• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಸ್ಟ್ ಫಾರ್ ಎ ಚೇಂಜ್

By * ಡಿ.ಗು.ರಾವ್, ಬಳ್ಳಾರಿ
|
ಮೊಬೈಲ್ ನ ಅಲಾರಮ್ ಸರಿಯಾಗಿ ಬೆಳಿಗ್ಗೆ 6.30ಕ್ಕೆ ಬಡಿಯುತ್ತಿದ್ದಂತೆಯೇ ತರುಣ್ ಎದ್ದುಬಿಟ್ಟ. ನಿಧಾನವಾಗಿ ಪ್ರಾತಃರ್ವಿಧಿಗಳನ್ನು ಮುಗಿಸಿದ ಮೇಲೆ, ಈ ದಿನ ತುಸು ಬೇಗನೆಯೇ ಮನೆಗೆ ಬೀಗ ಜಡಿದಿದ್ದ!

ಬೆಂಗಳೂರಿನ ಉನ್ನತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ತರುಣ್ ಕೆಲಸ ಮಾಡುತ್ತಿದ್ದ. ಮನೆಗೂ ಆಫೀಸಿಗೂ ಇರುವ ದೂರದಲ್ಲಿ, ಸಿಟಿ ಬಸ್ಸಿನಲ್ಲಿ ಕುಳಿತಾಗ ಒಂದು ಚಿಕ್ಕ ಕಾದಂಬರಿಯನ್ನು ಓದಿ ಮುಗಿಸಬಹುದಾಗಿತ್ತು. ಆದರೂ, ಆ ಹಾಳು ಕಾದಂಬರಿಯನ್ನಾರು ಓದುತ್ತಾರೆ? ಆಫೀಸನ್ನು ಸರಿ ಸಮಯ 9ಕ್ಕೆ ತಲುಪಬೇಕಾದದ್ದು ತರುಣನಿಗೆ ಅನಿವಾರ್ಯವಾಗಿತ್ತು. ಇಲ್ಲದಿದ್ದರೆ, ಅವನ ಮ್ಯಾನೇಜರ್ ನ ಬಾಯಿ ಮಾತನಾಡುತ್ತಿರಲಿಲ್ಲ; ಕಣ್ಣುಗಳು ಮಾತಾಡುತ್ತಿದ್ದವು.

ಯಾವ ಬಸ್ ನಿಲ್ದಾಣದಲ್ಲೇ ಆಗಲಿ, ಖಾಲಿ ಬಸ್ಸು ಎಂದು ತಾನೇ ಬರುತ್ತದೆ? ಆದರೇನೊ ತಿಳಿಯದು, ಈ ದಿನ ಹವಾನಿಯಂತ್ರಿತ ವೋಲ್ವೊವೊಂದು ಪೀಕ್ ಟೈಮ್ ನಲ್ಲೇ ಖಾಲಿ. ಪ್ರತಿದಿನ ತೂರಾಡಿಕೊಂಡು ಹೋಗುತ್ತಿದ್ದಾಗ, ಕೊನೆಯ ಸಮಯದಲ್ಲಿ ಮೂಲೆಯಲ್ಲಿ ಸೀಟು ಸಿಗುತ್ತಿತ್ತು. ಆಗ ಯಾವ ಸೀಟು ಸಿಕ್ಕಿದ್ದರೆ ಚೆನ್ನಾಗಿತ್ತೆಂದು ಅಂದುಕೊಳ್ಳುತ್ತಿದ್ದನೋ, ಇಂದು ಅಲ್ಲಿಯೇ ಕುಳಿತ. ಒಂದು ಕ್ಷಣ, ತಾನು ನಿತ್ಯವೂ ಹಂತ ಹಂತವಾಗಿ ಮನದಲ್ಲೇ ಡಿಸೈನ್ ಮಾಡುತ್ತಿದ್ದ ’ಸೀಟ್ ಅಲೊಕೇಷನ್’ ಅಲ್ಗಾರಿಥಮ್ ಇಂದಿನ ತರಹದ ದಿನದಲ್ಲಿ ವ್ಯರ್ಥವಾಗುತ್ತದೆ ಎನಿಸಿತು.

ಅದರ ವಿವರ ಹೀಗಿತ್ತು: "ಎಲ್ಲಾ ಸೀಟುಗಳು ಮೊದಲು ಮಾಮೂಲಿಯಂತೆಯೇ ಭರ್ತಿಯಾಗುತ್ತವೆ. ನಂತರ, ಮುಂದಿನ ನಿಲ್ದಾಣ ತಲುಪಿದಾಗ ರೆಕಾರ್ಡೆಡ್ ವಾಯ್ಸ್ ನಿಂದ ’ಪ್ರಯಾಣಿಕರೆ, ಎಲ್ಲಾ ಸೀಟ್ ಭರ್ತಿಯಾಗಿರುವುದರಿಂದ ದಯವಿಟ್ಟು ನೂಕುನುಗ್ಗಲು ಮಾಡದೆ, ಒಬ್ಬೊಬ್ಬರಾಗಿಯೆ ಹತ್ತಿ, ಪೂರ್ತಿ ಹಿಂದಕ್ಕೆ ಹೋಗಿ’ ಎಂಬ ಮೆಸೇಜ್ ಕೇಳಿ ಬರಬೇಕು. ನಿಂತ ಪ್ರಯಾಣಿಕರಿಗೆಲ್ಲಾ ಕಂಡಕ್ಟರ್ ತನ್ನ ’ಹ್ಯಾಂಡ್ ಹೆಲ್ಡ್ ಕಂಪ್ಯೂಟರ್’ನಿಂದ ಪ್ರಯಾಣ ಮತ್ತು ದರದ ವಿವರಗಳ ಜೊತೆಗೆ ಎಸ್-1, ಎಸ್-2,.. ಎಂದು ಬರೆದ ಟಿಕೆಟ್ ಹಂಚಬೇಕು. ಇಲ್ಲಿ ’ಎಸ್’ ಎಂದರೆ ’ಸ್ಲೀಪರ್’ ಎಂದಲ್ಲ; ’ಸ್ಟ್ಯಾಂಡಿಂಗ್’ ಎಂದು!

ಬಸ್ ನಿಲ್ದಾಣದಲ್ಲೇ ಮಾರ್ಗದ ಅನುಸಾರವಾಗಿ ಕ್ಯೂ ನಿಲ್ಲುವುದರಿಂದ ಯಾರು ಮೊದಲು ಹತ್ತುತ್ತಾರೋ ಅವರೇ ’ಎಸ್-1’ ಆಗುತ್ತಾರೆ. ವೃದ್ಧರಿಗೆ ಮತ್ತು ಅಂಗವಿಕಲರಿಗೆ ’ರಿಸರ್ವ್ಡ್ ಸೀಟ್ಸ್’ ಇಡಬಹುದು. ಸಹಜವಾಗಿಯೆ ಹೆಂಗಸರಿಗೂ ಇದು ಅನ್ವಯವಾಗುತ್ತದೆ. ಪ್ರತ್ಯೇಕ ಕ್ಯೂ. ಮುಂದಿನ ಸೀಟ್ ಎಲ್ಲಿ ಖಾಲಿಯಾಗುತ್ತದೆ ಮತ್ತು ಆ ಸೀಟಿನ ಸಂಖ್ಯೆಯನ್ನು ತಿಳಿಸಿ, ’ಎಸ್-1’ ಪ್ರಯಾಣಿಕರಾದ... ರವರು ಕೂಡಲೇ ಆ ಸೀಟಿನ ಬಳಿ ಹೋಗುವಂತೆ ’ವಾಯ್ಸ್ ಸಿಸ್ಟಮ್' ಮೂಲಕ ತಿಳಿಸಬೇಕು. ಈ ಮಾಹಿತಿಯೆಲ್ಲಾ ಟಿಕೆಟ್ ಕೊಡುವಾಗ ’ಹ್ಯಾಂಡ್ ಹೆಲ್ಡ್ ಕಂಪ್ಯೂಟರ್’ನ ಅತ್ಯಾಧುನಿಕ ಮೆಮೋರಿ ಚಿಪ್ ಗಳಲ್ಲಿ ’ಸೇವ್’ ಮಾಡಬೇಕು. ಕೂಡುವ ಮುನ್ನ, ಪ್ರಯಾಣಿಕರು ತಮ್ಮ ಟಿಕೆಟನ್ನು ಸೀಟಿನ ಬಳಿಯಿರುವ ’ಬಾರ್ಕೋಡ್ ರೀಡರ್’ಗೆ ತೋರಿಸಿ ವೆರಿಫೈ ಮಾಡಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸಣ್ಣಕಥೆ ಸುದ್ದಿಗಳುView All

English summary
The life will never be how we expect it to be. Getting up in the morning, catch the ever crowded bus, get scolded by your boss, rejection by the lover... But, just for a change, if the whole world acts as per our wish? Read one, a short story by Gururaj Rao Desai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more