವನ್ನು ಹಿಂತಿರುಗಿಸುವಂತಿರಬೇಕು. ಈ ಸಿಸ್ಟಮ್ ನ ಅಳವಡಿಕೆಯಿಂದ ಬಿ.ಎಂ.ಟಿ.ಸಿ.ಯವರಿಗೂ ಒಂದು ಲಾಭವಿದೆ. ಅವರು ಎಷ್ಟು ’ಸ್ಟ್ಯಾಂಡಿಂಗ್’ ಸೀಟ್ ಗಳಿವೆ ಎಂಬುದರ ಮೇಲೆ ಆ ಮಾರ್ಗಗಳಿಗೆ ಬಸ್ ಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು". ಕವಿಯೊಬ್ಬ ತನ್ನ ಮಹಾಕಾವ್ಯಕ್ಕೆ ತಾನೇ ಮಾರು ಹೋಗಿ ಶರಣಾಗುವಂತೆ, ತರುಣ್ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.

ಖ್ಯಾತ ಆಪೆಲ್ ಕಂಪನಿಯ ರೂವಾರಿ ಸ್ಟೀವ್ ಜಾಬ್ಸ್ ರ ಶ್ರೇಷ್ಠ ಕೊಡುಗೆಗಳಲ್ಲೊಂದು ಐ-ಪಾಡ್ ಮ್ಯೂಸಿಕ್ ಪ್ಲೇಯರ್. ಎಂದಿನಂತೆ ತರುಣ್ ತನ್ನ ಐ-ಪಾಡ್ ತೆಗೆದ. ಅದೇಕೋ, ಇಂದು ಅವನಿಗೆ ಎಂದೂ ಕೇಳದ ಕನ್ನಡ ಹಾಡುಗಳನ್ನ ಕೇಳಬೇಕೆನಿಸಿತು. ಕೂಡಲೇ, ಪ್ಲೇಲಿಸ್ಟ್ ನಿಂದ ಆಯ್ದ ಗೀತೆಗಳನ್ನ ಕೇಳಲು ಶುರು ಮಾಡಿದ. ಎಂದೆಂದಿಗಿಂತಲೂ ಇಂದು, ಈ ಕನ್ನಡದ ಹಾಡುಗಳೇ ಅತಿ ಮಧುರವೆನಿಸಿದವು; ವಿಶ್ವ ದರ್ಜೆಯದೆನಿಸಿದವು. ಇನ್ನು ಮುಂದೆ, ಕೇವಲ ಕನ್ನಡದ ಹಾಡುಗಳನ್ನಷ್ಟೇ ಕೇಳಬೇಕೆಂದು ನಿರ್ಧಾರ ಮಾಡಿಯೇ ಬಿಟ್ಟ.

ಇದರ ನಡುವೆ, ಏಕೋ ಇಂದು ಬಸ್ ವೇಗವಾಗಿ ಹೋಗುತ್ತಿರುವಂತೆ ಭಾಸವಾಯಿತು. ಸ್ವಲ್ಪ ಕಿಟಕಿಯ ಕಡೆ ಕಣ್ಣು ಹಾಯಿಸಿದ, ರಸ್ತೆಯೆಲ್ಲಾ ಖಾಲಿ-ಖಾಲಿ. ಹೌದು, ಇಂದು ’ಟ್ರಾಫಿಕ್ಕೇ ಇಲ್ಲಾ’ ಎಂದು ಹಿರಿ-ಹಿರಿ ಹಿಗ್ಗಿದ. ಮರುಕ್ಷಣ, ಮನೆಗೆ ಬರುವಾಗಲೂ ಈ ರೀತಿಯೆ ಇದ್ದರೆ ಎಷ್ಟು ಚೆನ್ನ ಎಂದನಿಸಿತು. ಜೊತೆಗೆ, ಇಂದು ಏನಾದರೂ ರಜೆಯಿರಬಹುದೆ ಎಂಬ ಸಂಶಯ ಮೂಡಿತು. ಆದರೆ, ಆಫೀಸಿರುವ ದಿನವೇ ಬರುವುದು ದುಸ್ತರವೆನಿಸಿದಾಗ, ಇನ್ನು ರಜೆಯ ದಿನ ಬರುವಷ್ಟು ತಾನು ಮೂರ್ಖನಲ್ಲ ಎಂದೆನಿಸಿತು. ಹಾಗಾದರೆ, ಯಾರಾದರೂ ’ಗಣ್ಯರು’ ನರಕ (ಸ್ವರ್ಗ?)ದ ಬಾಗಿಲು ತಟ್ಟಿದರೆ? ಛೇ! ಹಾಗೇನಿಲ್ಲ, ವಾರದಿಂದ ಹಳೆಯ ಸ್ಕ್ಯಾಮನ್ನೇ ಇನ್ನೂ ಟಿ.ವಿ. ಮಾಧ್ಯಮದವರು ಹಿಡಿದಿದ್ದುದು ನೆನಪಾಗಿ, ಇದೂ ಅಲ್ಲವೆನಿಸಿತು. ಒಮ್ಮೆ, ’ನನ್ನ ಗೆಳೆಯನಿಗೆ ಕಾಲ್ ಮಾಡಿ ಕೇಳಲೆ?’ ಎಂದುಕೊಂಡ. ಬೇಡ, ಅವನು ಗೇಲಿ ಮಾಡಿ ನಗುತ್ತಾನೆ ಅಷ್ಟೇ ಅನಿಸಿತು. ಪುಕ್ಕಟೆ ಕೆಲಸ ಮಾಡಿದರೂ ಖಾಸಗಿ ಕಂಪನಿಯವರು ಬೇಡವೆನ್ನುತ್ತಾರೆಯೆ? ಹೇಗೊ, ಬಸ್ ಹತ್ತಿ ಆಗಿದೆ, ಆಫೀಸಿಗೆ ಹೋಗೇ ನೋಡೋಣ ಎಂದುಕೊಂಡ.

ಟ್ರಾಫಿಕ್ ಇಲ್ಲದ ಕಾರಣ, ಇಂದು 8ಕ್ಕೆ ಬಂದು ಆಫೀಸಿನಲ್ಲಿ ಸ್ವೈಪ್ ಮಾಡಿದ. ಅಂದ ಮೇಲೆ, ಇಂದೂ ಎಂದಿನಂತೆಯೇ ಎಂದುಕೊಂಡ. ಬೇಗ ಬಂದುದರಿಂದ, ಕೆಫೆಗೆ ಹೋಗಿ ತಿಂಡಿ ತೆಗೆದುಕೊಂಡು ಬಂದು ಕುಳಿತ. ಸುಂದರ ಹುಡುಗಿಯರ ಗುಂಪೊಂದು ಅವನ ಟೇಬಲ್ ನ ಎದುರಿನಲ್ಲೇ ಬಂದು ಕುಳಿತಿತು. ತರುಣ್ ಗೆ ಎಲ್ಲಿಲ್ಲದ ಆಶ್ಚರ್ಯ! ತಮ್ಮ ಆಫೀಸಿನಲ್ಲಿ ಅಂತಹ ಚೆಂದವಾದ ಹುಡುಗಿಯರಾರೂ ಇಲ್ಲವೆಂದು ಸ್ನೇಹಿತರೊಡನೆ ಗೊಣಗುತ್ತಿದ್ದುದು ಸರ್ವೇಸಾಮಾನ್ಯ. ಅಂದ ಮೇಲೆ, ಇವರು ಹೊಸದಾಗಿ ಸೇರಿರಬೇಕು ಎಂದನಿಸಿತು. ಸ್ವಲ್ಪ ಸೂಕ್ಷ್ಮವಾಗಿ ನೋಡಿದ, ಇಲ್ಲ ಇವರು ಹಳಬರೇ. ಇಂದೇಕೊ, ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ತುತ್ತಿಗೊಮ್ಮೆ ಅವರನ್ನೇ ನೋಡುತ್ತಾ ನಿಧಾನವಾಗಿ ತಿನ್ನುತ್ತಿದ್ದ. ಈ ದಿನದ ಇಡ್ಲಿ ಅದೇಕೊ ತುಂಬಾ ರುಚಿಯೆನಿಸಿತು. ಬಹುಷಃ ಎದುರಿನ ಟೇಬಲ್ ನ ಮಹಿಮೆಯೇನೋ! ಸೌಂದರ್ಯವನ್ನು ಆನಂದಿಸುವುದು, ಆರಾಧಿಸುವುದು ತಪ್ಪಲ್ಲ; ಆದರೆ, ಅನುಭವಿಸುವುದು ತಪ್ಪೆಂದು ಅವನಿಗೆ ತಿಳಿದಿತ್ತು. ತಿಂಡಿ ಮುಗಿಸಿ ಹೊರಡುವಾಗ, ಆ ಗುಂಪು ಹೊರಟಿತು. ಆಗ, ಅವರಲ್ಲಾರೋ ಒಬ್ಬರು ’ದಟ್ ಗೈ ವಾಸ್ ಲುಕಿಂಗ್ ಹ್ಯಾಂಡ್ಸಮ್’ ಅಂತ ಹೇಳಿದುದು ಕೇಳಿ, ತರುಣ್ ಮೇಲೆ ಜಿಗಿಯುವುದೊಂದೇ ಬಾಕಿಯಿತ್ತು!

English summary
The life will never be how we expect it to be. Getting up in the morning, catch the ever crowded bus, get scolded by your boss, rejection by the lover... But, just for a change, if the whole world acts as per our wish? Read one, a short story by Gururaj Rao Desai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X