ಬೇಗ, ಬಂದು ಬಿಡೆ ಅಮ್ಮ ಬೆಂಗಳೂರಿಗೆ..

ಮನಸ್ಸಿಗೆ ಬೇಕಾದ ಹೆಂಗಳೆಯರ ಗುಂಪಿದೆ
ರುಚಿಗೆ ತಕ್ಕುದಾದ ಪುಸ್ತಕ ಭಂಡಾರಗಳಿವೆ
ಹೊಟ್ಟೆಗಾಗಿ ಮಿಗುವಷ್ಟು ಎಂಟಿಆರ್ ದರ್ಶಿನಿಗಳಿವೆ
ಟ್ರ್ಯಾಫಿಕ್ಕನ್ನು ಮೌನಗೊಳಿಸುವ ಬಾಲ್ಕನಿಗಳಿವೆ
ಹಸಿರು ಹೂ ಕುಂಡಗಳಲ್ಲಿ ಪಾರಿವಾಳಗಳ ಮೊಟ್ಟೆಗಳಿವೆ
ಸತ್ಸಂಗ ಭಜನೆಗಳು ಗಲ್ಲಿಗಲ್ಲಿಗಳಲ್ಲಿವೆ
ಮಧುಮೇಹದ ಮಂಡಿ ನೋವಿಗೆ ಮದ್ದೂ ಇಲ್ಲಿದೆ
ಬೆಳಗಿನಲ್ಲಿ ಬೆವರಿಸುವ ಬಿಸಿಲಿದೆ
ಸಂಜೆಗೊಂದಿಷ್ಟು ಬೊಗಸೆ ಮಳೆ ಇದೆ
ಅಮೆರಿಕೆಯ ನಿನ್ನ ಮಗನ ಇಲ್ಲೇ ತೋರುವ ಇಂಟರ್‍ನೆಟ್ ಇದೆ
ಮನೆಯೊಂದು ಮೂರು ಬಾಗಿಲು ಮಾಡಿದ ಪ್ಲಾಸ್ಮ ಸ್ಕ್ರೀನ್ ಇದೆ
ಸಂಜೆಗೊಂದಿಷ್ಟು ಬೊಗಸೆ ಮಳೆ ಇದೆ
ಅಮೆರಿಕೆಯ ನಿನ್ನ ಮಗನ ಇಲ್ಲೇ ತೋರುವ ಇಂಟರ್‍ನೆಟ್ ಇದೆ
ಮನೆಯೊಂದು ಮೂರು ಬಾಗಿಲು ಮಾಡಿದ ಪ್ಲಾಸ್ಮ ಸ್ಕ್ರೀನ್ ಇದೆ
ಪಕ್ಕದ ಮನೆ ಸುದ್ದಿಗೆ ಇಂಟರ್ ಕಾಂ ಇದೆ
ಗುಳೇದ ಗುಡ್ಡದ ರವಿಕೆ ಕಣವಿದೆ
ಮಂಗಳಗಿರಿಯಿಂದ ಹತ್ತಿ ಸೀರೆ ಬಂದಿದೆ
ನೀನಿಲ್ಲದ ಇಲ್ಲಿ ಮತ್ತೆಲ್ಲವೂ ಇದೆ
ಇರುವುದೆಲ್ಲವ ಬಿಟ್ಟು ದೂರದೂರಲ್ಲಿ ಎದೆಹಿಡಿದು ಏಕೆ ಕುಳಿತಿರುವೆ
ಬಂದುಬಿಡೆ ಅಮ್ಮ ಬೆಂಗಳೂರಿಗೆ!












Click it and Unblock the Notifications