ಮಾತನಾಡಿ ಮೋಡಗಳೆ

ಮುಂದೆ ಸಾಗುವ ಮುನ್ನ
ಒಂದಿಷ್ಟು ಮಳೆಹನಿಯ ಸುರಿಸಿ ಸಾಗಿ
ಮುದುಡಿದ ಮಲ್ಲಿಗೆಗೆ ಮುದವ ನೀಡಿ
ಬಾಡಿದ ಬನಕೆ ಭವ್ಯ ಕಳೆ ನೀಡಿ
ಬಾಯಾರಿದ ಭುವಿಗೆ ತಣೆವ ನೀಡಿ
ಧರೆಯು ರವಿಯ ಬಿಸಿಯುಸಿರಿಗೆ ಬರುಡಾಗುತಿದೆ
ಸಂಜೆಗತ್ತಲ ನೋಟವೆಲ್ಲ ಕರಾಳ ಬದುಕಾಗುತಿದೆ
ಹಸಿರೆಲ್ಲವು ಹಸಿದವರ ಮಕ್ಕಳಂತೆ ಬಾಡುತಿವೆ
ಭಾಸ್ಕರನ ಬಿಸಿಲಿಗೆ ಬರವಿಲ್ಲದಂತಾಗಿದೆ
ಕಾಡೆಲ್ಲವು ಕೊರಗಿ ಕೊರಡಾಗಿದೆ
ಬಾನೆಲ್ಲವು ಭಸ್ಮದ ಧೂಮದಂತೆ ಬಿಳುಚು ಬಿಳುಚಾಗಿದೆ
ಹಟಕ್ಕೆ ಬಿದ್ದು ಅಳುವ ಮಗುವಿನಂತೆ
ನವರ್ರಾತಿಯಲ್ಲಿ ಭೋರ್ಗರೆವ ಆಸೆಯಂತೆ
ಜೀವಾಣು ಜೀವಗಳಿಗೆಲ್ಲ ಜೀವದನಿಯಂತೆ
ಒಂದೊಷ್ಟು ಹೊತ್ತು ನಿಂತು ಮಳೆಯ ಸುರಿಸು
ಬುವಿಯೆಲ್ಲ ತೊಯ್ದು ನಮ್ಮ ಮೊಗದಲ್ಲಿ ನಗೆಯ ಸುರಿಸು
ಧಮಧಮನೆ ಸರಿದು ಧರೆಯೆಲ್ಲ ಹರಿದು, ನಮ್ಮನು ಬದುಕಲರಸು












Click it and Unblock the Notifications